Advertisement

ಸಣ್ಣ ಕಥೆಗಳು: ಮಗನ ಸಮಾಧಿ

01:47 PM Jul 31, 2023 | Team Udayavani |

                                                                                         ಅನುಗ್ರಹ
ನಾನು ಏನೇ ಮಾಡಿದರೂ ಅದರಲ್ಲೊಂದು ವಿಶೇಷತೆ ಇರಬೇಕು. ಅದಕ್ಕಾಗಿ ತಾನು ಗಳಿಸಿಟ್ಟ ಹಣವೆಲ್ಲಾ ಖರ್ಚಾದರೂ ಚಿಂತೆಯಿಲ್ಲ ಎಂಬುದು ಸುಧಾಕರನ ವಾದವಾಗಿತ್ತು. ಭಾರೀ ಸಂಬಳದ ಉದ್ಯೋಗವಿದ್ದ ಕಾರಣ, ಅದ್ದೂರಿಯಾಗಿ ಮದುವೆಯಾಗಬೇಕೆಂಬುದು ಅವನ ಬಹುದಿನದ ಆಸೆಯಾಗಿತ್ತು.

Advertisement

ಹೀಗಿದ್ದಾಗಲೇ ಒಮ್ಮೆ ದಾರಿಯಲ್ಲಿ ಅವನ ಶಾಲಾ ಶಿಕ್ಷಕರು ಸಿಕ್ಕರು. ದುಡಿಯುವಾಗ ಉಳಿತಾಯ ಮಾಡದೇ ಬಂದ ಹಣವನ್ನೆಲ್ಲಾ ಖರ್ಚುಮಾಡಿ, ಈಗ ಹೆಂಡತಿಯ ಆಸ್ಪತ್ರೆ ಖರ್ಚಿಗಾಗಿ ಇಳಿ ವಯಸ್ಸಿ­ ನಲ್ಲೂ ದುಡಿಯಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುವು­ದನ್ನು ಸಂಕಟದಿಂದ ಹೇಳಿ­ಕೊಂಡರು.

ಗುರುಗಳ ಆ ಅವಸ್ಥೆ, ಸುಧಾಕರನ ಕಣ್ಣು ತೆರೆಸಿತು. ಬಹಳಷ್ಟು ಚಿಂತಿಸಿದ ಆತ, ಕಡಿಮೆ ಖರ್ಚಿನಲ್ಲಿ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಿ, ಅದರಿಂದ ಉಳಿದ ಹಣವನ್ನು ತಮ್ಮ ಶಿಕ್ಷಕರ ಮಡದಿಯ ಆಸ್ಪತ್ರೆ ಖರ್ಚಿಗೆಂದು ನೀಡಿ, ಗುರುವಿನ ಅನುಗ್ರಹಕ್ಕೆ ಪಾತ್ರನಾದ.

                                                                                       ಮಗನ ಸಮಾಧಿ

ಆಕೆ ಅನಕ್ಷರಸ್ಥೆ, ಬಡವಿ. ಮನೆಯ ಮುಂದಿನ ರಸ್ತೆಬದಿಯಲ್ಲಿ ಆಲದ ಸಸಿಯನ್ನು ನೆಟ್ಟು ಬೆಳೆಸಿದಳು. ಅವಳೂ ಬೆಳೆದು ದೊಡ್ಡವಳಾದಾಗ ಮದುವೆಯೂ ಆಗಿ ತವರೂರಿನಿಂದ ದೂರ ಹೋದಳು. ಇತ್ತ ಸರ್ಕಾರ ರಸ್ತೆ ಅಗಲೀಕರಣದ ನೆಪವೊಡ್ಡಿ ಆಲದ ಮರವನ್ನು ಕಡಿದುಹಾಕಿತು.

Advertisement

ಅತ್ತ ಅವಳ ಗಂಡ ಮತ್ತು ಇದ್ದೊಬ್ಬ ಮಗನೂ ಸಹ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದರು. ಬೇಸರಗೊಂಡ ಆಕೆ ಗಂಡನ ಮನೆಯ ಋಣ ಕಳೆದುಕೊಂಡು ತವರೂರಿಗೆ ಬಂದಳು. ಈಗ, ದಿನವೂ ಬೆಳಗ್ಗೆ ತಾನು ನೆಟ್ಟ ಮರವಿದ್ದ ಜಾಗಕ್ಕೆ ತೆರಳಿ ಡಾಂಬರು ರಸ್ತೆಯ ಮೇಲೆ ಹೂವನ್ನಿಟ್ಟು ಕೈಮುಗಿಯುತ್ತಾಳೆ. ಅದನ್ನು ತನ್ನ ಮಗನ ಸಮಾಧಿ ಎಂದು ಹೇಳಿಕೊಂಡು ತಿರುಗುತ್ತಾಳೆ.

Advertisement

Udayavani is now on Telegram. Click here to join our channel and stay updated with the latest news.

Next