Advertisement

ವರ್ಲ್ಡ್ ಕ್ಲಾಸ್‌ ಫಿಲಂ ಸಿಟಿ ನಿರ್ಮಾಣ ಆಗ್ಬೇಕು “ಶಿವಣ್ಣ ಕನಸು’

10:30 AM Mar 13, 2020 | Lakshmi GovindaRaj |

ಸದ್ಯ ಕನ್ನಡ ಚಿತ್ರರಂಗದಲ್ಲಿ ಫಿಲಂ ಸಿಟಿಯ ಚರ್ಚೆ ಜೋರಾಗಿ ನಡೆಯುತ್ತಿದೆ. ಸರ್ಕಾರ ಬಜೆಟ್‌ನಲ್ಲಿ ಫಿಲಂ ಸಿಟಿಗಾಗಿ 500 ಕೋಟಿ ರೂಪಾಯಿ ಘೋಷಿಸುತ್ತಿದ್ದಂತೆ ಸಿನಿಮಾ ಮಂದಿ ಫಿಲಂ ಸಿಟಿ ಕನಸು ಕಾಣುತ್ತಿದ್ದಾರೆ. ನಟ ಶಿವರಾಜಕುಮಾರ್‌ ಅವರಿಗೂ ಫಿಲಂ ಸಿಟಿ ಬಗ್ಗೆ ಒಂದಷ್ಟು ಕನಸಿದೆ. ಶಿವಣ್ಣ ಹೇಳುವಂತೆ ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿರುವ ಫಿಲಂ ಸಿಟಿ ವರ್ಲ್ಡ್ ಕ್ಲಾಸ್‌ ಗುಣಮಟ್ಟದಲ್ಲಿರಬೇಕು.

Advertisement

ಆಗ ಒಳ್ಳೆಯ ಗುಣಮಟ್ಟದ ಸಿನಿಮಾ ಕೊಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಮಾತನಾಡುವ ಶಿವಣ್ಣ, “ತರಾತುರಿಯಲ್ಲಿ ಫಿಲಂ ಸಿಟಿ ಮಾಡುವ ಅಗತ್ಯವಿಲ್ಲ. ನಮಗೆ ವರ್ಲ್ಡ್ಕ್ಲಾಸ್‌ ಗುಣಮಟ್ಟದ ಫಿಲಂ ಸಿಟಿಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕು’ ಎನ್ನುವುದು ಶಿವಣ್ಣ ಮಾತು. ಫಿಲಂ ಸಿಟಿಯ ನಾಯಕತ್ವವನ್ನು ಯಾರು ವಹಿಸಬೇಕು ಎಂಬ ಚರ್ಚೆಯೂ ನಡೆಯುತ್ತಿದೆ. ಶಿವರಾಜಕುಮಾರ್‌ ಸೇರಿದಂತೆ ಅನೇಕ ನಟರ ಹೆಸರುಗಳು ಕೇಳಿಬರುತ್ತಿವೆ.

ಈ ಬಗ್ಗೆ ಮಾತನಾಡುವ ಶಿವಣ್ಣ, “ಇಲ್ಲಿ ಎಲ್ಲರೂ ನಾಯಕರೇ. ಹೀಗಿರುವಾಗ ಫಿಲಂ ಸಿಟಿಗಾಗಿ ಶ್ರಮಿಸೋದು ಪ್ರತಿಯೊಬ್ಬನ ಕರ್ತವ್ಯವಾಗುತ್ತದೆ’ ಎನ್ನುತ್ತಾರೆ. “ನನ್ನೊಂದಿಗೆ ಹೆಜ್ಜೆ ಹಾಕಲು ಎಲ್ಲರಿಗೂ ಸಹಮತವಿದ್ದರೆ ಒಳ್ಳೆಯ ಉದ್ದೇಶಕ್ಕಾಗಿ ಇದರ ಮುಂದಾಳತ್ವ ವಹಿಸಲು ಸಿದ್ಧನಿದ್ದೇನೆ. ಎಲ್ಲರೂ ತಿರುಗಿ ನೋಡುವಂತಹ ವಿಶ್ವ ದರ್ಜೆಯ ಫಿಲಂ ಸಿಟಿ ನಿರ್ಮಿಸೋದು ನಮ್ಮ ಗುರಿಯಾಗಬೇಕು’ ಎಂಬುದು ಶಿವಣ್ಣ ಮಾತು.

Advertisement

Udayavani is now on Telegram. Click here to join our channel and stay updated with the latest news.

Next