Advertisement

ಕ್ರೈಮ್‌-ಥ್ರಿಲ್ಲರ್‌ ಶಿವನ ಪಾದ: ವಿಶೇಷ ಪಾತ್ರದಲ್ಲಿ ಹೆಚ್‌.ಟಿ. ಸಾಂಗ್ಲಿಯಾನ

02:05 PM Oct 05, 2021 | Team Udayavani |

“ಶಿವನ ಪಾದ’ ಹೀಗೊಂದು ಚಿತ್ರ ಸೆಟ್ಟೇರಿದ್ದು ನಿಮಗೆ ನೆನಪಿರಬಹುದು. ಈಗ ಈ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿದೆ. ಉಳಿದ ಚಿತ್ರೀಕರಣ ಮುಂದಿನ ವಾರದಿಂದ ಆರಂಭವಾಗಲಿದೆ. ಈ ಚಿತ್ರವನ್ನು ಸಂದೀಶ್‌ ಹೆಚ್‌.ಟಿ. ಹಾಗೂ ಪೆರುಮಾಳ್‌ ವಿ. ಅವರ ನಿರ್ಮಾಣ ಮಾಡಿದ್ದಾರೆ.

Advertisement

ಮಾ.ಚಂದ್ರು ಈ ಚಿತ್ರದ ನಿರ್ದೇಶಕರು. “ಶಿವನ ಪಾದ’ ಒಂದು ಲವ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಜೊತೆಗೆ ಹಾರರ್‌ ಅಂಶವಿರುವ ಕ್ರೈಮ್‌ ಚಿತ್ರ. ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಹೆಚ್‌.ಟಿ. ಸಾಂಗ್ಲಿಯಾನ ಅವರು ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿಯೇ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವನ ಪಾದ ಎನ್ನುವುದು ಉತ್ತರ ಕರ್ನಾಟಕದಲ್ಲಿರುವ ಒಂದು ಪ್ರಸಿದ್ದ ಪ್ರವಾಸಿ ತಾಣ.

ಚಿತ್ರದಲ್ಲಿ ನಾಗೇಶ್‌ ಆರ್‌. ಆನಂದ್‌, ವರ್ಷಿತ ಗಿರೀಶ್‌, ಮೇಘನಾ, ಬಲ ರಾಜವಾಡಿ, ನವೀನ್‌ ಡಿ.ಪಡೀಲ್‌, ಅಂಜಲಿ, ಹರಿಹರನ್‌ ಬಿ.ಪಿ, ಆಟೋ ನಾಗರಾಜ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

ಇದನ್ನೂ ಓದಿ:ಕೂಲಿ ಕಾರ್ಮಿಕರ ಖಾತೆಗೆ ಜಮೆಯಾದ ಹಣ ಗುತ್ತಿಗೆದಾರರ ಖಾತೆಗೆ ವರ್ಗಾವಣೆ:ಸಾಮಾನ್ಯಸಭೆ ಬಹಿಷ್ಕಾರ

ಚಿತ್ರಕ್ಕೆ ವೀನಸ್‌ ಮೂರ್ತಿ ಛಾಯಾಗ್ರಹಣವಿದೆ. ವೀರ್‌ ಸಮರ್ಥ್ ಸಂಗೀತ, ವಿಜಯ್‌ ಭರಮಸಾಗರ ಅವರ ಸಾಹಿತ್ಯ, ವೆಂಕಿ ಯುವಿಡಿ ಅವರ ಸಂಕಲನ ಈ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next