Advertisement

ಕಾರಂತರ ಬದುಕು ಒಂದು ದಂತಕಥೆ: ಜಯಂತ್‌ ಕಾಯ್ಕಿಣಿ

07:38 PM Oct 06, 2021 | Team Udayavani |

ಕೋಟ: ಕಾರಂತರು ಬದುಕು ಒಂದು ದಂತಕಥೆಯಾಗಿದ್ದು, ಅವರು ಕೈ ಸಂಶೋಧಕರರಾಗಿ ಹೊಸತನದ ಅನ್ವೇಷಕರಾಗಿ ಬದುಕಿದವರು ಎಂದು ಸಾಹಿತಿ ಜಯಂತ್‌ ಕಾಯ್ಕಿಣಿ ಅವರು ಹೇಳಿದರು.

Advertisement

ಅವರು ಕೋಟತಟ್ಟು ಗ್ರಾಮ ಪಂಚಾಯತ್‌, ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಡಾ| ಶಿವರಾಮ ಕಾರಂತ ಟ್ರಸ್ಟ್‌ ಉಡುಪಿ ಸಹಯೋಗದಲ್ಲಿ ಡಾ| ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ ಪ್ರದಾನ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ವೆಬಿನಾರ್‌ ಉಪನ್ಯಾಸದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರಂತರು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟ ಕವಿ ಹೃದಯಿ , ಸಮಯ ಪಾಲನೆಯಲ್ಲಿ ಅವರಿಗಿದ್ದ ನಿಷ್ಠೆ ನಮಗೆ ಮಾದರಿ. ಯಕ್ಷಗಾನಕ್ಕೆ ಕಾರಂತರು ಜೀವಂತ ಕಲೆ ಎಂದು ವಿಶೇಷ ಮಹತ್ವ ನೀಡುತ್ತಿದ್ದರು ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಪರಂಪರೆಯನ್ನು ಮರೆಯುತ್ತಿರುವುದು ವಿಷಾದನೀಯ ಎಂದರು. ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸತೀಶ್‌ ವಡ್ಡರ್ಸೆ ಸಮನ್ವಯಗೊಳಿಸಿದರು.

ಇದನ್ನೂ ಓದಿ:ಕುಂದಾಪುರ: ಗಾಳಿ-ಮಳೆಗೆ 50ಕ್ಕೂ ಅಧಿಕ ಮನೆಗೆ ಹಾನಿ

Advertisement

Udayavani is now on Telegram. Click here to join our channel and stay updated with the latest news.

Next