Advertisement

ವೀರಶೈವ ಧರ್ಮಕ್ಕೆ ಶಿವಾಗಮಗಳೇ ಮೂಲ

03:22 PM Oct 12, 2021 | Adarsha |

ಶಿವಮೊಗ್ಗ: ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದವೀರಶೈವ ಧರ್ಮ, ಸಾಹಿತ್ಯಕ್ಕೆ 28 ಶಿವಾಗಮಗಳೇಮೂಲ ಬೇರುಗಳೆಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ಅಭಿಪ್ರಾಯಪಟ್ಟರು.
ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ ಕ್ಷೇತ್ರದಲ್ಲಿಜರಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮಸಮಾರಂಭದ 5ನೇ ದಿನದ ಸಾನ್ನಿಧ್ಯ ವಹಿಸಿ ಅವರುಆಶೀರ್ವಚನ ನೀಡಿದರು.

Advertisement

ಧರ್ಮ ಎನ್ನುವುದು ಹಸಿದವನಿಗೆ ಅನ್ನ,ಬಾಯಾರಿದವನಿಗೆ ನೀರು, ಕುರುಡನಿಗೆ ಕಣ್ಣು, ಹಕ್ಕಿಗೆರೆಕ್ಕೆ ಇದ್ದ ಹಾಗೆ. ಉದಾತ್ತ ಜೀವನ ಮೌಲ್ಯಗಳನ್ನುಸಂಪಾದಿಸಿಕೊಂಡು ನಡೆಯುವುದೇ ನಿಜವಾದಧರ್ಮ. ಪರಿಶುದ್ಧ ಮತ್ತು ಪವಿತ್ರವಾದ ಜೀವನ ರೂಪಿತಗೊಳ್ಳಲು ಧರ್ಮ ಪ್ರಜ್ಞೆ ಅವಶ್ಯಕವಾಗಿದೆ.

ವೀರಶೈವ ಧರ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಗೆಪ್ರಾಧಾನ್ಯತೆ ಕೊಟ್ಟಿದೆ. ಉತ್ಛ ನೀಚ, ಬಡವ- ಬಲ್ಲಿದಮತ್ತು ಗಂಡು- ಹೆಣ್ಣು ಎನ್ನುವ ತಾರತಮ್ಯವಿಲ್ಲದೆಸರ್ವರ ಶ್ರೇಯೋಭಿವೃದ್ಧಿಗೆ ಮಾರ್ಗದರ್ಶನನೀಡಿದೆ. ಮನುಷ್ಯ ಜೀವನದಲ್ಲಿ ಬದಲಾವಣೆ ಮತ್ತುಬೆಳವಣಿಗೆ ಎರಡೂ ಮುಖ್ಯ. ಹೂದೋಟದೊಳಗೆ ಯಾರೇ ಹೋಗಲಿ ಹೂಗಳು ಸುಗಂಧವನ್ನೇ ಬೀರುತ್ತವೆ.

ಹೂದೋಟದೊಳಗೆ ಹೋಗಿ ಬಂದನಂತರ ಮನುಷ್ಯ ಜೀವನ ಪರಿವರ್ತನೆಯಾಗಬೇಕು.ಮನೆಯ ಅಂಗಳದ ಕಸ ಗುಡಿಸಿ ಯಾರಾದರೂ ಹಸನಗೊಳಿಸಬಹುದು.

ಆದರೆ ಮನದ ಅಂಗಳವನ್ನುಶುಚಿಗೊಳಿಸುವುದು ಗುರುವಿನ ಆದ್ಯ ಕರ್ತವ್ಯವಾಗಿದೆ ಎಂದರು.

Advertisement

ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್‌ಮಾತನಾಡಿ, ವೀರಶೈವ ಧರ್ಮಕ್ಕೊಂದುಇತಿಹಾಸವಿದೆ. ಸೈದ್ಧಾಂತಿಕ ತತ್ವತ್ರಯಗಳಿವೆ. ಸುಖ-ಶಾಂತಿ ಮತ್ತು ಸಮೃದ್ಧ ಬದುಕಿಗೆ ಧರ್ಮಾಚಾರ್ಯರಕೊಡುಗೆ ಅಪಾರವಾಗಿದೆ. ಶ್ರೀ ರಂಭಾಪುರಿಜಗದ್ಗುರುಗಳ ದಸರಾ ಧರ್ಮ ಸಮಾರಂಭಜನಮನದ ಮೇಲೆ ಅರಿವು ನೀಡಿ ಆದರ್ಶ ವ್ಯಕ್ತಿತ್ವರೂಪಿಸುತ್ತದೆ ಎಂದರು.ಲಕ್ಷೆ ¾àಶ್ವರ ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷೆಡಾ| ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ಅವರಿಗೆ”ಸಾಹಿತ್ಯ ಸಿರಿ’ ಪ್ರಶಸ್ತಿ ಶ್ರೀ ರಂಭಾಪುರಿ ಜಗದ್ಗುರುಗಳುಪ್ರದಾನ ಮಾಡಿ ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿದಡಾ| ಜಯಶ್ರೀ ಮಲ್ಲಿಕಾರ್ಜುನ ಹೊಸಮನಿಮಾತನಾಡಿ, ಗುರು ಕಾರುಣ್ಯದ ಕೃಪಾ ಛತ್ರದಲ್ಲಿನಾನು ಮಾಡಿದ ಅಲ್ಪ ಸಾಹಿತ್ಯ ಸೇವೆಯನ್ನು ಗುರುತಿಸಿಪ್ರಶಸ್ತಿ ಅನುಗ್ರಹಿಸುತ್ತಿರುವುದು ನನ್ನ ಜೀವನದಸೌಭಾಗ್ಯವೆಂದು ಭಾವಿಸುವೆ. ಈ ಪ್ರಶಸ್ತಿಯಿಂದ ನನ್ನಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದರು.

ಕವಲೇದುರ್ಗ ಭುವನಗಿರಿ ಮಠದ ಮರುಳಸಿದ್ಧಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವಧರ್ಮ ಸಾಹಿತ್ಯದ ಅರಿವು ತಿಳಿಯಲು ಎಲ್ಲರೂಮುಂದಾಗಬೇಕಾಗಿದೆ ಎಂದರು. ಹಾರನಹಳ್ಳಿಶಿವಯೋಗಿ ಶಿವಾಚಾರ್ಯರು ಮತ್ತು ಚನ್ನಗಿರಿಯಕೇದಾರ ಶಿವಶಾಂತವೀರ ಶಿವಾಚಾರ್ಯರು,ನಿಡಗುಂದಿ ರುದ್ರಮುನಿ ಶಿವಾಚಾರ್ಯರು,ಕೋಣಂದೂರು ಶ್ರೀಪತಿ ಪಂಡಿತಾರಾಧ್ಯಶಿವಾಚಾರ್ಯರು, ಕೆ.ಎಸ್‌. ವೀರಪ್ಪದೇವರುಸೇರಿದಂತೆ ಹಲವಾರು ಗಣ್ಯರಿಗೆ ಶ್ರೀ ರಂಭಾಪುರಿಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯಸ್ವಾಮಿಗಳು ಸಮ್ಮುಖ ವಹಿಸಿ ಉಪದೇಶಾಮೃತನೀಡಿದರು.

ಕಡೇನಂದಿಹಳ್ಳಿ ಪುಣ್ಯಾಶ್ರಮದರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವವಹಿಸಿ ಮಾತನಾಡಿ ಈ ಅದ್ಭುತ ದಸರಾ ಧರ್ಮಸಮಾರಂಭದ ಯಶಸ್ಸಿಗೆ ಸಕಲ ಸದ್ಭಕ್ತರ ಸಹಕಾರ-ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದಕಾರಣವೆಂದರು. ಗಂಜೀಗಟ್ಟಿ ಕೃಷ್ಣಮೂರ್ತಿ ಜಾನಪದಗೀತೆಗಳನ್ನು ಪ್ರಸ್ತುತಪಡಿಸಿದರು. ಹೊಸಳ್ಳಿಯ ಭರತ್‌ಗು.ಚೀಲೂರು ಅವರು ಭರತ ನಾಟ್ಯ ಪ್ರದರ್ಶನನೀಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು.

ಕಡೇನಂದಿಹಳ್ಳಿಯ ಶಿಕ್ಷಕಿ ಕರಿಬಸಮ್ಮ ಸ್ವಾಗತಿಸಿದರು.ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಸಂಗೀತಸೌರಭ ಜರುಗಿತು. ಶಿವಮೊಗ್ಗದ ಶಾಂತಾ ಆನಂದನಿರೂಪಿಸಿದರು. ಸಮಾರಂಭದ ಕೊನೆಗೆ ಆಕರ್ಷಕನಜರ್‌ (ಗೌರವ) ಸಮರ್ಪಣೆ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next