ಧಾರವಾಡ: ರಸ್ತೆ, ಫುಟ್‌ಪಾತ್ ಸೇರಿದಂತೆ ವಾಹನ ದಟ್ಟನೆ ಪ್ರದೇಶದಲ್ಲಿ ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ಎದ್ದು ನಿಂತಿರುವ 20ಕ್ಕೂ ಹೆಚ್ಚು ಅಂಗಡಿಗಳನ್ನು ಪಾಲಿಕೆ ಸಿಬ್ಬಂದಿ ಶುಕ್ರವಾರ ಯಂತ್ರಗಳ ಸಹಾಯದಿಂದ ತೆರವುಗೊಳಿಸಿದರು.
ಇಲ್ಲಿನ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣ ಎದುರಿಗಿನ ಬಸ್ ನಿಲ್ದಾಣದ ಸುತ್ತಮುತ್ತ, ಕ್ರೀಡಾಂಗಣದ ಮುಂಭಾಗ ಹಾಗೂ ರಂಗಾಯಣ ರಸ್ತೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳು ಅನಧಿಕೃತವಾಗಿ ತಲೆ ಎತ್ತಿದ್ದವು. ಈ ಮೂಲಕ ಅನಧಿಕೃತ ಮಳಿಗೆ ವ್ಯಾಪಾರಸ್ಥರಿಗೆ ಪಾಲಿಕೆ ಅಧಿಧಿಕಾರಿಗಳು ಬಿಸಿ ಮುಟ್ಟಿಸುವ ಕೆಲಸ ಮಾಡಿದರು.
ಬೆಳಿಗ್ಗೆ 6 ಗಂಟೆ ಸುಮಾರಿಗೆ ಪಾಲಿಕೆಯ ವಲಯ ಕಚೇರಿ 3ರ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ ಹಾಗೂ ಎಸ್.ಜಿ.ಬೇವೂರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡ ಪಾಲಿಕೆ ಸಿಬ್ಬಂದಿ ಸುಮಾರು ಹೊತ್ತು ಕಾರ್ಯಾಚರಣೆ ನಡೆಸುವ ಮೂಲಕ ಅಂಗಡಿಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು.
ರಸ್ತೆ ಬದಿಯಲ್ಲಿನ ಲೀಡಕರ್ ಮಳಿಗೆ ಹೊರತುಪಡಿಸಿ, ಸಾಯಿ ಟಿ ಸ್ಟಾಲ್, ಶೈನ್ ಪೊÉàರೆಸ್ಟ್, ಡಿಲೆಕ್ಸ್ ಫರ್ನಿಚರ್ ವರ್ಕ್ಸ್ ಸ್ನೇಹಲ್ ಹೇರ್ ಕಟ್ಟಿಂಗ ಸಲೂನ್, ಪುಸ್ತಕ ಮಳಿಗೆ ಸೇರಿ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಿದರು. ಕೆಲವು ಮಾಲೀಕರು ಸ್ವಯಂ ಪ್ರೇರತವಾಗಿ ತೆರವುಗೊಳಿಸಲು ಮುಂದಾದ ದೃಶ್ಯಗಳು ಕಂಡು ಬಂದವು.
ಕೆಲವು ಮಾಲೀಕರು ಕಾಂಕ್ರೀಟ್ ಹಾಕಿ ಮಳಿಗೆ ಭದ್ರಪಡಿಸಿದ ಕಾರಣಕ್ಕೆ ಜೆಸಿಬಿ ಯಂತ್ರ ತರಿಸಿ ಅಂಗಡಿಗಳನ್ನು ತೆರವುಗೊಳಿಸಿದ ಪ್ರಸಂಗ ನಡೆಯಿತು. ಈ ವೇಳೆಯಲ್ಲಿ ಜೆಸಿಬಿ ಸದ್ದಿಗೆ ಡಬ್ಟಾ ಅಂಗಡಿಗಳು ನಜ್ಜುಗುಜ್ಜಾಗಿದ್ದು ಕಂಡು ಬಂದವು. ನಂತರ ಪಾಲಿಕೆಯ ಸಿಬ್ಬಂದಿ ತೆರವುಗೊಳಿಸಿದ ಸಾಮಗ್ರಿಯನ್ನು ಟ್ರಾಕ್ಟರ್ ನಲ್ಲಿ ಸಾಗಿಸಿದರು. ಕಾರ್ಯಾಚರಣೆಯ ವೇಳೆ ಕೆಲವು ವ್ಯಾಪಾರಸ್ಥರು ಅಂಗಡಿಗಳ ತೆರವುಗೊಳಿಸದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರಲ್ಲದೇ, ವಿರೋಧ ವ್ಯಕ್ತಪಡಿಸಿ ದರು.
ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್, ಫುಟ್‌ಬಾತ್‌ನಲ್ಲಿ ಮಳಿಗೆ ಸ್ಥಾಪಿಸಿ ವ್ಯಾಪಾರ ಮಾಡಲು ಪಾಲಿಕೆಯಿಂದ ಪರವಾನಗಿ ಪಡೆದಿರುವುದು ಮೊದಲ ಅಪರಾಧ. ಹೀಗಿದ್ದಾಗ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಇನ್ನು ಅಪರಾಧ. ನಮ್ಮ ಕೆಲಸ ಮಾಡಲು ನಮಗೆ ಬಿಡಿ. ನೀವೇನಿದ್ದರೂ ಪಾಲಿಕೆಯ ಹಿರಿಯ ಅಧಿಧಿಕಾರಿಗಳ ಜೊತೆ ಚರ್ಚಿಸಿ ಎಂದು ಸ್ಪಷ್ಟಪಡಿಸಿದರು.