ಕನಕಗಿರಿ: ಬಿಜೆಪಿಯಲ್ಲಿ ಬೀಜದ ಹೋರಿಗಳಿಲ್ಲ, ಅಲ್ಲಿ ಇರೋದು ಕಾಂಗ್ರೆಸ್, ಜೆಡಿಎಸ್ ಬೀಜಗಳು. ನಮ್ಮವರನ್ನೇ ಎತ್ತುಕೊಂಡು ಹೋಗಿ ತಮ್ಮ ಪಕ್ಷದವರು ಎನ್ನುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕನಕಗಿರಿ ಕ್ಷೇತ್ರಕ್ಕೆ ಶಾಸಕ ಬಸವರಾಜ್ ದಢೇಸುಗೂರು ಕೊಡುಗೆ ಎಂದರೆ ಎಂಎಸ್ ಐಎಲ್, ಲಿಕ್ಕರ್ ಶಾಪ್‌ಗ್ಳು. ನಾನು ತಂದ ಯೋಜನೆಗಳನ್ನೇ ತಮ್ಮವು ಎನ್ನುತ್ತಿದ್ದಾರೆ. ನಾನು ಯಾವತ್ತೂ ಸ್ವಜಾತಿಯ ಅಕಾರಿಗಳನ್ನು ತರಲಿಲ್ಲ. ಆದರೆ ಬಸವರಾಜ್ ದಢೇಸುಗೂರು ಆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ :ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸರಳ ಸಂಪನ್ನ
ಕಾಂಗ್ರೆಸ್‌ನಿಂದ ಹಮ್ಮಿ ಕೊಳ್ಳಲಾಗಿರುವ ಪ್ರತಿಭಟನೆಗಳ ಮುಕ್ತಾಯದ ನಂತರ ದೆಹಲಿಯ ಗಡಿಗೆ ಹೋಗಿ ರೈತರ ಹೋರಾಟದ ಜೊತೆ ನಿಲ್ಲುತ್ತೇನೆ. ಕಾರಟಗಿಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಟ್ರ್ಯಾಕ್ಟರ್ ರ್ಯಾಲಿ ಇಡೀ ರಾಜ್ಯದಲ್ಲೇ ಮಾದರಿಯಾಗಬೇಕು. ಫೆ. 15ರಂದು ನಡೆಯುವ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸಿದ್ದಪ್ಪ ನಿಲೂìಟಿ, ಮಹ್ಮದ್ ರμ, ಮಲ್ಲಿಕಾರ್ಜುನಗೌಡ, ಶರಣಬಸವರೆಡ್ಡಿ ಬರಗೂರು, ಮಂಜುನಾಥ್ ಜಿ., ಶರಣಪ್ಪ ಭತ್ತದ, ಖಾಜಾಸಾಬ್ ಗುರಿಕಾರ, ಮಹ್ಮದ್ ಪಾಷಾಸಾಬ್, ಹುಲಗಪ್ಪ ವಾಲೆಕಾರ, ಕನಕದಾಸ ಪೂಜಾರಿ, ಭೀಮನಗೌಡ ಹೊಸಕೇರಾ, ಅನಿಲಕುಮಾರ್ ಬಿಜ್ಜಳ್, ರಾಜಾಸಾಬ್ ನಂದಾಪುರ, ಸಂಗಪ್ಪ ಸಜ್ಜನ್, ವಿರೂಪಾಕ್ಷಿ ಸೇರಿದಂತೆ ಇತರರಿದ್ದರು.