Advertisement
ಪೊಲೀಸರು ಆಗಾಗ್ಗೆ ಪ್ರಕರಣಗಳನ್ನು ದಾಖಲಿಸುವುದು, ವ್ಹೀಲ್ ಲಾಕ್ ಮಾಡು ವುದು, ಎಚ್ಚರಿಕೆಗಳನ್ನು ನೀಡುವುದು ಮೊದಲಾದವುಗಳನ್ನು ನಡೆಸುತ್ತಿದ್ದರೂ ಅದರಿಂದ ಹೆಚ್ಚು ಪರಿಣಾಮ ಉಂಟಾಗಿಲ್ಲ. ಪಾದಚಾರಿಗಳ ಬಳಕೆಗೆ ಫುಟ್‌ಪಾತ್‌ಗಳು ಸಿಗದೆ ಅವರು ಅಪಾಯಕಾರಿಯಾಗಿ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಗರದ ಹಲವೆಡೆ ಇದೆ.
ವಾಹನಗಳ ಪಾರ್ಕಿಂಗ್‌ಗೆ ಕಟ್ಟಡಗಳಲ್ಲಿ ವ್ಯವಸ್ಥೆ ಮಾಡದಿರುವುದು ವಾಹನಗಳನ್ನು ಫುಟ್‌ಪಾತ್ ಮೇಲೆ ನಿಲುಗಡೆ ಮಾಡುವುದಕ್ಕೆ ಮುಖ್ಯ ಕಾರಣ. ಇದಕ್ಕೆ ಪೂರಕವೆಂಬಂತೆ ಫುಟ್‌ಪಾತ್‌ಗಳು ಅನೇಕ ಕಡೆ ರಸ್ತೆಗೆ ಸಮಾನಾಂತರವಾಗಿವೆ. ಹಾಗಾಗಿ ಸುಲಭವಾಗಿ ವಾಹನಗಳು ಫುಟ್‌ಪಾತ್ ಮೇಲೇರುತ್ತವೆ. ಕೆಲವು ಕಡೆ ಫುಟ್‌ಪಾತ್‌ಗಳನ್ನು ರಸ್ತೆಯಿಂದ ಸುಮಾರು ಅರ್ಧ ಅಡಿ, ಒಂದು ಅಡಿಯಷ್ಟು ಎತ್ತರಕ್ಕೆ ನಿರ್ಮಿಸಲಾಗಿದೆ. ಇಂತಹ ಕಡೆಗಳಲ್ಲಿ ವಾಹನಗಳು ಫುಟ್‌ಪಾತ್ ಮೇಲೇರುವುದು ಸಾಧ್ಯವಾಗುತ್ತಿಲ್ಲ. ಬೊಲಾರ್ಡ್ ನಿರ್ಮಾಣ ನಿರ್ಲಕ್ಷ್ಯ
Related Articles
Advertisement
ವ್ಯಾಪಕವಾಗುತ್ತಿದೆ ಅತಿಕ್ರಮಣನಗರದ ರಥಬೀದಿ, ಹಂಪನಕಟ್ಟೆ, ಲಾಲ್‌ಬಾಗ್, ಬಿಜೈ, ಕಂಕನಾಡಿ ಸಹಿತ ಪ್ರಮುಖ ಜಂಕ್ಷನ್‌ಗಳ ಬಳಿಯಲ್ಲಿ, ಜನರ ಓಡಾಟ ಹೆಚ್ಚಾಗಿರುವ ಸ್ಥಳಗಳಲ್ಲಿಯೇ ಫುಟ್‌ಪಾತ್‌ಗಳನ್ನು ವಾಹನಗಳು ಅತಿಕ್ರಮಿಸಿಕೊಂಡಿವೆ. ಪ್ರಕರಣ ದಾಖಲು ನಿರಂತರ
ಈಗಾಗಲೇ ಸಾಕಷ್ಟು ಬಾರಿ ಮೈಕ್ ಮೂಲಕ ಎಚ್ಚರಿಕೆ ನೀಡಲಾಗಿದೆ. ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ಕೂಡ ಅಳವಡಿಸಲಾಗಿದೆ. ಆದರೂ ಅನೇಕ ಕಡೆ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳನ್ನು ಫುಟ್‌ಪಾತ್‌ಗಳ ಮೇಲೆಯೇ ಪಾರ್ಕಿಂಗ್ ಮಾಡುತ್ತಿರುವುದು ಕಂಡುಬರುತ್ತಿದೆ. ಈ ರೀತಿ ನಿಯಮ ಉಲ್ಲಂಗಿಸುವ ವಾಹನಗಳ ಮೇಲೆ ನಿರಂತರವಾಗಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತಿದೆ.
-ನಜ್ಮಾ ಫಾರೂಕಿ, ಎಸಿಪಿ, ಸಂಚಾರ ವಿಭಾಗ ಮಂಗಳೂರು ನಗರ. 8 ತಿಂಗಳಲ್ಲಿ 908 ಪ್ರಕರಣ ದಾಖಲು
ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸಿರುವುದಕ್ಕೆ 8 ತಿಂಗಳಲ್ಲಿ 908ಕ್ಕೂ ಅಧಿಕ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ ನೋ ಪಾರ್ಕಿಂಗ್ ಸ್ಥಳಗಲ್ಲಿ ಪಾರ್ಕಿಂಗ್ ಮಾಡಿರುವುದಕ್ಕೆ 2,160 ಪ್ರಕರಣ ದಾಖಲಿಸಲಾಗಿದೆ. ಪಾಲಿಕೆಯವರು ನೋ ಪಾರ್ಕಿಂಗ್, ಪಾರ್ಕಿಂಗ್ ಜಾಗ ಗುರುತಿಸಿ ನೋಟಿಫಿಕೇಶನ್ ಮಾಡಬೇಕು. ಅಲ್ಲಿ ಪೊಲೀಸರು ಪರಿಶೀಲನೆ ನಡೆಸಿ ಅನುಮತಿ ನೀಡುತ್ತಾರೆ. ಅನಂತರ ಅಲ್ಲಿ ಸೂಕ್ತ ಸೂಚನಾ ಫಲಕ ಅಳವಡಿಸಬೇಕು. ಅದಕ್ಕೆ ಪೂರಕವಾಗಿ ನಾವು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.