Advertisement

“ಭರಾಟೆ’ಗೆ ಧ್ವನಿಯಾದ ಶಿವಣ್ಣ

09:58 AM Sep 23, 2019 | Lakshmi GovindaRaju |

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರ ಅಕ್ಟೋಬರ್‌ನಲ್ಲಿ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ “ಭರಾಟೆ’ಯನ್ನು ಪ್ರೇಕ್ಷಕರಿಗೆ ತಲುಪಿಸಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಇದರ ನಡುವೆಯೇ “ಭರಾಟೆ’ ಚಿತ್ರತಂಡದ ಕಡೆಯಿಂದ ಮತ್ತೂಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಸದ್ಯ ಸದ್ದು ಮಾಡುತ್ತಿರುವ “ಭರಾಟೆ’ ಚಿತ್ರಕ್ಕೆ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ ಹಿನ್ನೆಲೆ ಧ್ವನಿ ನೀಡಿದ್ದಾರೆ.

Advertisement

ಹೌದು, ನಿರ್ದೇಶಕ ಚೇತನ್‌ ಕುಮಾರ್‌ ಮೊದಲಿನಿಂದಲೂ ತಮ್ಮ ಚಿತ್ರಕ್ಕೆ ಒಬ್ಬೊಬ್ಬರು ಸ್ಟಾರ್‌ ನಟರಿಂದ ಹಿನ್ನೆಲೆ ಧ್ವನಿಯನ್ನು ಕೊಡಿಸುತ್ತಿದ್ದು “ಭರಾಟೆ’ ಚಿತ್ರದಲ್ಲೂ ಅದನ್ನು ಮುಂದುವರೆಸಿದ್ದಾರೆ. ಈ ಹಿಂದೆ ಚೇತನ್‌ ಕುಮಾರ್‌ ನಿರ್ದೇಶನದ “ಬಹದ್ದೂರ್‌’ ಚಿತ್ರಕ್ಕೆ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಹಿನ್ನೆಲೆ ಧ್ವನಿ ನೀಡಿದ್ದರೆ, “ಭರ್ಜರಿ’ ಚಿತ್ರಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಿನ್ನೆಲೆ ಧ್ವನಿ ನೀಡಿದ್ದರು. ಅದರಂತೆ ಈ ಬಾರಿ “ಭರಾಟೆ’ ಚಿತ್ರಕ್ಕೆ ಶಿವಣ್ಣ ಧ್ವನಿಯಾಗಿದ್ದಾರೆ.

ಇನ್ನು ಸೆಟ್ಟೇರಿದಾಗಿನಿಂದಲೂ “ಭರಾಟೆ’ ಚಿತ್ರ ಗಾಂಧಿನಗರದಲ್ಲಿ ಜೋರಾಗಿಯೇ ಸೌಂಡ್‌ ಮಾಡುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್‌, ಫ‌ಸ್ಟ್‌ಲುಕ್‌, ಹಾಡುಗಳು ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next