Advertisement

“ವಿಶ್ವಾಸಂ’ನಿರ್ಮಾಪಕರ ಚಿತ್ರದಲ್ಲಿ ಶಿವಣ್ಣ

11:18 AM Jan 05, 2020 | Lakshmi GovindaRaj |

ತಮಿಳು ನಿರ್ದೇಶಕರ ಸಿನಿಮಾವೊಂದರಲ್ಲಿ ಶಿವರಾಜಕುಮಾರ್‌ ನಟಿಸಲಿದ್ದಾರೆಂಬ ಸುದ್ದಿಯನ್ನು ನೀವು ಈ ಹಿಂದೆ ಕೇಳಿರಬಹುದು. ಆದರೆ, ಆ ಚಿತ್ರವನ್ನು ಯಾರು ನಿರ್ಮಾಣ ಮಾಡುತ್ತಾರೆ, ಅದರ ನಿರ್ದೇಶಕರು ಯಾರು? ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ, ಈಗ ಬಹುತೇಕ ಎಲ್ಲವೂ ಅಂತಿಮವಾಗಿದೆ. ತಮಿಳಿನ ಸತ್ಯ ಜ್ಯೋತಿ ಫಿಲಂಸ್‌ ಈ ಚಿತ್ರವನ್ನು ನಿರ್ಮಿಸುತ್ತಿದೆ.

Advertisement

ಈ ಹಿಂದೆ “ವಿಶ್ವಾಸಂ’, “ವಿವೇಗಂ’, “ಪಟ್ಟಾಸ್‌’, “ತೋದರಿ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಸತ್ಯಜ್ಯೋತಿ ಫಿಲಂಸ್‌ ಈಗ ಶಿವರಾಜ ಕುಮಾರ್‌ ಸಿನಿಮಾ ಮೂಲಕ ಕನ್ನಡಕ್ಕೆ ಬರುತ್ತಿದೆ. ಈ ಚಿತ್ರವನ್ನು ರವಿ ಅರಸು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ತಮಿಳಿನಲ್ಲಿ “ಐನಾಗಾರನ್‌’ ಹಾಗೂ “ಎಟ್ಟಿ’ ಎನ್ನುವ ಸಿನಿಮಾ ನಿರ್ದೇಶಿಸಿರುವ ರವಿ ಈಗ ಶಿವರಾಜಕುಮಾರ್‌ ಅವರಿಗೆ ಸಿನಿಮಾ ಮಾಡಲಿದ್ದಾರೆ.

ಸದ್ಯ ಶಿವರಾಜಕುಮಾರ್‌ “ಭಜರಂಗಿ-2′ ಚಿತ್ರದಲ್ಲಿ ಬಿಝಿ ಇದ್ದಾರೆ. ಆ ಚಿತ್ರ ಮುಗಿದ ಬಳಿಕ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ನಡುವೆಯೇ ಶಿವಣ್ಣ ಯೋಗಿ ಜಿ ರಾಜ್‌ ನಿರ್ದೇಶನದಲ್ಲೂ ನಟಿಸಲಿದ್ದು, ಆ ಚಿತ್ರದಲ್ಲಿ ನೆಗೆಟಿವ್‌ ಶೇಡ್‌ನ‌ಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ “ಭೈರತಿ ರಣಗಲ್‌’ ಚಿತ್ರದಲ್ಲೂ ಶಿವಣ್ಣ ನಟಿಸಲಿದ್ದು, ನಿರ್ಮಾಣ ಕೂಡಾ ಅವರದ್ದೇ ಇರಲಿದೆ. ಸದ್ಯ ಶಿವರಾಜಕುಮಾರ್‌ ಅವರ “ದ್ರೋಣ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next