ಮುಂಬಯಿ: ಸಮಾಜಮುಖೀ ಸೇವಾ ಮನೋಭಾವದ ಚಿಂತನೆಯೊಂದಿಗೆ ಇಲ್ಲಿ ಜನ್ಮ ತಾಳಿದ ಶಿವಾಯ ಫೌಂಡೇಶನ್ ಮುಂಬಯಿ ಇದರ ಉದ್ಘಾಟನಾ ಸಮಾರಂಭ ಜ. 12 ರಂದು ಗಾಡೆY ಮಹಾರಾಜ ಧರ್ಮಶಾಲೆ ದಾದರ್ ಇಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಿವಾಯ ಫೌಂಡೇಶನ್ ಮುಂಬಯಿ ಅಧ್ಯಕ್ಷ ತಾರಾನಾಥ್ ರೈ ವಹಿಸಿಕೊಂಡಿದ್ದರು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಶಿವಾಯ ಫೌಂಡೇಶನ್‌ನ ಮೂಲ ಉದ್ದೇಶ ಅಶಕ್ತರಿಗೆ ವೈದ್ಯಕೀಯ ಹಾಗೂ ಶೈಕ್ಷಣಿಕ ನೆರವು ನೀಡುವುದಾಗಿದ್ದು, ನಾವು ಗಳಿಸುವ ಒಂದಾಂಶ ಸಮಾಜಕ್ಕೆ ಎನ್ನುವ ಸೂತ್ರದಡಿ ಸದಸ್ಯರ ಹಾಗೂ ದಾನಿಗಳ ನೆರವಿನಿಂದ ಈ ಸಂಸ್ಥೆಯು ಕಾರ್ಯೋನ್ಮುಖವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಸಂಸ್ಥೆಯ ದ್ಯೆàಯೋದ್ದೇಶಗಳನ್ನು ವಿವರಿಸಲಾಯಿತು.
ಸಂಸ್ಥೆಯ ಸದಸ್ಯೆ ರûಾ ಶೆಟ್ಟಿ ಸ್ವಾಮಿ ವಿವೇಕಾನಂದರ ಜೀವನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಪಲಿಮಾರು ಕಾರ್ಯಕ್ರಮ ನಿರ್ವಹಿಸಿದರು. ತದನಂತರ ದೇಶದ ಬೇರೆ ಬೇರೆ ರಾಜ್ಯಗಳಿಂದ ಶುಶ್ರೂಷೆಗಾಗಿ ಆಗಮಿಸಿ ವಸತಿ ಸಮಸ್ಯೆಯನ್ನು ಎದುರಿಸುತ್ತಿರುವ ಕ್ಯಾನ್ಸರ್ ಪೀಡಿತ ಬಡ ಪರಿವಾರಗಳಿಗೆ ನಿರಂತರವಾಗಿ ವಸತಿ ವ್ಯವಸ್ಥೆಯನ್ನು ಪೂರೈಸುತ್ತಿರುವ ಘಾಡೆY ಮಹಾರಾಜ್ ಧರ್ಮಶಾಲೆಯ ಸುಮಾರು 400 ಮಂದಿ ಕ್ಯಾನ್ಸರ್ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಬೆಳಗ್ಗಿನ ಉಪಹಾರದ ಜತೆ ಹಾಲು, ಹಣ್ಣು , ಕೇಕ್ ವಿತರಿಸುವುದರ ಮೂಲಕ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಶಿವಾಯ ಫೌಂಡೇಶನ್ ವತಿಯಿಂದ ತುಂಬ ವಿಶಿಷ್ಟವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿವಾಯ ಫೌಂಡೇಷನ್‌ನ ಸದಸ್ಯರಾದ ಮಧುಸೂದನ್ ಶೆಟ್ಟಿ ಅಜಯ್ ಪ್ಯಾಲೇಸ್, ನವೀನ್ ಪೂಜಾರಿ, ಸಾಗರ್ ಆಳ್ವ, ಪ್ರಶಾಂತ್ ಪಲಿಮಾರು, ಪ್ರಶಾಂತ್ ಪಂಜ, ಶ್ವೇತಾ ಶೆಟ್ಟಿ ಅವರಾಲು ಕಂಕಣಗುತ್ತು, ಆರೂರು ಪ್ರಭಾಕರ ಶೆಟ್ಟಿ, ಅಶೋಕ್ ಶೆಟ್ಟಿ ಮುಟ್ಲುಪಾಡಿ, ವರ್ಣಿತ್ ಶೆಟ್ಟಿ, ಅವಿನಾಶ್ ನಾಯ್ಕ…, ದಿವಾಕರ್ ಶೆಟ್ಟಿ, ಕಿರಣ್ ಜೈನ್, ವಿಕ್ರಮ್ ಪೂಜಾರಿ, ಆಶಿಷ್ ಪೂಜಾರಿ, ವಿನೋದ್ ದೇವಾಡಿಗ, ಸುನಿಲ್ ಮೂಲ್ಯ, ರಾಜೇಶ್ ಶೆಟ್ಟಿ, ದೀಪಾ ಪೂಜಾರಿ, ರûಾ ಶೆಟ್ಟಿ, ಸೀಮಾ ಶೆಟ್ಟಿ, ಪ್ರಿಯಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.