Advertisement
ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಹೋಮ, ವಿಶೇಷ ಪೂಜೆ ಮೂಲಕ ಫೆ.4ರ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಪುರಾಣದಲ್ಲಿ ಜನಮೇಜಯ ಸರ್ಪಯಜ್ಞ ಮಾಡುವಾಗ ಯಜ್ಞಕ್ಕೆ ಆಹುತಿಯಾಗುವುದನ್ನು ತಪ್ಪಿಸಿಕೊಳ್ಳಲು ತಕ್ಷಕ ಇಂದ್ರನ ಮೊರೆ ಹೋಗುತ್ತಾನೆ. ಆಗ ಇಂದ್ರನ ಸಿಂಹಾಸನ ಸಮೇತ ತಕ್ಷಕನನ್ನು ಆಹುತಿ ಪಡೆಯಲು ಮಂತ್ರ ಪಠಿಸಿದಂತೆ ನಾವೂ ಇಲ್ಲಿ ಯಜ್ಞ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರನ್ನು ನಾವು ಸ್ವಾಹಾ ಹೇಳಿ ಆಹುತಿ ಪಡೆಯುತ್ತೇವೆ ಎಂದು ಹೇಳಿದರು.
ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಸಮನ್ವಯ ಸಮಿತಿ ರಚನೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಫೆ.4ರಂದು ನಡೆಯಲಿರುವ ಪರಿವರ್ತನಾ ರ್ಯಾಲಿ ಸಮಾರೋಪ ಸಮಾರಂಭವನ್ನು ಯಶಸ್ವಿಗೊಳಿಸಲು ರಾಜ್ಯ ಬಿಜೆಪಿಯು ಕೇಂದ್ರ ಸಚಿವ ಅನಂತಕುಮಾರ್ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಿದ್ದು, ಕೇಂದ್ರದ ಇನ್ನೊಬ್ಬ ಸಚಿವ ಡಿ.ವಿ.ಸದಾನಂದಗೌಡ, ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸುಬ್ಬನರಸಿಂಹ (ಸುಬ್ಬಣ್ಣ), ಎಸ್. ಮುನಿರಾಜು, ಪಿ.ಎನ್.ಸದಾಶಿವ ಮತ್ತು ಜಯದೇವ್ ಸಮಿತಿಯಲ್ಲಿದ್ದಾರೆ.