Advertisement
ಶಿವದೇವಾಯಲಗಳಲ್ಲಿ ವಿಶೇಷ ಪೂಜೆ ನೆರವೇರಿತು. ಆದರೆ ಈ ಬಾರಿ ಬಹುತೇಕ ಶಿವನ ದೇವಾಲಯಗಳಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬರಲಿಲ್ಲ. ಬೆಳಗಿನ ಜಾವ 4 ಗಂಟೆಯಿಂದಲೇ ಜನರು ನಗರದಲ್ಲಿನ ಶಿವನ ದೇವಸ್ಥಾನಗಳಿಗೆ ತೆರಳಿ ಭಕ್ತಿಯಿಂದ ಶಿವಲಿಂಗಕ್ಕೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮದಿಂದ ಹಬ್ಬ ಆಚರಿಸಿದರು. ಕೋವಿಡ್-19 ಹಿನ್ನೆಲೆಯಲ್ಲಿ ಕೆಲ ದೇವಸ್ಥಾನದ ಆಡಳಿತ ಮಂಡಳಿಗಳು ಮುಂಚಿತವಾಗಿಯೇ ಮೂಲ ಶಿವಲಿಂಗಕ್ಕೆ ಸಾರ್ವಜನಿಕವಾಗಿ ಅಭಿಷೇಕ, ಪೂಜೆ-ಪುನಸ್ಕಾರಗಳು ಇರುವುದಿಲ್ಲ ಎಂದು ತಿಳಿಸಿದ್ದರಿಂದ ಜನದಟ್ಟಣೆ ಕಡಿಮೆ ಎನ್ನಲಾಗಿದೆ.
Related Articles
Advertisement
ಮೂರುಸಾವಿರ ಮಠ: ಮೂರುಸಾವಿರ ಮಠದ ಸದ್ಭಕ್ತರಿಂದ ಶಿವರಾತ್ರಿ ಉತ್ಸವದ ನಿಮಿತ್ತ ಭಕ್ತರಿಂದ ಜಾಗರಣೆ ಕಾರ್ಯಕ್ರಮ ನಡೆಯಿತು. ನಗರದ ವಿವಿಧ ದೇವಸ್ಥಾನಗಳ ಆವರಣದಲ್ಲಿ ಶಿವರಾತ್ರಿ ಉತ್ಸವದ ನಿಮಿತ್ತ ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇಂಡಿ ಪಂಪ್ ವೃತ್ತ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಅಶೋಕ ನಗರದ ಶಿವದೇವಸ್ಥಾನ, ಅಧ್ಯಾಪಕ ನಗರದಲ್ಲಿನ ವಿಶ್ವನಾಥ ಕಲ್ಯಾಣಮಂಟಪ, ಬಮ್ಮಾಪುರ ಓಣಿಯ ಈಶ್ವರ ದೇವಸ್ಥಾನ, ಬೂಸಪೇಟೆ ಪರ್ವತಮಲ್ಲಯ್ಯ ದೇವಸ್ಥಾನ, ಘಂಟಿಕೇರಿ ಬಸವಣ್ಣ ದೇವಸ್ಥಾನ, ಗೋಕುಲ ರಸ್ತೆಯ ರವಿ ನಗರದ ಈಶ್ವರ ದೇವಸ್ಥಾನ, ನವನಗರದ ಈಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ಶಿವರಾತ್ರಿ ಹಬ್ಬ ಆಚರಿಸಲಾಯಿತು.