Advertisement

ಉಪ್ಪಿ “ಐ ಲವ್ ಯೂ’ಗೆ ಶಿವರಾಜಕುಮಾರ್ ಕ್ಲಾಪ್

02:28 PM May 21, 2018 | |

ಆರ್.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್ ಯೂ’ ಚಿತ್ರಕ್ಕೆ ಇಂದು ಕಂಠೀರವ ಸ್ಟುಡಿಯೋದಲಿ ಮುಹೂರ್ತ ನಡೆಯಿತು. ಉಪೇಂದ್ರ ನಾಯಕರಾಗಿರುವ ಈ ಚಿತ್ರದ ಮೊದಲ ದೃಶ್ಯಕ್ಕೆ ಶಿವರಾಜಕುಮಾರ್ ಕ್ಲಾಪ್ ಮಾಡಿದರು. ಮುಹೂರ್ತಕ್ಕೆ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿದಂತೆ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಹಲವು ಮಂದಿ ಆಗಮಿಸಿ, ಚಂದ್ರು ಉಪ್ಪಿಗೆ ಶುಭಕೋರಿದರು.

Advertisement

ಇದು “ಎ’, “ಉಪೇಂದ್ರ’ ಹಾಗೂ “ಪ್ರೀತ್ಸೆ’ ಶೈಲಿಯ ಲವ್‍ಸ್ಟೋರಿಯಾಗಿದ್ದು, ಉಪೇಂದ್ರ ಅವರ ಪಾತ್ರ ಕೂಡಾ ವಿಭಿನ್ನವಾಗಿದ್ದು, ಇಲ್ಲಿ ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಲಿದ್ದಾರಂತೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಉಳಿದಂತೆ ಪ್ರದೀಪ್ ರಾವತ್, ಶಯ್ಯಾಜಿ, ರವಿಕಾಳೆ, ರವಿಶಂಕರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಕಿರಣ ತೊಟಮ್ ಬೈಲು ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next