Advertisement

ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌: ಮೆಹುಲಿ-ತುಷಾರ್‌ ಜೋಡಿಗೆ ಚಿನ್ನ

11:19 PM Jul 13, 2022 | Team Udayavani |

ದಕ್ಷಿಣ ಕೊರಿಯಾ: ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ದ್ವಿತೀಯ ಬಂಗಾರಕ್ಕೆ ಗುರಿ ಇರಿಸಿದೆ. 10 ಮೀ. ಏರ್‌ ರೈಫ‌ಲ್‌ ಮಿಕ್ಸೆಡ್‌ ತಂಡ ಸ್ಪರ್ಧೆಯಲ್ಲಿ ಮೆಹುಲಿ ಘೋಷ್‌-ಶಾಹು ತುಷಾರ್‌ ಮಾನೆ ಸ್ವರ್ಣ ಸಂಭ್ರಮ ಆಚರಿಸಿದರು.

Advertisement

10 ಮೀ. ಏರ್‌ ಪಿಸ್ತೂಲ್‌ ಮಿಶ್ರ ಸ್ಪರ್ಧೆಯಲ್ಲಿ ಭಾರತದ ಮತ್ತೊಂದು ಜೋಡಿಯಾದ ಪಲಕ್‌-ಶಿವ ನರ್ವಾಲ್‌ ಅವರಿಗೆ ಕಂಚಿನ ಪದಕ ಒಲಿಯಿತು.

ಮೆಹುಲಿ-ತುಷಾರ್‌ ಸೇರಿಕೊಂಡು ಹಂಗೇರಿಯ ಎಸ್ಟರ್‌ ಮೆಝರಸ್‌-ಇಸ್ತಾವಾನ್‌ ಪೆನ್‌ ವಿರುದ್ಧ 17-13 ಅಂತರದ ಗೆಲುವು ಸಾಧಿಸಿದರು. ಕಂಚಿನ ಪದಕ ಇಸ್ರೇಲ್‌ ಪಾಲಾಯಿತು.

ಇದು ಸೀನಿಯರ್‌ ವಿಭಾಗದಲ್ಲಿ ತುಷಾರ್‌ ಮಾನೆ ಜಯಿಸಿದ ಮೊದಲ ಚಿನ್ನದ ಪದಕ. ಹಾಗೆಯೇ ಮೆಹುಲಿ ಗೆದ್ದ ಎರಡನೇ ಬಂಗಾರ. 2019ರ ಕಠ್ಮಂಡು ಸೌತ್‌ ಏಷ್ಯನ್‌ ಗೇಮ್ಸ್‌ನಲ್ಲಿ ಮೊದಲ ಚಿನ್ನ ಜಯಿಸಿದ್ದರು.

ಏಕಪಕ್ಷೀಯ ಸ್ಪರ್ಧೆ
10 ಮೀ. ಏರ್‌ ಪಿಸ್ತೂಲ್‌ ಮಿಶ್ರ ಸ್ಪರ್ಧೆಯಲ್ಲಿ ಪಲಕ್‌-ಶಿವ ನರ್ವಾಲ್‌ ಕಜಾಕ್‌ಸ್ಥಾನದ ಐರಿನಾ ಲೋಕ್ಟಿಯೊನೋವಾ-ವಲೆರಿಯ್‌ ರಖೀ¾ಝಾನ್‌ ವಿರುದ್ಧ 16-0 ಅಂತರದ ಏಕಪಕ್ಷೀಯ ಗೆಲುವು ಸಾಧಿಸಿ ಕಂಚನ್ನು ತಮ್ಮದಾಗಿಸಿಕೊಂಡರು. ಬುಧವಾರದ ಈ ಸಾಧನೆಯಿಂದ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ (2 ಚಿನ್ನ, 1 ಕಂಚು). ಸರ್ಬಿಯಾ ಅಗ್ರಸ್ಥಾನದಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next