Advertisement
ಜಿಲ್ಲಾಧಿಕಾರಿ ಆದೇಶದಂತೆ ಮಂಗಳೂರಿನ ಪ್ರವಾಸೋದ್ಯಮ ಇಲಾಖೆ ಶಿಶಿಲ ಗ್ರಾ.ಪಂ.ಗೆ ಪತ್ರ ಬರೆದು ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರ, ಮೂಲ ಸೌಲಭ್ಯ ಪರಿಶೀ ಲಿಸಿ ಅವುಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಕೋರಿದೆ.
ಬೆಳ್ತಂಗಡಿ ತಾ|ನ ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವಸ್ಥಾನ ಮತ್ಸ್ಯತೀರ್ಥ ಕ್ಷೇತ್ರವಾಗಿದೆ. ಪೂರ್ಣ ಶಿಲಾಮಯ
ದೇವ ಸ್ಥಾನವಾಗಿದ್ದು, ಈ ಕ್ಷೇತ್ರ ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕೆ ಇಲಾಖೆಗಳಿಗೆ ಸಂಬಂಧಪಟ್ಟಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧಮೋತ್ಥಾನ ಟ್ರಸ್ಟ್ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೇವಾಲಯದ ಗರ್ಭಗುಡಿಯನ್ನು ಹಳೆಯ ಸಂಪ್ರದಾಯದಂತೆ ಜೀರ್ಣೋದ್ಧಾರಗೊಳಿಸಿದ್ದರು. ಕಪಿಲಾ ನದಿಯಲ್ಲಿರುವ ಮತ್ಸ್ಯಗಳು ಸಾವಿರಾರು ಪ್ರವಾಸಿಗರನ್ನು ನಿತ್ಯ ಆಕರ್ಷಿಸುತ್ತಿವೆ. ಕ್ಷೇತ್ರಕ್ಕೆ ಸರಕಾರವು ಮೂಲ ಸೌಕರ್ಯ ಒದಗಿಸಿದ್ದಲ್ಲಿ ಉತ್ತಮ ಪ್ರವಾಸಿ ಕೇಂದ್ರವಾಗಿ ರೂಪಿಸಬಹುದು ಎಂದು ತಿಳಿಸಲಾಗಿತ್ತು.
Related Articles
Advertisement
ಅಗತ್ಯ ಸೌಕರ್ಯಗಳುಮತ್ಸ್ಯತೀರ್ಥಗ್ಯಾಲರಿ ಮತ್ತು ಸ್ನಾನಘಟ್ಟ, ಸುಸಜ್ಜಿತ ಸಮುದಾಯ ಭವನ, ಅತಿಥಿಗೃಹ, ಶಾಶ್ವತ ಕುಡಿಯುವ ನೀರಿನ ಯೋಜನೆ, ಉದ್ಯಾನವನ,ಬಾಲವನ, ದೇವಳದ ರಥಬೀದಿಗೆ ಶಾಶ್ವತ ಬೆಳಕಿನ ವ್ಯವಸ್ಥೆ, ಪ್ರವಾಸೋದ್ಯಮ ಇಲಾಖೆಯಿಂದ ಉಪಾಹಾರ ಮಂದಿರ, ಅಂಗಡಿಕೋಣೆ ರಚನೆ, ಪ್ರವಾಸಿಗರಿಗೆ ಸ್ನಾನಗೃಹ ಮತ್ತು ಶೌಚಾಲಯ ವ್ಯವಸ್ಥೆ, ಒಳಾಂಗಣ, ಹೊರಾಂಗಣ ದುರಸ್ತಿ, ಶಾಶ್ವತ ಮೇಲ್ಛಾವಣಿ, ಕಪಿಲಾ ನದಿಗೆ ಸೇತುವೆ ಅಗತ್ಯವಿದೆ.