Advertisement
ಸಾಧನಕೇರಿಯ ಬೇಂದ್ರೆ ಭವನದಲ್ಲಿ ರವಿವಾರ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 1 ಲಕ್ಷ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡ ಪ್ರಶಸ್ತಿಯನ್ನು ಗಡಿ ಅಭಿವೃದ್ದಿ ಪ್ರಾಧಿಕಾರದ ಡಾ| ಪಿ.ಸೋಮಶೇಖರ ಅವರು ಪ್ರದಾನ ಮಾಡಿದರು. ನಂತರ ಮಾತನಾಡಿದ ಡಾ| ಸೋಮಶೇಖರ, ಬೇಂದ್ರೆ ಅವರ ಮನೆ ಭಾಷೆ, ಮನೆಯಂಗಳದ ಭಾಷೆಯೇ ಬೇರೆ ಬೇರೆಯಾಗಿತ್ತು. ಬೇಂದ್ರೆ ಮನೆ ಭಾಷೆ ಮರಾಠಿ ಆಗಿದ್ದರೂ ಮನದಂಗಳದ ಭಾಷೆ ಕನ್ನಡವಾಗಿತ್ತು. ಯಾವ ಮರಾಠಿ, ಯಾವ ಕನ್ನಡ, ನಮ್ಮ ನಮ್ಮಲ್ಲೇ ಯಾಕಿಷ್ಟು ಸಂಘರ್ಷ ಎಂಬುದೇ ತಿಳಿಯುತ್ತಿಲ್ಲ. ಇವೆಲ್ಲವೂ ದೂರವಾಗಬೇಕಾದರೆ ಸಾಹಿತಿಗಳೇ ಅಧಿಕಾರಕ್ಕೆ ಬರಬೇಕು. ಆಗ ಮಾತ್ರ ಸಾಮರಸ್ಯ, ಏಕತೆ ಬರಲು ಸಾಧ್ಯವಿದೆ ಎಂದರು.
Related Articles
Advertisement
ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಕನ್ನಡದ ದೇಸಿತನ, ಜಾನಪದ ಪರಂಪರೆಯನ್ನು ತಮ್ಮ ಕಾವ್ಯದಲ್ಲಿ ಧಾರಾಳವಾಗಿ ಬಳಸಿದವರು ಡಾ| ಎಚ್.ಎಸ್. ಶಿವಪ್ರಕಾಶ. ಹೀಗಾಗಿ ಅವರ ಕಾವ್ಯವನ್ನು ಭಾರತೀಯ ಅಥವಾ ಪಾಶ್ಚಾತ್ಯ ಕಾವ್ಯ ಮೀಮಾಂಸೆ ಚೌಕಟ್ಟಿನಲ್ಲಿ ವಿವರಿಸುವುದು ಕಷ್ಟ. ಅದಕ್ಕಾಗಿಯೇ ದೇಸಿ ಕಾವ್ಯ ಮೀಮಾಂಸೆ ಅಗತ್ಯವಿದೆ ಎಂದರು. ಜಿಲ್ಲಾ ಧಿಕಾರಿ ನಿತೇಶ ಪಾಟೀಲ ಮಾತನಾಡಿದರು.
ಇದನ್ನೂ ಓದಿ:‘ಮನ್ ಕಿ ಬಾತ್’ ನಂತರ “ನಾರಿ ಶಕ್ತಿ”ಯ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಕರೀನಾ, ದೀಪಿಕಾ
ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ| ಡಿ.ಎಂ. ಹಿರೇಮಠ, ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರೊ| ದುಷ್ಯಂತ ನಾಡಗೌಡ, ರಾಘವೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಶ್ರೀನಿವಾಸ ವಾಡಪ್ಪಿ, ಮಂಜುಳಾ ಯಲಿಗಾರ ಇದ್ದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಡಾ| ಗೋಪಾಲಕೃಷ್ಣ ಬಿ. ಸ್ವಾಗತಿಸಿದರು. ಮಾಯಾ ರಾಮನ್ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.