ತೀರ್ಥಹಳ್ಳಿ: ಮಹಾ ಶಿವರಾತ್ರಿ ಅಂಗವಾಗಿ ಮಾ.8ರ ಶುಕ್ರವಾರ ಹಾಗೂ ಮಾ. 9ರ ಶನಿವಾರದಂದು ಪಟ್ಟಣದ ವಿವಿಧ ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನ, ಉತ್ಸವಗಳು ನಡೆಯಲಿದೆ.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಶತ ರುದ್ರಾಭಿಷೇಕ ಸಹಸ್ರ ನಾರಿಕೇಳ ಅಭಿಷೇಕ, ಹೋಮ, ಹಾಗೂ ಸಂಜೆಯಿಂದ ಅಖಂಡ ಭಜನಾ ಕಾರ್ಯಕ್ರಮ ಇರಲಿದೆ.
ಬಾಳೆಬೈಲಿನ ಸಿದ್ದೇಶ್ವರ ಗುಡ್ಡದ ಮೇಲೆ ನೆಲೆ ನಿಂತಿರುವ ಸಿದ್ದೇಶ್ವರ ಸ್ವಾಮಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ರುದ್ರಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನಡೆಯಲಿದೆ ಎಂದು ಸಮಿತಿ ಯವರು ತಿಳಿಸಿದ್ದಾರೆ.
ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲಿ ತುಂಗಾ ನದಿಯ ತೀರದಲ್ಲಿ ಇರುವ ಗೌರಿ ಶಂಕರ ದೇವಸ್ಥಾನದಲ್ಲಿ 108 ನಾರಿಕೇಳ ಅಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವ ಅರ್ಚನೆ, ಮಾಘ ತೀರ್ಥ ಸ್ನಾನ, ಶ್ರೀ ರುದ್ರ ಪಾರಾಯಣ, ಅಖಂಡ ಶಿವಪಂಚಾಕ್ಷರಿ ಜಪ, ಸಾಮೂಹಿಕ ಭಜನೆ, ಮಕ್ಕಳಿಂದ ನೃತ್ಯ ಸೇರಿ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಕಿತ್ತನಗದ್ದೆ ಸಾಂಬಾಸದಾಶಿವ ಮತ್ತು ಮಹಿಷಿಮರ್ದಿನಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಏಕದಶ ರುದ್ರಾಭಿಷೇಕ, ಜಾಗರಣೆ ಅಂಗವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ತೀರ್ಥಹಳ್ಳಿ ತಾಲೂಕು ಮಂಜು ನಾಥೇಶ್ವರ ಭಜನಾ ಪರಿಷತ್ ಸಹಕಾರದೊಂದಿಗೆ ಅಖಂಡ ಭಜನೆ, ಚಂಡಿಕಾಯಾಗ ಸೇರಿ ವಿವಿಧ ಕಾರ್ಯಕ್ರಮ ನಡೆಯಲಿದೆ.