Advertisement

ಶಿವಯೋಗ ಕೃಷಿ ಶಿಬಿರ

04:26 PM Mar 18, 2017 | |

ಶಿವಯೋಗ ಅಂತಾರಾಷ್ಟ್ರೀಯ ವೇದಿಕೆ  ವತಿಯಿಂದ ಮಾರ್ಚ್‌ 19 ರಂದು ಬೆಳಗ್ಗೆ 10 ಗಂಟೆಗೆ  ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಯ ಕಾಲೇಜು ಸಭಾಂಗಣದಲ್ಲಿ ಉಚಿತ “ಶಿವಯೋಗ ಕೃಷಿ’ ಶಿಬಿರವನ್ನು ಆಯೋಜಿಲಾಗಿದೆ.

Advertisement

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬರಗಾಲ ಭೀಕರವಾಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಕಳೆದ ಎರಡು ವರ್ಷಗಳಿಂದ ಮಳೆ ಕೈ ಕೊಟ್ಟ ಕಾರಣ, ಸಾಲ ಮಾಡಿ ಬೆಳೆದ ಬೆಳೆಗಳು ನಾಶವಾಗಿ, ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಯಲು ಸೀಮೆ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿ ಅನೇಕ ದನಕರುಗಳು ಸಾವನ್ನಪ್ಪಿವೆ. ಆದ್ದರಿಂದ ರೈತರ ಉದ್ಧಾರ ಹಾಗೂ ಏಳ್ಗೆಗಾಗಿ “ಶಿವಯೋಗ ಕೃಷಿ ಶಿಬಿರ’ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಶಿವಯೋಗ ಹೀಲಿಂಗ್‌ ಪದ್ಧತಿಯನ್ನು ರೈತರಿಗೆ ಬಾಬಾಜೀ ಅವರು ವಾಣಿ ದೀಕ್ಷೆಯ ಮುಖಾಂತರ ಹೇಳಿಕೊಡುತ್ತಾರೆ. ನಂತರ ಪ್ರತಿದಿನ ಶಿವಯೋಗ ಶಕ್ತಿಯನ್ನು ರೈತ ತನ್ನ ಹೊಲಗದ್ದೆಗಳಿಗೆ, ಮಣ್ಣು, ಬೀಜ ಮತ್ತು ದನಕರುಗಳಿಗೆ ಕಳುಹಿಸಬೇಕು. ಈ ರೀತಿಯಾಗಿ ಶಿವಯೋಗ ಹೀಲಿಂಗ್‌ ಶಕ್ತಿಯು ಪ್ರವಹಿಸಿದಾಗ ಅಧಿಕ ಫ‌ಸಲು, ಇಳುವರಿಯನ್ನು ಪಡೆಯುವುದಲ್ಲದೇ, ಪಶು ಸಂಪತ್ತಿನ ಗುಣಮಟ್ಟದಲ್ಲಿ ಪರಿವರ್ತನೆ ಆಗುತ್ತದೆ. ರೈತನ ಸರ್ವತೋಮುಖ ಅಭಿವೃದ್ಧಿ ಮತ್ತು ಆರೋಗ್ಯ, ಕುಟುಂಬ ಜೀವನದಲ್ಲಿ ಕೂಡ ಆಹ್ಲಾದಕರ ಸುಧಾರಣೆ ಆಗುತ್ತದೆ. ರೈತರು ಇಡೀ ವಿಶ್ವಕ್ಕೆ ಸ್ವಸ್ಥ ಮತ್ತು ಪೋಷಣಾಭರಿತ ಆಹಾರವನ್ನು ಒದಗಿಸುವಂತಾಗಬೇಕು ಎಂಬುದು ಬಾಬಾಜೀಯವರ ಧ್ಯೇಯವಾಗಿದೆ. 

ಶಿಬಿರದಲ್ಲಿ ಭಾಗವಹಿಸುವ ರೈತರಿಗೆ ಉಚಿತ ಪ್ರವೇಶ ಮತ್ತು ಫ‌ಲಾಹಾರ ಹಾಗೂ ಊಟದ ವ್ಯವಸ್ಥೆ ಇರುತ್ತದೆ.

 ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗೆ  ಮೊ. 9901067806, 9986418557 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next