Advertisement
ಶಿವರಾಜ್ ಕುಮಾರ್ ಆರೋಗ್ಯ ಏರುಪೇರು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಮುಂದೆ ನೂರಾರು ಸಂಖ್ಯೆಯಲ್ಲಿಅಭಿಮಾನಿಗಳು, ಚಿತ್ರರಂಗದ ಗಣ್ಯರು ಜಮಾಯಿಸಿದ್ದರು. ನಟ ಪುನೀತ್ ರಾಜಕುಮಾರ್, ನಿರ್ದೇಶಕ ಜೋಗಿ ಪ್ರೇಮ್
ಮೊದಲಾದವರು ಆಸ್ಪತ್ರೆಗೆ ಆಗಮಿಸಿ ಶಿವಣ್ಣನ ಆರೋಗ್ಯ ವಿಚಾರಿಸಿದರು. ಸಂಜೆ ವೇಳೆ ಆಸ್ಪತ್ರೆಯಿಂದ ಹೊಸಬಂದ
ಶಿವರಾಜ್ ಕುಮಾರ್, “ಸ್ವಲ್ಪ ಚಳಿ, ಜ್ವರ ಇದ್ದಿದ್ದರಿಂದ ಆಸ್ಪತ್ರೆಗೆ ಬಂದೆ. ಡಾಕ್ಟರ್ ಸಲಹೆ ಮೇರೆಗೆ ಇಂದು ಆಸ್ಪತ್ರೆಯಲ್ಲೇ ಇರುತ್ತೇನೆ. ನಾಳೆ ಡಿಸ್ಚಾರ್ಜ್ ಆಗುತ್ತೇನೆ. ಅಭಿಮಾನಿಗಳು ಆತಂಕಪಡಬೇಕಾಗಿಲ್ಲ ಎಂದು ಹೇಳಿದರು.