Advertisement

ಐಟಿ ವಿಚಾರಣೆಗೆ ಹಾಜರಾದ ಶಿವಣ್ಣ, ರಾಕ್‌ಲೈನ್‌ ವೆಂಕಟೇಶ್‌

09:02 AM Jan 09, 2019 | |

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಮತ್ತು ನಿರ್ಮಾಪಕರ ಮೇಲಿನ ಐಟಿ ದಾಳಿ ಪ್ರಕರಣ ಸಂಬಂಧ ಮಂಗಳವಾರ ನಟ ಶಿವರಾಜ್‌ಕುಮಾರ್‌ ಹಾಗೂ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಎದುರು ಮಂಗಳವಾರ ವಿಚಾರಣೆಗೆ ಹಾಜರಾದರು.

Advertisement

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಬೆಳಗ್ಗೆ 11 ಗಂಟೆ ಸುಮಾರಿಗೆ ಹಾಜರಾದರೆ, ಮಧ್ಯಾಹ್ನ 3 ಗಂಟೆ ಸುಮಾರಿಗೆ ನಟ ಶಿವರಾಜ್‌ ಕುಮಾರ್‌ ವಿಚಾರಣೆಗೆ ಹಾಜರಾಗಿ ಸುಮಾರು ಒಂದೂವರೆ ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ಎದುರಿಸಿದರು.

ದಾಳಿಗೆ ಸಂಬಂಧಿಸಿದಂತೆ ಇಬ್ಬರ ಮನೆ ಮತ್ತು ಕಚೇರಿಗಳಲ್ಲಿ ಪತ್ತೆಯಾದ ಆಸ್ತಿ ದಾಖಲೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದ್ದು, ಎಲ್ಲದಕ್ಕೂ ಶಿವರಾಜ್‌ ಕುಮಾರ್‌ ಹಾಗೂ ರಾಕ್‌ಲೈನ್‌ ವೆಂಕಟೇಶ್‌ ತಾಳ್ಮೆಯಿಂದಲೇ ಉತ್ತರಿಸಿದ್ದಾರೆ. ಅಗತ್ಯಬಿದ್ದಲ್ಲಿ ಮತ್ತೂಮ್ಮೆ ವಿಚಾರಣೆಗೆ ಕರೆಸಿಕೊಳ್ಳಲಾಗುವುದು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವರಾಜ್‌ ಕುಮಾರ್‌, ಮನೆಯಲ್ಲಿ ಸಿಕ್ಕ ದಾಖಲೆಗಳ ಕುರಿತು ಐಟಿ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದರು. ಎಲ್ಲದಕ್ಕೂ ಉತ್ತರಿಸಿದ್ದೇನೆ. ಮತ್ತೂಮ್ಮೆ ವಿಚಾರಣೆಗೆ ಕರೆದರೆ ಖಂಡಿತ ಬರುತ್ತೇನೆ ಎಂದರು.

ರಾಕ್‌ಲೈನ್‌ ಮಾಲ್‌, ಪ್ರೋಡಕ್ಷನ್‌ ಬಗ್ಗೆ ಮಾಹಿತಿ: ವಿಚಾರಣೆಗೆ ಹಾಜರಾದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ಗೆ, ರಾಕ್‌ಲೈನ್‌ ಮಾಲ್‌, ರಾಕ್‌ಲೈನ್‌ ಪ್ರೋಡಕ್ಷನ್‌ ಹಾಗೂ ರಾಕ್‌ಲೈನ್‌ ಗ್ರೂಪ್‌ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ರಾಕ್‌ಲೈನ್‌ ವೆಂಕಟೇಶ್‌, ಮತ್ತೂಮ್ಮೆ ವಿಚಾರಣೆಗೆ ಕರೆಯುವುದಾಗಿ ಐಟಿ ಅಧಿಕಾರಿಗಳು ಹೇಳಿದ್ದಾರೆ. ಸಿನಿಮಾ ಉದ್ಯಮದಲ್ಲಿ ಅಕ್ರಮ ಆಸ್ತಿಗಳಿಸಬಹುದೇ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ದಾಳಿ ಸಂದರ್ಭದಲ್ಲಿ ಕೊಟ್ಟಿದ್ದ ಹೇಳಿಕೆಯನ್ನು ದೃಢೀಕರಿಸಲು ಬಂದಿದ್ದೇನೆ ಎಂದರು.

Advertisement

ಎರಡು ಕಪ್‌ ಕಾಫಿ, ಅಪ್ಪಾಜಿ ಬಗ್ಗೆ ಮಾತು: ಸುಮಾರು ಒಂದು ಗಂಟೆ ಕಾಲ ವಿಚಾರಣೆಯಲ್ಲಿ ಕೇವಲ 15 ನಿಮಿಷ ಮಾತ್ರ ಐಟಿ ದಾಳಿ ಬಗ್ಗೆ ಮಾಹಿತಿ ಕೇಳಿದರು. ಇನ್ನುಳಿದಂತೆ ಎರಡು ಕಪ್‌ ಕಾಫಿ ಕೊಟ್ಟು, ಅಪ್ಪಾಜಿ ಹಾಗೂ ಶೂಟಿಂಗ್‌ ಬಗ್ಗೆ ಅಧಿಕಾರಿಗಳು ಮಾತನಾಡಿದರು. ನಮ್ಮ ವೃತ್ತಿ ಬಗ್ಗೆ ಅವರಿಗೆ ಗೌರವ ಇದೆ. ನಾವು ಕೂಡ ಅವರ ಕೆಲಸವನ್ನು ಗೌರವಿಸುತ್ತೇನೆ ಎಂದು ಶಿವರಾಜ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next