Advertisement

ಕೋಲಾರ: ಬರ್ತ್ ಡೇ ಗಿಫ್ಟ್ ನೆಪದಲ್ಲಿ ಬಾಲಕಿಯ ಗ್ಯಾಂಗ್ ರೇಪ್: ನಾಲ್ವರ ಬಂಧನ

04:18 PM Feb 19, 2022 | Team Udayavani |

ಕೋಲಾರ: ಒಂಬತ್ತನೇ ತರಗತಿ ಬಾಲಕಿಯ ಮೇಲೆ ಆಕೆಯ ಜನ್ಮದಿನದಂದೇ ನಾಲ್ವರು ಯುವಕರು ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕು ಕಾಮಸಮುದ್ರ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ಸಂತ್ರಸ್ತೆ ಬಾಲಕಿ ಒಂಬತ್ತನೆ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಬಂಗಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆರೋಪಿ ನಾಲ್ವರು ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಆನಂದಕುಮಾರ್(25), ಕಾಂತರಾಜು(23), ಪ್ರವೀಣ್(21) ಮತ್ತು ವೇಣು (19) ಎಂದು ಗುರುತಿಸಲಾಗಿದೆ.

ಬಡ ಕುಟುಂಬದ ಬಾಲಕಿಗೆ ಶುಕ್ರವಾರ ಹುಟ್ಟಿದ ಹಬ್ಬವಾಗಿದ್ದು, ತಂದೆ ಹೊಸ ಬಟ್ಟೆ ಕೊಡಿಸಿಲ್ಲವೆಂಬ  ಕೋಪದಲ್ಲಿ ಸಂಜೆ ಮನೆಯಿಂದ ಹೊರಗೆ ಬಂದಿದ್ದಳು. ಇದೇ ಸಂದರ್ಭದಲ್ಲಿ ಆಕೆಗೆ ಪರಿಚಯವಾಗಿದ್ದ ಯುವಕನೋರ್ವ ಹುಟ್ಟು  ಹಬ್ಬಕ್ಕೆ ಕೊಡುಗೆ ನೀಡುವುದಾಗಿ ನಂಬಿಸಿ ಕರೆದೊಯ್ದಿದ್ದಾನೆ. ಈತನ ಜೊತೆಗೆ ಮೂವರು ಸ್ನೇಹಿತರು ಸೇರಿಕೊಂಡು ಕಾಮಸಮುದ್ರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.

Advertisement

ಅತ್ಯಾಚಾರದಿಂದ ತೀವ್ರವಾಗಿ ನಿತ್ರಾಣಗೊಂಡಿದ್ದ ಸಂತ್ರಸ್ತೆ ಬಾಲಕಿ ಗ್ರಾಮಕ್ಕೆ ಬಂದ ಮೇಲೆ ಪೋಷಕರಿಗೆ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಸಂತ್ರಸ್ತೆ ಬಾಲಕಿ ನೀಡಿದ ಮಾಹಿತಿ ಮೇಲೆಗೆ ಬಂಗಾರಪೇಟೆ ಮತ್ತು ಕಾಮಸಮುದ್ರ ಠಾಣೆ ಪೊಲೀಸರು ಆರೋಪಿತ ನಾಲ್ವರು ಯುವಕರನ್ನು ತ್ವರಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಕಾಮಸಮುದ್ರ ಠಾಣೆಗೆ ಆಗಮಿಸಿ ಪೋಷಕರಿಗೆ ಧೈರ್ಯತುಂಬಿದ ನಂತರವಷ್ಟೇ ಪೋಷಕರು ಪ್ರಕರಣ ದಾಖಲಿಸಲು ಅನುಮತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next