Advertisement

ಪಾಲಿಕೆ ಎದುರಿನ ಕನ್ನಡ ಧ್ವಜ ತೆಗೆಯದಿದ್ದರೆ ಮನೆ ಮನೆಗೆ ಭಗವಾ ಧ್ವಜ: ಶಿವಸೇನೆ ಎಚ್ಚರಿಕೆ

10:14 PM Jan 04, 2021 | Team Udayavani |

ಬೆಳಗಾವಿ: ಮಹಾನಗರ ಪಾಲಿಕೆ ಎದುರು ಹಾರಾಡುತ್ತಿರುವ ಹಳದಿ-ಕೆಂಪು ಕನ್ನಡ ಧ್ವಜ ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಮನೆ ಮನೆಗೆ ಭಗವಾ ಧ್ವಜ ಹಚ್ಚಲಾಗುವುದು ಎಂದು ಶಿವಸೇನೆ ಎಚ್ಚರಿಕೆ ನೀಡಿದೆ.

Advertisement

ಇಲ್ಲಿಯ ಶಿವಸೇನೆ ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕನ್ನಡ ಧ್ವಜವನ್ನು ತೆರವುಗೊಳಿಸುವ ಬಗ್ಗೆ ಶಿವಸೇನೆ ಮುಖಂಡರು ನಿರ್ಣಯ ತೆಗೆದುಕೊಂಡರು.

ಪಾಲಿಕೆ ಎದುರು ಅನುಮತಿ ಇಲ್ಲದೇ ಅಳವಡಿಸಿರುವ ಕನ್ನಡ ಧ್ವಜ ಅನಧಿಕೃತವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಂಡು ಈ ಧ್ವಜವನ್ನು ತೆರವುಗೊಳಿಸಬೇಕು. ಜತೆಗೆ ಧ್ವಜದ ವಿರುದ್ಧ ಮಹಾರಾಷ್ಟç ಏಕೀಕರಣ ಸಮಿತಿ(ಎಂಇಎಸ್) ತೆಗೆದುಕೊಂಡಿರುವ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು.

ಶಿವಸೇನೆ ಜಿಲ್ಲಾಧ್ಯಕ್ಷ ಪ್ರಕಾಶ ಶಿರೋಳಕರ, ಸಂಪರ್ಕ ಪ್ರಮುಖ ಅರವಿಂದ ನಾಗನೂರಿ, ಪದಾಧಿಕಾರಿಗಳಾದ ಸಚಿನ್ ಗೋರಲೆ, ದಿಲೀಪ ಬೈಲೂರಕರ, ರಾಜಕುಮಾರ ಬೋಕಡೆ, ಪ್ರವೀಣ ತೇಜಮ್, ಬಸವಾನಿ ಕುರಂಗಿ, ರವೀಂದ್ರ ಜಾಧವ, ಪ್ರಕಾಶ ರಾವುತ್, ದತ್ತಾ ಜಾಧವ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next