Advertisement

Shivaraj Tangadagi: ಇಂದು ಸಂಜೆ ಇಲ್ಲವೇ ನಾಳೆಗೆ ಡ್ಯಾಂ ಗೇಟ್ ಸಿದ್ದ- ಸಚಿವ ತಂಗಡಗಿ

01:59 PM Aug 13, 2024 | Team Udayavani |

ಕೊಪ್ಪಳ: ಇಂದು ಸಂಜೆ ಇಲ್ಲವೇ ನಾಳೆ ಬೆಳಗ್ಗೆಯೊಳಗೆ ನೂತನ ಗೇಟ್ ತಯಾರಾಗಲಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ್ ತಂಗಡಗಿ ಹೇಳಿದರು.

Advertisement

ತಾಲೂಕಿನ ಬಸಾಪೂರ ಗ್ರಾಮದ ಹೆಲಿಪ್ಯಾಡ್ ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಜಲಾಶಯದಿಂದ ನದಿಗೆ ಬಿಡುವ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ. ಈಗಾಗಲೇ ತಜ್ಞ ಕನ್ನಯ್ಯ ನಾಯ್ಡು ಅವರೊಂದಿಗೆ ಸುದಿರ್ಘ ಚರ್ಚೆ ನಡೆಸಿದ್ದೇವೆ. ಕನ್ನಯ್ಯ ಅವರದ್ದು ಒಂದು ತಂಡ ಹಾಗೂ ನಮ್ಮ ಇಲಾಖೆಯ ತಜ್ಞರೊಂದಿಗೆ ಹಲವು ವಿಷಯಗಳ ಕುರಿತು ಚರ್ಚೆ ಮಾಡಲಾಗಿದೆ.ಸೋಮವಾರ ತುಂಗಭದ್ರಾ ಬೋರ್ಡ್ ಸಭೆ ನಡೆದಿದ್ದು, ಸಭೆಯಲ್ಲಿ ಗೇಟ್ ಡಿಸೈನ್ ಗೆ ಅನುಮತಿ ದೊರಕಿದೆ. ಈ ಕುರಿತಂತೆ ಸಿಎಂ, ಡಿಸಿಎಂ ಅವರೊಂದಿಗೆ ಮಾತುಕತೆ ನಡೆಸಲಾಗಿದೆ‌ ಎಂದರು.

ಇದನ್ನೂ ಓದಿ: Cm Siddaramaiah: ತುಂಗಭದ್ರಾ ಡ್ಯಾಂನ ಗೇಟ್ ಮುರಿದ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ

ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಭಾವುಕ ವಿಚಾರಕ್ಕೆ ಪ್ರತಿಕ್ರಿಯಿಸಿದ ತಂಗಡಗಿ, ಅವರು ತುಂಗಭದ್ರಾ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಭಾಗದ ಮೇಲೆ ಅವರಿಗೆ ವಿಶೇಷ ಪ್ರೀತಿಯಿದೆ‌.  ಡ್ಯಾಂನ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಹೀಗಾಗಿ ಡ್ಯಾಂ ಗೇಟ್ ಮುರಿದಿರುವುದರಿಂದ ಭಾವುಕರಾಗಿದ್ದಾರೆ ಎಂದರು.

ಡ್ಯಾಂ ಗೇಟ್ ಅಳವಡಿಕೆಗೆ ಪ್ಲ್ಯಾನ್ ಎ, ಬಿ ಮಾಡಿದ ವಿಚಾರದಲ್ಲಿ  ಪ್ಲ್ಯಾನ್ ಎ ದಲ್ಲಿ 64 ಫಿಟ್ ಅಗಲ, 4 ಫಿಟ್ ಎತ್ತರದ 5 ಫ್ಲೇಟ್ ಗಳನ್ನು ಹಂತ-ಹಂತವಾಗಿ ನೀರಿನಲ್ಲಿ ಇಳಿಬಿಟ್ಟು ನೀರು ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಸಲಹೆಯನ್ನು ತಜ್ಞ ಕನ್ನಯ್ಯ ಅವರ ತಂಡ ನೀಡಿದೆ. ಈ ಕಾರ್ಯಾಚರಣೆ ವೇಳೆ ಯಾವುದೇ ವ್ಯಕ್ತಿಗಳನ್ನು ಡ್ಯಾಂನತ್ತ ಬಿಡದಂತೆ ಸೂಚನೆ ನೀಡಿದ್ದಾರೆ.

Advertisement

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಆ.17ರಿಂದ ಮಳೆ ಮುನ್ಸೂಚನೆ ವಿಚಾರ, ಅಷ್ಟರೊಳಗೆ ಡ್ಯಾಂಗೆ ಗೇಟ್ ಅಳವಡಿಕೆ ಮಾಡುವುದಕ್ಕೆ ಪ್ರಯತ್ನ ನಡೆಸಿದ್ದೇವೆ. ತುಂಗಭದ್ರಾ ಡ್ಯಾಂ ಗೇಟ್ ಗಳ ನಿರ್ವಹಣೆ ಸಂಪೂರ್ಣ ಹೊಣೆ ತುಂಗಭದ್ರಾ ಬೋರ್ಡ್ ನದ್ದಾಗಿದೆ. ಬೋರ್ಡ್ ಕೇಂದ್ರ ಸರಕಾರದ ಅಧೀನದಲ್ಲಿ ಬರಲಿದೆ. ನಾವು ಮೊದಲು ನೀರು ನಿಲ್ಲಿಸಿ, ಡ್ಯಾಂ ರಕ್ಷಣೆ ಮಾಡಿ, ನಂತರ ತನಿಖೆ ಮಾಡಲಿದ್ದೇವೆ. ಮೊದಲಿಗೆ ರೈತರ ಹಿತ ಕಾಪಾಡಲಾಗುವುದು ಎಂದರು.

ಸಾಮಾಜಿಕ ಜಾಲತಾಣದಲ್ಲಿ ಜಲಾಶಯದ ಕಾಮಗಾರಿ ಫೇಕ್ ವಿಡಿಯೋ ವೈರಲ್ ಹಾಗುತ್ತಿದೆ. ಅದು ತುಂಗಭದ್ರಾ ಜಲಾಶಯದ್ದಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next