ಶಿವರಾಜ್‌ಕುಮಾರ್ ಅವರ ಸಿನಿಮಾ ಅಂದಮೇಲೆ, ಅಲ್ಲಿ ಭರ್ಜರಿ ಹಾಡುಗಳಿಗೇನೂ ಕೊರತೆ ಇರಲ್ಲ. ಅಷ್ಟೇ ಯಾಕೆ, ಶಿವಣ್ಣ ಅವರ ಸಖತ್ ಸ್ಟೆಪ್‌ಗೂ ಮೋಸ ಇರೋದಿಲ್ಲ. ಶಿವಣ್ಣ ಹಾಕುವ ಸ್ಟೆಪ್‌ಗೆ ಅಭಿಮಾನಿಗಳ ಚಪ್ಪಾಳೆ, ಶಿಳ್ಳೆಗೆ ಪಾರವೇ ಇಲ್ಲ. ಸದಾ ಜೋಶ್‌ನಲ್ಲೇ ಕುಣಿದು ಅಭಿಮಾನಿಗಳ ಖುಷಿಪಡಿಸುತ್ತಿದ್ದ ಶಿವಣ್ಣನಿಗೆ ಇದೇ ಮೊದಲ ಸಲ ಡ್ಯಾನ್ಸ್ ಮಾಸ್ಟರ್ ಹರ್ಷ, ಸ್ಟೆಪ್ ಹಾಕಿಸದೆಯೇ “ಮಾಸ್ ಲೀಡರ್’ ಚಿತ್ರದ ಒಂದು ಸಾಂಗ್ ಶೂಟ್ ಮಾಡಿದ್ದಾರೆ!
ಹೌದು, ಶಿವರಾಜ್‌ಕುಮಾರ್ ಪವರ್‌ಫುಲ್ ಡ್ಯಾನ್ಸರ್ ಅಂತ ಎಲ್ಲರಿಗೂ ಗೊತ್ತು. ಅವರ ಡ್ಯಾನ್ಸ್ ಇಲ್ಲದೆ ಯಾವ ಚಿತ್ರದ ಹಾಡೂ ಇಲ್ಲ ಎಂಬುದು ಗೊತ್ತು. ಆದರೆ, ಹರ್ಷ ಯಾಕೆ ಹಾಗೆ ಮಾಡಿದರು? ಅದಕ್ಕೆ ಸ್ವತಃ ಹರ್ಷ ಉತ್ತರಿಸಿದ್ದು ಹೀಗೆ. “ಇದೇ ಮೊದಲ ಸಲ ಒಂದು ಹೊಸ ಪ್ರಯೋಗದಲ್ಲಿ ಹಾಡನ್ನು ಚಿತ್ರೀಕರಿಸಿದ್ದೇನೆ. ಶಿವಣ್ಣ ಅವರನ್ನೂ ಹೊಸ ಲುಕ್‌ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಶಿವಣ್ಣ ಅವರಿಗೆ ಇಲ್ಲಿ ಒಂದೂ ಸ್ಟೆಪ್ ಹಾಕಿಸದೆಯೇ ಆ ಹಾಡನ್ನು ಚಿತ್ರೀಕರಿಸಿರುವುದೇ ಆ ಹಾಡಿನ ಹೈಲೆಟ್.
ಲೀಡರ್ ಕ್ವಾಲಿಟೀಸ್ ಇರುವಂತಹ ಹಾಡಿಗೆ ಸ್ಟೆಪ್ ಹಾಕಿಸಿದರೆ, ಎಲ್ಲಾ ಹಾಡುಗಳಂತೆ ಅದೂ ಒಂದು ಆಗುತ್ತೆ ಎಂಬ ಕಾರಣಕ್ಕೆ ಶಿವಣ್ಣ ಅವರ ಬಿಲ್ಡಪ್ಸ್ ಮತ್ತು ಲುಕ್ಸ್ ಇಟ್ಟುಕೊಂಡು ಆ ಹಾಡನ್ನು ಚಿತ್ರೀಕರಿಸಲಾಗಿದೆ. ಶಿವಣ್ಣ ಇಲ್ಲಿ ಫ್ರೆàಮ್‌ಗೆ ಬಂದರೆ ಸಾಕು, “ಬಂಗಾರ’ದಂತೆ ಕಾಣಾ¤ರೆ. ಅವರಿಗೆ ಸ್ಟೆಪ್ ಹಾಕಿಸಿದರೆ, ಆ ಖದರ್ ಲುಕ್ಕು, ಗತ್ತು ಎಲ್ಲೋ ಒಂದು ಕಡೆ ಡಲ್ ಆಗಬಾರದು ಎಂಬ ಉದ್ದೇಶದಿಂದ ಬರೀ, ಅವರ ಬಿಲ್ಡಪ್ಸ್ ಶಾಟ್‌ಗಳನ್ನೇ ಬಳಸಿಕೊಂಡು ಚಿತ್ರೀಕರಿಸಿದ್ದೇನೆ.
ಈಗಾಗಲೇ ಶಿವಣ್ಣ ಅವರ ಜತೆ ಕೆಲಸ ಮಾಡಿದ್ದೇನೆ. ಅವರೊಬ್ಬ ಅದ್ಭುತ ಡ್ಯಾನ್ಸರ್ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ಮೊದಲ ಸಲ ನಾನು ಅವರಿಂದ ಯಾವುದೇ ಸ್ಟೆಪ್ ಹಾಕಿಸದೆಯೇ ಚಿತ್ರೀಕರಿಸಿದ್ದೇನೆ. ಆದರೆ, ಅಭಿಮಾನಿಗಳಿಗಂತೂ ಎಂದಿಗಿಂತಲೂ ಶಿವಣ್ಣ ಈ ಹಾಡಲ್ಲಿ ಇಷ್ಟವಾಗುತ್ತಾರೆ’ ಎಂಬ ಭರವಸೆ ಕೊಡುತ್ತಾರೆ ಹರ್ಷ. ಅಂದಹಾಗೆ, ಚೇತನ್‌ಕುಮಾರ್ ಬರೆದ “ಮುಂದೆ ನಿಂತ್ರು ನೂರು ಗನ್ನು, ಜಗ್ಗೊàದಿಲ್ಲ ಯುವರಾಜನು …’ ಎಂಬ ಪರವ್‌ಫುಲ್ ಹಾಡಿಗೆ ಚೇತನ್ ಗಂಧರ್ವ ದನಿಯಾಗಿದ್ದಾರೆ.
ಈ ಹಾಡು ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣಗೊಳ್ಳುವ ಮೂಲಕ ಚಿತ್ರಕ್ಕೆ ಕುಂಬಳಕಾಯಿ ಬಿದ್ದಿದೆ. ವೀರ್‌ಸಮರ್ಥ್ ಸಂಗೀತ ನೀಡಿದ್ದಾರೆ. ತರುಣ್ ಶಿವಪ್ಪ ನಿರ್ಮಾಣವಿದೆ. ನರಸಿಂಹ (ಸಹನಾ ಮೂರ್ತಿ) ನಿರ್ದೇಶಕರು. ಈ ಚಿತ್ರದಲ್ಲಿ ವಿಜಯರಾಘವೇಂದ್ರ, ಗುರು ಜಗ್ಗೇಶ್, ಪ್ರಣೀತಾ, ಆಶಿಕಾ ಇತರರು ನಟಿಸಿದ್ದಾರೆ. ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.