Advertisement

ಪುಲಮಾಕಲಹಳ್ಳಿಗೆ ಶಿವಶಂಕರ ರೆಡ್ಡಿ ಭೇಟಿ

01:47 PM Mar 15, 2021 | Team Udayavani |

ಗೌರಿಬಿದನೂರು: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ 60 ಕುರಿಗಳು ಹಾಗೂ 10 ಮೇಕೆಗಳು ಸಜೀವ ದಹನವಾಗಿರುವುದು ನೋವಿನ ಸಂಗತಿಯಾಗಿದೆ ಎಂದು ಶಾಸಕ ಶಿವಶಂಕರರೆಡ್ಡಿ ಹೇಳಿದರು.

Advertisement

ತಾಲೂಕಿನ ಡಿ.ಪಾಳ್ಯ ವ್ಯಾಪ್ತಿಯ ಪುಲ ಮಾಕಲಹಳ್ಳಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದಸ್ಥಳಕ್ಕೆ ಭಾನುವಾರ ಶಾಸಕರು, ತಹಶೀಲ್ದಾರ್‌, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಾದರಾಘವೇಂದ್ರ ಅವರೊಂದಿಗೆ ತೆರಳಿ ರೈತ ಗಂಗಾ ಧರಪ್ಪ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಡರೈತನು ತನ್ನ ಕಷ್ಟಗಳನ್ನು ತೀರಿಸಿಕೊಳ್ಳಲು ಪಶು ಸಾಕಾಣಿಕೆಗಳಾದ ಕುರಿ, ಮೇಕೆ, ಹಸು ಮುಂತಾದವನ್ನು ಸಾಕುತ್ತಾನೆ. ಆದರೆ ಅವುಗಳು ಆಕಸ್ಮಿಕಬೆಂಕಿಗೆ ಆಹುತಿಯಾದರೆ ಅವರ ಬದುಕಿನಲ್ಲಿ ದಿಕ್ಕುತೋಚದಂತಾಗುತ್ತದೆ. ಅವರು ದೃತಿಗೆಡುವುದು ಬೇಡ. ಮನೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲಾಗುವುದು ಹಾಗೂ ಸತ್ತ ಕುರಿ ಹಾಗೂ ಮೇಕೆಗಳಿಗೆ ಜಿಲ್ಲಾಧಿಕಾರಿಗಳಿಂದ ಸಿಆರ್‌ಎಫ್ ನಿಧಿಯ ಮೂಲಕ ಪರಿಹಾರಕ್ಕೆ ತಹಶೀಲ್ದಾರ್‌ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಅಫರ್‌ಪಾಷ, ಮೌಲಾರ ಆರೋಪ ನಿರಾಧಾರ :

ಶಿಡ್ಲಘಟ್ಟ: ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರಿಂದ ನಾಗರಿಕರಿಗೆ ತೊಂದರೆಯಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷಬಿ.ಅಫÕರ್‌ಪಾಷ ಮತ್ತು ನಗರಸಭಾ ಸದಸ್ಯ ಮೌಲಾಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಶಿಡ್ಲಘಟ್ಟ ನಗರದ ಎಸ್‌.ಎಫ್‌.ಸಿ.ಎಸ್‌ ಬ್ಯಾಂಕ್‌ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ತೇಜೋ ವಧೆ ಮಾಡುವುದನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮಜರುಗಿಸಲಾಗುವುದು. ಇತ್ತೀಚಿಗೆ ನಗರಸಭೆ ಮಾಜಿಅಧ್ಯಕ್ಷ ಅಪ್ಸರ್‌ ಪಾಷಾ ಹಾಗೂ 12ನೇ ವಾರ್ಡ್‌ನ ಸದಸ್ಯ ಮೌಲ ಅವರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ವಾರ್ಡ್‌ ಸಂಖ್ಯೆ 12,15,17ಹಾಗೂ 24ನೇ ವಾರ್ಡ್‌ಗಳ ಜನರಿಗೆ ಸಂಚರಿಸಲು ತೊಂದರೆಯಾಗಿದೆಯೆಂದು ದೂರಿದ್ದಾರೆ.

Advertisement

ಆದರೆ ವಾಸ್ತವದಲ್ಲಿ ಆ ವಾರ್ಡ್‌ಗಳ ನಾಗರಿಕರು ರಸ್ತೆ ಒತ್ತುವರಿ ಮಾಡಿಕೊಂಡು ಮೆಟ್ಟಿಲುಗಳು,ಬಚ್ಚಲು ಮನೆ, ಚರಂಡಿ ನಿರ್ಮಿಸಿಕೊಂಡಿದ್ದಾರೆ. ಆದರೆ ನಾವು ಭೂಮಾಪನ ಇಲಾಖೆಯ ಅಧಿಕಾರಿಗಳಿಂದ ಸರ್ವೆ ಮಾಡಿಸಿ ನಮ್ಮ ಜಮೀನುಗಳನ್ನು ಹದ್ದುಬಸ್ತು ಮಾಡಿಕೊಂಡಿದ್ದೇವೆ ಎಂದು ಹೇಳಿದರು ಸುದ್ದಿಗೋಷ್ಠಿಯಲ್ಲಿ ಇದ್ಲೂಡು ಸುತ್ತಮುತ್ತಲಿನ ರೈತರು ತಮಗೆ ಆಗಿರುವ ಜಮೀನಿನ ಪಹಣಿಗಳನ್ನುತೋರಿಸಿ ನಾವು ಯಾವುದೇ ರಸ್ತೆಗಳನ್ನು ಒತ್ತುವರಿ ಮಾಡಿ ಕೊಂಡಿಲ್ಲ. ಕಂದಾಯ ಇಲಾಖೆಯ ಅಧಿಕಾರಿ ಗಳು ಸ್ಥಳ ತನಿಖೆ ನಡೆಸಿ ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು. ಡಿ.ಕೆ.ಚೇತನ್‌, ಲಕ್ಷ್ಮೀನಾರಾಯಣಪ್ಪ, ಸಿ.ದೇವ ರಾಜ್‌, ಅಶ್ವತ್ಥಪ್ಪ, ಲಕ್ಷ್ಮಣ, ಗಂಗಾಧರ್‌, ಹರೀಶ್‌, ಭಾಸ್ಕರ್‌, ವೆಂಕಟೇಶ್‌, ಆರ್‌.ಮಂಜುನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next