Advertisement

Landslide: ಆಗುಂಬೆ ಬಳಿಯ ಕಾರ್ ಬೈಲು ಗುಡ್ಡ ಕುಸಿತ!

07:49 PM Sep 04, 2024 | Esha Prasanna |

ತೀರ್ಥಹಳ್ಳಿ : ಭಾರಿ ಮಳೆಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಗುಡ್ಡ ಕುಸಿತ ಪ್ರಕರಣಗಳು ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವ ನಡುವೆ ಮತ್ತೊಂದು ಗುಡ್ಡ ಕುಸಿದಿದೆ.

Advertisement

ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ ಬೈಲು ಗುಡ್ಡ ಕುಸಿದಿದೆ. ಸೋಮವಾರ ರಾತ್ರಿ ಭಾರೀ ಶಬ್ದದಿಂದ ಗುಡ್ಡ ಕುಸಿದ ಬಗ್ಗೆ ಸ್ಥಳೀಯರು ಹೇಳಿದ್ದಾರೆ. ಸುತ್ತಮುತ್ತಲೂ ಗದ್ದೆ, ತೋಟ, ಹಾಗೂ ವಾಸದ ಮನೆ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

ತೀರ್ಥಹಳ್ಳಿ- ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಇರುವ ಬಿಳಚಿಕಟ್ಟೆಯಿಂದ ಗುಡ್ಡ ಕುಸಿತ ವೀಕ್ಷಿಸಬಹುದು. ಕಲ್ಲು ಬಂಡೆಯ ಮೇಲೆ ಇದ್ದ ಮಣ್ಣು, ಗಿಡ ಮರಗಳು ಅಂದಾಜು 50 ಅಡಿ ಕುಸಿದಿವೆ. ಸುತ್ತಮುತ್ತ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಅತಿಯಾದ ಮಳೆಯಿಂದ ಗುಡ್ಡ ಕುಸಿದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next