Advertisement
ಇದು ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಉದ್ಘಾಟನೆಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ಕಂಡುಬಂದ ನೋಟ. ಹೌದು.. ಆ ಹೂಗಳು, ಸಿಂಗಾರದ ನಗು ಹಾಗಿತ್ತು..! ಸೌಗಂಧದ ಸಂಭ್ರಮ ಜಗದ ಜಂಜಾಟಗಳನ್ನು ಮರೆಸುವಂತೆ ವೀಕ್ಷಕರ ಮನಸ್ಸನ್ನು ಮೆರೆಸುತ್ತಿತ್ತು..! ಎಲ್ಲರೂ ಆ ಹೂವಿನ ಲೋಕದಲ್ಲಿ ಮುಳುಗಿ ಹೋಗಿದ್ದರು. ಈ ಸಂತಸಕ್ಕೆ ಹೂಗಳನ್ನು ಸೃಷ್ಟಿಸಿದ ಪ್ರಕೃತಿಗೆ, ದೇವರಿಗೆ ನಾವು ವಂದನೆಗಳನ್ನು ಹೇಳಲೇಬೇಕು. ಚಿತ್ರ ವಿಚಿತ್ರ ಕಲಾತ್ಮಕ ರೀತಿಯಲ್ಲಿ ಹೂಗಳನ್ನು ಜೋಡಿಸಿದ ಕಲಾವಿದನಿಗೆ ಕೈ ಜೋಡಿಸಲೇ ಬೇಕು. ತರಕಾರಿಗಳ ಕೆತ್ತನೆ, ಕೃಷಿ ಉತ್ಪನ್ನಗಳಿಂದ ರಚಿಸಿದ ರಂಗೋಲಿ, ಬೋನ್ಸಾಯ್ ಗಿಡಗಳು, ಅಣಬೆ ಪ್ರಾತ್ಯಕ್ಷತೆ, ಮತ್ಸ್ಯ ಪ್ರದರ್ಶನ, ಸಹಸ್ರ ಸಹಸ್ರ ವಿವಿಧ ಜಾತಿಯ ಹೂ ಕುಂಡಗಳು, ತರಕಾರಿಗಳಿಂದ ರಚನೆಯಾದ ನವಿಲು, ಹೂಗಳಿಂದ ರಚನೆಯಾದ ಮಕ್ಕಳ ಆಕರ್ಷಣೆಯ ಗೊಂಬೆಗಳು ಮತ್ತು ಅಮರ್ ಜವಾನ್ ಆಕೃತಿ, ಮೇಕ್ ಇನ್ ಇಂಡಿಯಾ ಲಾಂಛನವಾದ ಸಿಂಹ ಹೀಗೆ ಹತ್ತು ಹಲವು ಪ್ರಾತ್ಯಕ್ಷಿಕೆಗಳು ಈ ಪ್ರದರ್ಶನದ ಶ್ರೀಮಂತಿಕೆಯನ್ನು ಹೆಚ್ಚಿಸಿದವು. ಪ್ರದರ್ಶನ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ರುಚಿಯಾದ ಊಟ, ತಿಂಡಿ ತಿನಿಸುಗಳು, ಕರಾವಳಿ ಭಾಗದ ಜನಪ್ರಿಯ ಪಾನೀಯ ನೀರಾ ಲಭ್ಯವಿತ್ತು. Advertisement
ಮನ ಸೆಳೆದ ಫಲಪುಷ್ಪಗಳ ಮಾಯಾಲೋಕ!
11:41 AM Jan 26, 2019 | |
Advertisement
Udayavani is now on Telegram. Click here to join our channel and stay updated with the latest news.