Advertisement

ಶಿವಮೊಗ್ಗ: ಮತಗಟ್ಟೆ ಎದುರು ರಾಜಕೀಯ ಪಕ್ಷಗಳ ಘೋಷಣೆ

04:55 PM Sep 03, 2021 | Team Udayavani |

ಶಿವಮೊಗ್ಗ: ಭದ್ರಾವತಿ ನಗರಸಭೆ 29ನೇ ವಾರ್ಡ್ ಮತಗಟ್ಟೆ ಎದುರು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‍ ಮುಖಂಡರು, ಕಾರ್ಯಕರ್ತರು ಘೋಷಣೆ ಹಾಕಿದ ಪರಿಣಾಮ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಇಂದು ನಡೆಯಿತು.

Advertisement

ಜಯಶ್ರೀ ಸರ್ಕಲ್’ನಲ್ಲಿರುವ ಮತಗಟ್ಟೆ ಬಳಿ ಮೂರು ಪಕ್ಷದ ಕಾರ್ಯಕರ್ತರು ಘೋಷಣೆ ಕೂಗಿದ್ದರಿಂದ ಕೆಲಹೊತ್ತು ಗೊಂದಲ ನಿರ್ಮಾಣವಾಯಿತು. ಯಾವುದೆ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಂದೋಬಸ್ತ್ ಮಾಡಿದರು.

ಮೊಳಗಿದ ಜೈ ಶ್ರೀರಾಮ್ ಘೋಷಣೆ

ಬೂತ್ ಸಮೀಪ ಬಿಜೆಪಿ ಕಾರ್ಯಕರ್ತರು ಪಕ್ಷದ ಪರವಾಗಿ ಘೋಷಣೆ ಮೊಳಗಿಸಿದರು. ಅಲ್ಲದೆ ಜೈ ಶ್ರೀರಾಮ್ ಎಂದು ಕೂಗಿದರು. ಇದೇ ವೇಳೆ ಶಾಸಕ ಸಂಗಮೇಶ್ವರ್, ಪುತ್ರ ಬಸವೇಶ್ ಅವರು ಜಯಶ್ರೀ ಸರ್ಕಲ್ ಬಳಿಗೆ ಆಗಮಿಸಿದರು. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಘೋಷಣೆ ಆರಂಭಿಸಿದರು. ಮತ್ತೊಂದೆಡೆ ಜೆಡಿಎಸ್ ಕಾರ್ಯಕರ್ತರು ಕೂಡ ಘೋಷಣೆ ಶುರು ಮಾಡಿದರು.

ತಬ್ಬಿಬ್ಬಾದ ಪೊಲೀಸರು, ಜನರು

Advertisement

ಏಕಾಏಕಿ ಘೋಷಣೆಗಳು ಆರಂಭವಾಗುತ್ತಿದ್ದಂತೆ ಪೊಲೀಸರು ಮತ್ತು ಜನರು ತಬ್ಬಿಬ್ಬಾದರು. ಕೂಡಲೆ ಅಲರ್ಟ್ ಆದ ಪೊಲೀಸರು ಸರ್ಕಲ್ ಮಧ್ಯಕ್ಕೆ ಬಂದರು.

ಈ ಹಿಂದೆ ಕಬಡಿ ಪಂದ್ಯಾವಳಿ ಸಂದರ್ಭ ಘೋಷಣೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದರು. ಶಾಸಕ ಸಂಗಮೇಶ್ವರ್ ಅವರ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದೆ ಕಾರಣ ಇವತ್ತು ಘೋಷಣೆಗಳು ಆರಂಭವಾಗುತ್ತಿದ್ದಂತೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next