Advertisement
“ಗೋ ಬ್ಯಾಕ್ ಶೋಭಾ’ ಎಂಬ ಟ್ವೀಟ್ ಅಭಿಯಾನದ ಬಗ್ಗೆ ಪತ್ರಕರ್ತರು ರವಿವಾರ ಪ್ರಶ್ನಿಸಿದಾಗ ಶೋಭಾ ಅವರು ಪ್ರತಿಕ್ರಿಯಿಸಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಈ ಹಿಂದೆ ಪುರುಷರು ಪ್ರತಿನಿಧಿಸುತ್ತಿದ್ದರು. ಅವರು ಮಾಡಿರುವುದಕ್ಕಿಂತ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡಿದ್ದೇನೆ. ಎರಡೂ ಜಿಲ್ಲೆಗಳಿಗೆ ಕೇಂದ್ರೀಯ ವಿದ್ಯಾಲಯ ತಂದಿದ್ದೇನೆ. ಜಿಲ್ಲೆಗೆ ಮೊದಲ ಬಾರಿಗೆ ಪಾಸ್ ಪೋರ್ಟ್ ಕಚೇರಿ, ಜಿಟಿಡಿಸಿ ಟ್ರೈನಿಂಗ್ ಸೆಂಟರ್, ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ತಂದಿದ್ದೇನೆ. ರಾಮಕೃಷ್ಣ ಹಗಡೆ ಕೌಶಲ ತರಬೇತಿ ಕೇಂದ್ರವೂ ಮಂಜೂರಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಉಡುಪಿಗೆ ಸಖೀ ಸೆಂಟರ್ ಮಂಜೂರಾಗಿ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ರಸ್ತೆ ನಿಧಿಯಲ್ಲಿ
ಅತ್ಯಧಿಕ ಮೊತ್ತ ಉಡುಪಿ ಜಿಲ್ಲೆಗೆ ಬಿಡುಗಡೆಯಾಗಿದೆ. ಕೆಲವು ರಸ್ತೆಗಳು ಹೆದ್ದಾರಿ ದರ್ಜೆಗೇರಿವೆ. ಉಡುಪಿಯಲ್ಲಿ ಜೆಮ್ಸ್ ಆ್ಯಂಡ್ ಜುವೆಲರಿ ಕೇಂದ್ರ ಮಂಜೂರಾಗಿ ಕಟ್ಟಡವೂ ನಿರ್ಮಾಣ ವಾಗಿದೆ. ಆಯುಷ್ಮಾನ್ ಯೋಜನೆ, ಉಜ್ವಲಾ ಯೋಜನೆಯಡಿ ಜನರಿಗೆ ಸೌಲಭ್ಯ ಸಿಗುತ್ತಿದೆ. ಇದನ್ನೆಲ್ಲಾ ಈ ಹಿಂದೆ ಪ್ರತಿನಿಧಿಸಿದ ಗಂಡಸರು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಶೋಭಾ “ಟಿಕೆಟ್ ಆಸೆಗಾಗಿ ಅವಮಾನ ಮಾಡುವುದು ಸರಿಯಲ್ಲ. ಇದರಿಂದ ಅವರು ಪಕ್ಷಕ್ಕೆ ಏನು ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ಯೋಚಿಸಬೇಕು’ ಎಂದರು. ಪಕ್ಷ ಸೂಚಿಸಿದರೆ ಸ್ಪರ್ಧೆ
ಟಿಕೇಟ್ ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷಕ್ಕಾಗಿ ಮಾಡಿರುವ ಕೆಲಸವನ್ನು ಮಾನದಂಡವಾಗಿರಿಸಿ ಟಿಕೆಟ್ ನೀಡಲಾಗುತ್ತದೆ. ಪಕ್ಷ ಸೂಚಿಸಿದರೆ ಸ್ಪರ್ಧೆ ಮಾಡುತ್ತೇನೆ. ಬೇರೆ ಜವಾಬ್ದಾರಿ ನೀಡಿದರೆ ಅದನ್ನು ಕೂಡ ಮಾಡುತ್ತೇನೆ ಎಂದು ಶೋಭಾ ಹೇಳಿದರು.
Related Articles
ಬೆಂಗಳೂರಿನಲ್ಲಿ ಏರ್‌ಶೋಗೆ ಆಗಮಿಸುವ ಸಾರ್ವಜನಿಕರಿಗೆ ರಕ್ಷಣೆ ಒದಗಿಸುವ ಜವಾಬ್ದಾರಿ ಯಲ್ಲಿ ರಾಜ್ಯ ಸರಕಾರ ವಿಫಲ ವಾಗಿದೆ. ಈ ಹಿಂದೊಮ್ಮೆ ಏರ್‌ಶೋವನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವ ಪ್ರಯತ್ನಗಳು ನಡೆದಾಗ ನಾವು ಒತ್ತಡ ಹಾಕಿ ಏರ್ ಶೋ ಬೆಂಗಳೂರಿನಲ್ಲಿಯೇ ಮುಂದುವರಿಯುವಂತೆ ಮಾಡಿದ್ದೆವು. ಆದರೆ ರಾಜ್ಯ ಸರಕಾರ ರಕ್ಷಣೆ ಒದಗಿಸುವಲ್ಲಿ ವೈಫಲ್ಯ ಕಂಡಿದೆ. ರಾಜ್ಯ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳ ಲಾಗದು. ಈ ಘಟನೆಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳಿಗೂ ಸಂಬಂಧವಿದೆಯೇ ಅಥವಾ ಇದು ಆಕಸ್ಮಿಕವೋ ಎನ್ನುವುದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಶೋಭಾ ಹೇಳಿದರು.
Advertisement