Advertisement
ಸಿದ್ದರಾಮಯ್ಯ ನೇತೃತ್ವದ ಸರಕಾರದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಹಿಂದೂ/ ಆರೆಸ್ಸೆಸ್/ ಬಿಜೆಪಿ ಕಾರ್ಯ ಕರ್ತರನ್ನು ಗುರಿಯಾಗಿಸಿಕೊಂಡು ಸಾಕಷ್ಟು ಕೊಲೆ ಮತ್ತು ಹಲ್ಲೆ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿ ಶೋಭಾ ಅವರು ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ನೀಡಿದ್ದರು.
Related Articles
Advertisement
ಅಶೋಕ ಪೂಜಾರಿ ಬದುಕಿದ್ದಾರೆಕೊಲೆಯಾದವರ ಪಟ್ಟಿಯಲ್ಲಿ ಶೋಭಾ ಅವರು ನಮೂದಿಸಿರುವ ಮೊದಲ ಹೆಸರು ಮೂಡಬಿದಿರೆಯ ಅಶೋಕ ಪೂಜಾರಿ ಅವರದ್ದಾಗಿದ್ದು, ವಾಸ್ತವದಲ್ಲಿ ಅವರು ಈಗಲೂ ಜೀವಂತವಿದ್ದಾರೆ. ಅಶೋಕ್ ಮೇಲೆ 2015 ಸೆ. 20ರಂದು ಬೆಳಗ್ಗೆ ಮುಸುಕುಧಾರಿಗಳಿಂದ ಹಲ್ಲೆ ನಡೆದಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಅನಂತರ ಚೇತರಿಸಿಕೊಂಡಿದ್ದರು. ಹೀಗಾಗಿ ಅವರ ಮೇಲೆ ಕೊಲೆ ಯತ್ನ ನಡೆದಿತ್ತೇ ಹೊರತು ಹತ್ಯೆಯಾಗಿರಲಿಲ್ಲ. ವಾಮನ ಪೂಜಾರಿ ಆತ್ಮಹತ್ಯೆಗೈದವರು
ಶೋಭಾ ನಮೂದಿಸಿರುವ ಎರಡನೇ ಹೆಸರು ಮೂಡಬಿದಿರೆಯ ವಾಮನ ಪೂಜಾರಿ ಅವರದ್ದು. ಅವರು 2015ರ ಅಕ್ಟೋಬರ್ 15ರಂದು ತನ್ನ ಪುತ್ರಿಯ ಮನೆಯ ಶೆಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೇ ಹೊರತು
ಕೋಮು ಸಂಘರ್ಷದ ಆರೋಪದ ಮೇಲೆ ಹತ್ಯೆ ನಡೆದಿ ರಲಿಲ್ಲ. ವಿಶೇಷ ಅಂದರೆ ಈ ಇಬ್ಬರ ಹೆಸರನ್ನು ಕೂಡ ಹಿಂದೂ ಕಾರ್ಯಕರ್ತರ ಹತ್ಯೆ ಪಟ್ಟಿಯಲ್ಲಿ ನಮೂದಿಸಿರುವುದು ಸಾಮಾಜಿಕ ಜಾಲ ತಾಣ ಸೇರಿದಂತೆ ಸಾಕಷ್ಟು ವಲಯದಲ್ಲಿ ಸಾಕಷ್ಟು ವಿರೋಧಕ್ಕೆ ಎಡೆಮಾಡಿದೆ. ಕಾರ್ತಿಕ್ ರಾಜ್ ಸೋದರಿಯಿಂದಲೇ ಹತ್ಯೆ
ಈ ನಡುವೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ತಿಕ್ ರಾಜ್ ಕೊಲೆ ಪ್ರಕರಣವನ್ನೂ ಹಿಂದೂ ಮುಖಂಡರ ಹತ್ಯೆ ಪಟ್ಟಿಯಲ್ಲಿ ಶೋಭಾ ಉಲ್ಲೇಖೀಸಿದ್ದಾರೆ. ಆದರೆ ಪೊಲೀಸರ ತನಿಖೆಯಲ್ಲಿ ಕಾರ್ತಿಕ್‌ರಾಜ್‌ನನ್ನು ಆತನ ಸೋದರಿಯೇ ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿಸಿದ್ದಳು ಎಂಬುದು ಈಗಾಗಲೇ ಬಹಿರಂಗಗೊಂಡಿದೆ.