ಗುರುಮಠಕಲ್: ದೇಶದ ಹಿಂದೂಗಳನ್ನು ಒಗ್ಗೂಡಿಸಿ ಹಿಂದೂ ಮಹಾಸಾಮ್ರಾಜ್ಯವನ್ನು ನಿರ್ಮಿಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾ ರಾಜರಿಗೆ ಸಲ್ಲುತ್ತದೆ ಎಂದು ಖ್ಯಾತ ಮಕ್ಕಳ ತಜ್ಞ ಡಾ| ಕುಮಾರ ಅಂಗಡಿ ಹೇಳಿದರು.
ಪಟ್ಟಣದ ಗಾಂಧಿ ಮೈದಾನದಲ್ಲಿ ಮೇರಾ ಭಾರತ್ ಮಹಾನ್ ವೇದಿಕೆ ವತಿಯಿಂದ ಆಯೋಜಿಸಿದ ಶಿವಾಜಿ ಮಹಾರಾಜ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಇಂತಹ ಮಹಾನ್ ಪುರುಷರ ಕಥೆಗಳನ್ನು ಹೇಳಿ ಮಕ್ಕಳಲ್ಲಿ ದೇಶ ಭಕ್ತಿ ಮೂಡಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು. ಶಿವಾಜಿ ಮಹಾರಾಜರು ಛತ್ರಪತಿಯಾಗಿ ಮತ್ತು ಹಿಂದೂ ಸಾಮ್ರಾಜ್ಯ ಕಟ್ಟುವಲ್ಲಿ, ಸೈನ್ಯವಿಲ್ಲದೆ ಜನರಲ್ಲಿ ಸ್ವತಂತ್ಯದ ಕಿಚ್ಚು ಹಚ್ಚಿಸುವಲ್ಲಿ ಸೋಲನ್ನು ಸೋಲಿಸುವ ಧೀರತನ ರಾಜ್ಯದ ತ್ಯಾಗಕ್ಕೆ ಸಿದ್ಧರಾಗುವಂತೆ ಮಾಡುವಲ್ಲಿ ಶಿವಾಜಿ ಅವರ ತಾಯಿ ಪ್ರಮುಖ ಪಾತ್ರವಾಗಿದೆ ಎಂದು ನುಡಿದರು.
ಘರ್ಜನೆ ಮೌನವಾಗಿರಬೇಕು, ಘರ್ಜಿ ಸಿದರೆ ಸುನಾಮಿಯಂತೆ ವಿಜಯಶಾಲಿ ಯಾಗಬೇಕು, ಗುಲಾಮರಾ ಗುವುದಕ್ಕಿಂತ ರಾಜನಾಗಿ ಗರ್ವದಿಂದ ಬದುಕಬೇಕು ಎಂಬುದನ್ನು ಶಿವಾಜಿ ತೋರಿಸಿಕೊಟ್ಟಿದ್ದಾರೆ. ಶಿವಾಜಿ ಸಂಘತನಾತ್ಮಕ ಶೈಲಿ, ಸಾಮ್ರಾಜ್ಯದ ವಿಸ್ತಾರಣೆಯ ಕಲ್ಪನೆ ಮತ್ತು ರಾಜ್ಯಾಭೀಮಾನ ಹಾಗೂ ದೇಶ ಭಕ್ತಿ, ತ್ಯಾಗ, ಬಲಿದಾನಕ್ಕಾಗಿ ಸಿದ್ಧರಾಗುವಂತೆ ಸೈನ್ಯವನ್ನು ಕಟ್ಟಿದರು. ಮುಸ್ಲಿಂ ಕೋಟೆಯಲ್ಲಿ ಕೇಸರಿ ಧ್ವಜಗಳನ್ನು ಸ್ಥಾಪಿಸಿ ವಿಜಯಪಾತಕೆ ಹರಿಸಿ ಸನಾತನ ಧರ್ಮವನ್ನು ಸಂರಕ್ಷಿಸಿದರು ಎಂದು ವಿವರಿಸಿದರು.
ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಅಧ್ಯಕ್ಷತೆ ವಹಿಸಿದ್ದರು. ಲಿಂಗಪ್ಪ ತಾಂಡೂರಕಾರ್ ನಿರೂಪಿಸಿದರು. ವಿಜಯಕುಮಾರ ನಿರೇಟಿ ಸ್ವಾಗತಿಸಿದರು. ಎಸ್‌ವಿಪಿಯು ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಸಲ್ಲಿಸಿದರು. ಜ್ಞಾನೇಶ್ವರರೆಡ್ಡಿ ವಂದಿಸಿದರು. ಗುರುನಾಥ ತಲಾರಿ, ರಾಜಾರಾಮೇಶ ಗೌಡ, ವೀರಪ್ಪ ಪ್ಯಾಟಿ, ಜಿ.ತಮ್ಮಣ್ಣ, ಕೆ.ದೇವದಾಸ, ನರಸಿಂಹುಲು ನಿರೇಟಿ, ನಾಗೇಶ ಗದ್ದಗಿ, ಮಾಣಿಕಂಠ ರಾಠೊಡ್, ವಿಜಯಕುಮಾರ ಚಿಂಚನಸೂರ್, ಮಹೇಶ ಗೌಡ, ಪ್ರವೀಣ ಪಾಟೀಲ್, ಸಂಜುಕುಮಾರ ಚಂದಾಪುರ್, ಭಾಸ್ಕರರೆಡ್ಡಿ ಇದೂÉರ, ಶ್ರೀನಿವಾಸ ಯಾದವ, ಬಸವರಾಜ ಗೌಡ, ಉದಯಸಿಂಗ್, ಬಾಲಪ್ಪ ಪ್ಯಾಟಿ, ನರಸಿಮುಲು ಗಂಗನೋಳ ಇದ್ದರು.