Advertisement

Shivamogga: ಪ್ರಾಯೋಗಿಕ ಸ್ಫೋಟ: ಇಬ್ಬರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌

05:35 PM Sep 25, 2024 | Esha Prasanna |

ಬೆಂಗಳೂರು: ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಐಸಿಸ್‌ ಉಗ್ರರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪ್ರಾಯೋಗಿಕ ಸ್ಫೋಟದ ವೇಳೆ ರಾಷ್ಟ್ರಧ್ವಜ ಸುಟ್ಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಬ್ಬರು ಶಂಕಿತರ ವಿರುದ್ಧ ಮಂಗಳವಾರ 3ನೇ ಪೂರಕ ಆರೋಪಪಟ್ಟಿ ಸಲ್ಲಿಸಿದೆ. ಈ ಮೂಲಕ ಇದೇ ಪ್ರಕರಣದಲ್ಲಿ 10 ಮಂದಿ ಶಂಕಿತರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

Advertisement

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಬ್ದುಲ್‌ ಮತೀನ್‌ ತಾಹಾ ಹಾಗೂ ಮುಸಾವೀರ್‌ ಹುಸೇನ್‌ ಶಾಜೀಬ್‌ ಇಡೀ ಪ್ರಕರಣದ ಸಂಚುಕೋರರು. ಈ ಇಬ್ಬರು 2024ರ ಮಾರ್ಚ್‌ 1ರಂದು ನಡೆದ ಬೆಂಗಳೂರಿನ ಕುಂದಲಹಳ್ಳಿ ಸಮೀಪದ ರಾಮೇಶ್ವರಂ ಕೆಫೆ ಸ್ಫೋಟದ ರೂವಾರಿಗಳು ಎಂದು ಎನ್‌ಐಎ ತಿಳಿಸಿದೆ.

ಇವರು ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ 2020ರಲ್ಲಿ ಐಸಿಸ್‌ ಪ್ರೇರಿತ ಅಲ್‌-ಹಿಂದ್‌ ಸಂಘಟನೆ ಸಂಬಂಧ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ಜತೆಗೆ ಮುಸ್ಲಿಂ ಸಮುದಾಯದ ಕೆಲವು ಯುವಕರನ್ನು ಪ್ರಚೋದಿಸಿ ಐಸಿಸ್‌/ಅಲ್‌ ಹಿಂದ್‌ ಸಂಘಟನೆಗಳಿಗೆ ಸೇರಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next