ವಿದ್ಯೆಯನ್ನೂ ಕಲಿಸುವಂಥ ಕೋರ್ಸ್‌ಗೆ ಮಗನನ್ನು ಸೇರಿಸಬೇಕು. ಯಶಸ್ವಿ ಉದ್ಯಮಿಯಾಗುವುದು ಹೇಗೆ ಎಂದು ಅವನಿಗೆ ಎಲ್ಲವನ್ನೂ ಹೇಳಿಕೊಡಬೇಕು. ತಂದೆಗೆ ತಕ್ಕ ಮಗ ಎಂದು ಲೋಕದ ಜನರೆಲ್ಲಾ ಮೆಚ್ಚಿ ಮಾತಾಡುವ ರೀತಿಯಲ್ಲಿ ಮಗನನ್ನು ಬೆಳೆಸಬೇಕು ಎಂಬುದು ಅವನ ಉದ್ದೇಶವಾಗಿತ್ತು.
Advertisement
ಆತ ಹಲವು ಬಗೆಯ ಲೆಕ್ಕಾಚಾರಗಳನ್ನು ಮಾಡಿಕೊಂಡೇ ಒಂದು ಯೂನಿವರ್ಸಿಟಿಗೆ ಬಂದ. ಮಗನನ್ನು ಅಲ್ಲಿ ಪದವಿ ಕೋಸ್ ìಗೆ ಸೇರಿಸುವುದು ಅವನ ಉದ್ದೇಶವಾಗಿತ್ತು. ಯೂನಿವರ್ಸಿಟಿಯಲ್ಲಿ ಪದವಿ ಕೋರ್ಸ್‌ಗಳು ಅದಕ್ಕೆ ವಿಧಿಸಲಾಗುವ ಶುಲ್ಕ ಹಾಗೂಒಂದೊಂದು ಕೋರ್ಸ್ ಮುಗಿಯಲು ಇದ್ದ ಅವಧಿಯ ಬಗ್ಗೆ ತಿಳಿದು ಅವನಿಗೆ ಅಸಹನೆ ಉಂಟಾಯಿತು. ಕುಲಪತಿಗಳ ಮುಂದೆ
ಕುಳಿತು ಅದನ್ನೇ ಹೇಳಿಕೊಂಡ: “ಸಾರ್, ಒಂದೊಂದು ಪದವಿ ಕೋರ್ಸ್ ಮುಗಿಸಲು ಮೂರು, ನಾಲ್ಕು, ಐದು ವರ್ಷಗಳಷ್ಟು ದೀರ್ಘ ಅವಧಿ ತಗುಲುತ್ತವೆ. ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಕಲಿಕೆಯ ಸಮಯವನ್ನು ಹೆಚ್ಚಿಸುವ ಮೂಲಕ, ಅಂದರೆ ಒಂದೊಂದು
ದಿನಕ್ಕೆ ಹದಿನಾಲ್ಕು ಗಂಟೆಗಳ ಕಾಲ ಪಾಠ ಹೇಳುವ ಮೂಲಕ ಒಂದು ಅಥವಾ ಎರಡೇ ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಪದವೀಧರರನ್ನಾಗಿ ರೂಪಿಸಲು ಸಾಧ್ಯವಿಲ್ಲವೇ? ಅಂಥದೊಂದು ಪ್ರಯೋಗವನ್ನು ಈ ವರ್ಷ ನನ್ನ ಮಗನ ಮೇಲೆಯೇ
ಮಾಡಬಾರದೇಕೆ?’.
ಭಗವಂತನ ಸೃಷ್ಟಿ ಎಂದು ಹಿರಿಯರು ಹೇಳಿರುವುದನ್ನು ನೀವೂ ಕೇಳಿಯೇ ಇರುತ್ತೀರಿ. ಒಂದು ಚಿಕ್ಕ ಸಸಿ, ಮರವಾಗಿ ಬೆಳೆದು
ಮಾವಿನ ಹಣ್ಣಿನ ಫಲ ನೀಡಲು ಭರ್ತಿ 12 ವರ್ಷಗಳ ಕಾಲಾವಕಾಶ ಬೇಕು. ಹಾಗೆಯೇ ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಗುವ ಗ್ಲಾಸ್
ತಯಾರಾಗಲು ಕೇವಲ ಎರಡು ತಿಂಗಳ ಅವಧಿ ಸಾಕು. ನಿಮ್ಮ ಮಗ, ನೂರು ಮಂದಿಯ ಹಸಿವು ತಣಿಸುವ ಮಾವಿನ ಮರ ಆಗಬೇಕೋ ಅಥವಾ ಒಂದು ಗ್ಲಾಸ್ ಆಗಿ ಉಳಿದರೆ ಸಾಕೋ ನೀವೇ ನಿರ್ಧರಿಸಿ’! ಗೀತಾಂಜಲಿ