ನವ ದೆಹಲಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರವಾಸಕ್ಕಾಗಿ ಅಸ್ಸಾಂಗೆ ಬರಲಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಸೇರಿದಂತೆ 40 ಕ್ಕೂ ಹೆಚ್ಚು ಬಂಡಾಯ ಶಿವಸೇನೆ ಶಾಸಕರು ಗುಜರಾತ್‌ನ ಸೂರತ್‌ನಿಂದ ಗುವಾಹಟಿಗೆ ತೆರಳಿ ಹೋಟೆಲ್ ನಲ್ಲಿ ಬೀಡುಬಿಟ್ಟಿದ್ದು, ವಿಶೇಷವೆಂದರೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಅವರು ನನಗೆ ಈ ಸುದ್ದಿ ತಿಳಿದಿಲ್ಲ ಎಂದಿದ್ದಾರೆ.
ಎ ಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶರ್ಮಾ, ಮಹಾರಾಷ್ಟ್ರದ ಶಾಸಕರೊಂದಿಗೆ ತಮ್ಮ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ರಾಷ್ಟ್ರಪತಿ ಚುನಾವಣೆ; ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
“ಅಸ್ಸಾಂನಲ್ಲಿ ಸಾಕಷ್ಟು ಉತ್ತಮ ಹೋಟೆಲ್‌ಗಳಿವೆ. ಯಾರು ಬೇಕಾದರೂ ಅಲ್ಲಿಗೆ ಬಂದು ತಂಗಬಹುದು. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಮಹಾರಾಷ್ಟ್ರದ ಶಾಸಕರು ಅಸ್ಸಾಂಗೆ ಬಂದಿದ್ದಾರೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ. ಶಾಸಕರು. ಬೇರೆ ರಾಜ್ಯಗಳಿಂದಲೂ ಅಸ್ಸಾಂಗೆ ಬರಬಹುದು, ಉದ್ಧವ್ ಠಾಕ್ರೆ ಕೂಡ ಬರಬಹುದು ಎಂದು ಹೇಳಿಕೆ ನೀಡಿದ್ದಾರೆ.