ಶಿವರಾಜ್ ಕುಮಾರ್ ನಾಯಕರಾಗಿರುವ “ಘೋಸ್ಟ್’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿದೆ. ಚಿತ್ರವನ್ನು ಶ್ರೀನಿ ನಿರ್ದೇಶಿಸಿದ್ದಾರೆ. ಇನ್ನು, ಔಟ್ ಆ್ಯಂಡ್ ಔಟ್ ಆ್ಯಕ್ಷನ್-ಥ್ರಿಲ್ಲರ್ ಕಥಾಹಂದರದ ಸಿನಿಮಾ. ಈಗಾಗಲೇ ಬಿಡುಗಡೆಯಾಗಿರುವ “ಘೋಸ್ಟ್’ ಸಿನಿಮಾದ ಪೋಸ್ಟರ್‌ಗಳಲ್ಲೂ ಶಿವಣ್ಣ ಅವರ ಕೆಲವು ಗೆಟಪ್ ಗಳು ಗಮನ ಸೆಳೆಯುವಂತಿದೆ. ಹಾಗಾದರೆ, “ಘೋಸ್ಟ್’ ಸಿನಿಮಾದಲ್ಲಿ ನಿಜಕ್ಕೂ ಶಿವಣ್ಣ ಎಷ್ಟು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲೂ ಇದೆ.
ಇದಕ್ಕೆ ಈಗ ಶಿವಣ್ಣ ಅವರೇ ಉತ್ತರಿಸಿದ್ದಾರೆ. “ಈ ಸಿನಿಮಾದಲ್ಲಿ ನಾನು 3 ಶೇಡ್‌ನಲ್ಲಿ ಕಾಣಿಸಿಕೊಳ್ತೀನಿ. ಕಥೆ ಮತ್ತು ಪಾತ್ರಕ್ಕೆ ತಕ್ಕಂತೆ ಸಿನಿಮಾದಲ್ಲಿ 3 ಲುಕ್‌ನಲ್ಲಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅದು ಎಲ್ಲರಿಗೂ ಖುಷಿ ಕೊಡಲಿದೆ ಅಂತ ಭಾವಿಸಿದ್ದೇನೆ. ಇದಕ್ಕಿಂತ ಹೆಚ್ಚಾಗಿ ಈಗಲೇ ನನ್ನ ಪಾತ್ರದ ಬಗ್ಗೆ ಹೆಚ್ಚೇನೂ ಮಾತನಾಡಲಾರೆ. ಆಡಿಯನ್ಸ್ ಥಿಯೇಟರ್ ನಲ್ಲಿ ನೋಡುವಾಗಲೂ ಒಂದಷ್ಟು ಸಸ್ಪೆನ್ಸ್-ಥ್ರಿಲ್ಲಿಂಗ್ ಇರಲಿ’ ಎನ್ನುವುದು ಶಿವಣ್ಣ ಮಾತು.
ಇದನ್ನೂ ಓದಿ:Kerala: ಪಾಕಿಸ್ತಾನದಿಂದ ರವಾನೆ…25,000 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಕ್ಕೆ, ಓರ್ವನ ಬಂಧನ
“ಘೋಸ್ಟ್’ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲೂ ಏಕಕಾಲದಲ್ಲೆ ನಿರ್ಮಾಣವಾಗುತ್ತಿದೆ. ಸಿನಿಮಾದಲ್ಲಿ ನಟ ಶಿವರಾಜ ಕುಮಾರ್ ಅವರೊಂದಿಗೆ ಬಹುಭಾಷಾ ನಟರಾದ ಅನುಪಮ್ ಖೇರ್, ಜಯರಾಮ್ ಇನ್ನಿತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮೊದಲ ಬಾರಿಗೆ ಇಂಥ ದಿಗ್ಗಜರ ಜೊತೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಶಿವಣ್ಣ ಕೂಡ ಫುಲ್ ಖುಷಿಯಾಗಿದ್ದಾರೆ.
“ಅನುಪಮ್ ಖೇರ್ ಅವರು ದೇಶದಲ್ಲಿ ಒಂದೇ ಅಲ್ಲ, ವಿಶ್ವದಲ್ಲಿ ಒಳ್ಳೆಯ ನಟ. ಅವರಿಂದ ಕಲಿಯುವುದು ಸಾಕಷ್ಟಿದೆ. ಸಿನಿಮಾದಲ್ಲಿ ಅವರಿಗೊಂದು ವಿಶೇಷ ಪಾತ್ರವಿದೆ. ಖಂಡಿತ ಅವರ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಇನ್ನು ಜಯರಾಮ್ ಅವರೊಂದಿಗೆ ಅಭಿನಯಿಸಲು ಕಾಲ ಕೂಡಿ ಬಂದಿರಲಿಲ್ಲ. ಈ ಸಿನಿಮಾದಲ್ಲಿ ಅವರೊಂದಿಗೂ ಅಭಿನಯಿಸುವ ಅವಕಾಶ ಬಂದಿದೆ. ಈ ಸಿನಿಮಾದಲ್ಲಿ ಜಯರಾಮ್ ಅವರಿಂದ ಒಂದು ಪಾತ್ರ ಮಾಡಿಸೋಣ ಅಂತ ನಾನು ಹೇಳಿದ್ದೆ. ಟೀಮ್ ಕೂಡ ಈ ಪಾತ್ರಕ್ಕೆ ಅವರೇ ಸೂಕ್ತ ಎನಿಸಿತು’ ಎನ್ನುವುದು ಶಿವರಾಜ ಕುಮಾರ್.