Advertisement
ಶ್ರೀಗಳಿಗೆ ವಿಷಪ್ರಾಸನ ಮಾಡಲಾಯ್ತೇ…??ಶಿರೂರು ಶ್ರೀಗಳ ದಿಢೀರ್ ಅನಾರೋಗ್ಯ ಮತ್ತು ನಿಧನ ಮಠದ ಭಕ್ತರಲ್ಲಿ ಹಾಗೂ ಜನಸಾಮಾನ್ಯರಲ್ಲಿ ಈ ಒಂದು ಶಂಕೆ ಇದೀಗ ವ್ಯಕ್ತವಾಗಿದೆ. ಇದಕ್ಕೆ ಪುಷ್ಠಿ ನೀಡಿದ್ದು ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ ಇಲ್ಲಿನ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರ ಹೇಳಿಕೆ. ಮಾಧ್ಯಮದವರ ಜೊತೆಯಲ್ಲಿ ಮಾತನಾಡಿದ ಅವಿನಾಶ್ ಶೆಟ್ಟಿ ಅವರು, ಶಿರೂರು ಸ್ವಾಮೀಜಿಯವರ ಆಹಾರದಲ್ಲಿ ವಿಷಪ್ರಾಸನವಾಗಿರುವ ಸಾದ್ಯತೆಗಳಿವೆ ಎಂಬ ಮಾತನ್ನು ಹೇಳಿದ್ದಾರೆ. ಸ್ವಾಮೀಜಿಯವರ ಪಾರ್ಥೀವ ಶರೀರವನ್ನು ಇದೀಗ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ, ಇದರ ವರದಿ ಬಂದ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಲಿದೆ.
ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ವಿಟ್ಲಪಿಂಡಿ ಉತ್ಸವಗಳು ಉಡುಪಿಯ ನಾಡಹಬ್ಬವೆಂದೇ ಜನಮನ್ನಣೆ ಗಳಿಸಿವೆ. ಈ ಸಂದರ್ಭದಲ್ಲಿ ಪ್ರತೀವರ್ಷ ಉಡುಪಿ ನಗರದಲ್ಲಿ ಮತ್ತು ರಥಬೀದಿ ಪರಿಸರದಲ್ಲಿ ವಿವಿಧ ವೇಷಗಳು ಮೇಳೈಸುತ್ತಿದ್ದವು. ಈ ಸಂದರ್ಭದಲ್ಲಿ ರಥಬೀದಿಯ ವಿವಿಧ ಕಡೆಗಳಲ್ಲಿ ವೇಷಧಾರಿಗಳ ಪ್ರದರ್ಶನ ಮತ್ತು ಪುರಸ್ಕಾರಗಳು ನಡೆಯುತ್ತಿರುತ್ತದೆ. ಇದರಲ್ಲಿ ಯಾವಾಗಲೂ ಶಿರೂರು ಮಠದ ಕಡೆಯಿಂದ ನಡೆಯುತ್ತಿದ್ದ ವೇಷಗಳ ಪ್ರದರ್ಶನ ಜನಾಕರ್ಷಣೆಯ ಕೇಂದ್ರವಾಗಿರುತ್ತಿತ್ತು. ಈ ಸಂದರ್ಭದಲ್ಲಿ ಹಿರಿ ಕಿರಿಯ ವೇಷಧಾರಿಗಳೆಂಬ ಬೇಧವನ್ನು ತೋರದೆ ಎಲ್ಲರಿಗೂ ತಮ್ಮ ವೇದಿಕೆಯಲ್ಲಿ ವೇಷಗಳ ಪ್ರದರ್ಶನಕ್ಕೆ ಅವಕಾಶ ನೀಡಿ ಸೂಕ್ತ ನಗದು ಪುರಸ್ಕಾರವನ್ನು ತಮ್ಮ ಕೈಯಾರೆ ನೀಡುತ್ತಿದ್ದರು. ಸುಮಾರು 5-6 ಗಂಟೆಗಳ ಕಾಲ ವೇದಿಕೆಯಲ್ಲೇ ಕುಳಿತು ವೇಷಧಾರಿಗಳ ಪ್ರದರ್ಶನವನ್ನು ಕಂಡು ಮಗುವಿನಂತೆ ಸಂತೋಷಪಟ್ಟು ಅವರಿಗೆ ಬಹುಮಾನ ನೀಡಿ ಕಳುಹಿಸುತ್ತಿದ್ದ ವಿಶಿಷ್ಠ ಗುಣ ಶ್ರೀಗಳದ್ದಾಗಿತ್ತು.
Related Articles
Advertisement