Advertisement

ಚಿನ್ನದ ನಾಡು ಮಾಡಲು ಸಂಕಲ್ಪ

02:16 PM Nov 30, 2020 | Suhan S |

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶದ ಕೃಷ್ಣ ನದಿ ಮತ್ತು ಎತ್ತಿನಹೊಳೆಯ ಯೋಜನೆಯ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಅವಳಿ ಜಿಲ್ಲೆಗಳ ರೈತರ ಚಿನ್ನದ ನಾಡು ಮಾಡಲು ರಾಜ್ಯ ಬಿಜೆಪಿ ಸರ್ಕಾರ ದೃಢ ಸಂಕಲ್ಪ ಮಾಡಿದೆ ಉಡುಪಿ- ಚಿಕಮಗಳೂರು ಲೋಕಸಭಾ ಸದಸ್ಯೆ ಶೋಭಾಕರಂದ್ಲಾಜೆ ತಿಳಿಸಿದರು.

Advertisement

ನಗರದ ಸಿದ್ದೇಶ್ವರ ಸಮುದಾಯ ಭವದನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆ ಹಿಂದುಳಿದಜಿಲ್ಲೆ ಹಣೆಪಟ್ಟಿಯಿಂದ ಆಚೆ ಬರಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಎಚ್‌.ಎನ್‌.ವ್ಯಾಲಿ ಯೋಜನೆ ಮೂಲಕ ಶುದ್ಧೀಕರಿಸಿ ನೀರು ಹರಿಸುವ ಜೊತೆಗೆ ಎತ್ತಿನಹೊಳೆ ಮತ್ತು ಕೃಷ್ಣ ನದಿಯಿಂದ ಜಿಲ್ಲೆಯ ಗಡಿಭಾಗ ವಾಗಿರುವ ಲೇಪಾಕ್ಷಿವರೆಗೆ ನೀರುಬಂದಿದೆ. ಅದನ್ನು ಜಿಲ್ಲೆಗೆ ಹರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

ಬೆಳಗಾವಿ ವಿಭಾಗದಲ್ಲಿ ಸಚಿವ ಜಗದೀಶ್‌ಶೆಟ್ಟರ್‌, ಕಲಬರಗಿ ವಿಭಾಗದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರ ಜೋಳ, ಕೊಪ್ಪಳ ವಿಭಾಗದಲ್ಲಿ ಲಕ್ಷ್ಮಣ ಸವದಿ, ಶಿವಮೊಗ್ಗ- ಚಿಕ್ಕಮಗಳೂರು ವಿಭಾಗದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ, ಮೈಸೂರು ವಿಭಾಗದಲ್ಲಿ ಸಚಿವ ಆರ್‌.ಅಶೋಕರ್‌ ನೇತೃತ್ವದ ತಂಡ ಪ್ರವಾಸ ಕೈಗೊಂಡು ಗ್ರಾಪಂ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಂಸದ ಎಸ್‌.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next