ಹಿರೇಕೆರೂರು: ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಬ್ಬಿಣಕಂಥಿಮಠದ ಸ್ವಾಮೀಜಿ ಗುರುವಾರ ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ.
ರಟ್ಟೀಹಳ್ಳಿ ಕಬ್ಬಿಣಕಂಥಿಮ ಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ಇಂದು ನಡೆದ ಬೆಳವಣಿಗೆಯಲ್ಲಿ ಸ್ವಾಮೀಜಿ ತನ್ನ ನಾಮಪತ್ರ ಹಿಂಪಡೆದು ಅಚ್ಚರಿ ಮೂಡಿಸಿದ್ದಾರೆ.
ರಾಘವೇಂದ್ರ ಭರವಸೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರತಿನಿಧಿಯಾಗಿ ಸಂಸದ, ಸಿಎಂ ಪುತ್ರ ರಾಘವೇಂದ್ರ ಅವರು ಸ್ವಾಮೀಜಿಯನ್ನು ಭೇಟಿಯಾಗಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಿದರು. ತಾಲೂಕಿನ ಜನರ ಆಶೋತ್ತರಗಳನ್ನ ಈಡೇರಿಸೋ ಭರವಸೆ ನೀಡಿದ ನಂತರ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.
ನಾಮಪತ್ರ ಹಿಂಪಡೆದ ನಂತರ ಮಾತನಾಡಿದ ಸ್ವಾಮೀಜಿ, ರಾಘವೇಂದ್ರ ಅವರು ಭರವಸೆ ನೀಡಿದ್ಧಾರೆ. ನಾಮಪತ್ರ ವಾಪಾಸ್ಸು ಪಡೆಯುವಂತೆ ಹಿರಿಯ ಮಠಾಧೀಶರ ಆದೇಶವೂ ಇದೆ ಎಂದರು.
ಸ್ವಾಮೀಜಿ ನಾಮಪತ್ರ ವಾಪಸ್ ಪಡೆಯೋ ವೇಳೆ ಸಿಎಂ ಪುತ್ರ ಸಂಸದ ರಾಘವೇಂದ್ರ ಮತ್ತು ಬಿಜೆಪಿ ಕಾರ್ಯಕರ್ತರು ಇದ್ದರು.