ಶಿರ್ವ : ಜಿಲ್ಲಾಡಳಿತ ಮತ್ತು ಸರಕಾರ ವೀಕೆಂಡ್ ಕರ್ಫ್ಯೂವಿಧಿಸಿರುವ ಹಿನ್ನೆಲೆಯಲ್ಲಿ ಇಂದು(ಶನಿವಾರ, ಸಪ್ಟೆಂಬರ್ 4) ಶಿರ್ವ ಪೇಟೆ, ಮೂಡುಬೆಳ್ಳೆ, ಪಡುಬೆಳ್ಳೆ , ಬಂಟಕಲ್ಲು, ಸೂಡ ಪರಿಸರದಲ್ಲಿ ಮಧ್ಯಾಹ್ನ 2 ಗಂಟೆಯ ಬಳಿಕ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೊಟೇಲು, ಬಾರ್ ಮತ್ತು ರೆಸ್ಟೋರೆಂಟ್ ಗಳು ಬಂದ್ ಆಗಿದ್ದು ಜಿಲ್ಲಾಡಳಿತದ ಆದೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ : 286 ಕೋಟಿ ವೆಚ್ಚದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ ಅಭಿವೃದ್ದಿ
ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿರ್ವ ಪೇಟೆಯಲ್ಲಿ ಅಗತ್ಯ ಸೇವೆಗಳಾದ ಹಾಲು, ತರಕಾರಿ, ಮೆಡಿಕಲ್, ಪೆಟ್ರೋಲ್ ಪಂಪ್, ಮೀನು ಮಾರುಕಟ್ಟೆ ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದಿದ್ದು ವ್ಯಾಪಾರ ವಹಿವಾಟು ಎಂದಿನಂತೆ ನಡೆದಿತ್ತು. ಕೆಲವು ಬಸ್ ಗಳು ಸಂಚರಿಸಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಆಟೋ ರಿಕ್ಷಾಗಳು, ವಾಹನಗಳ ಸಹಿತ ಮಧ್ಯಾಹ್ನದವರೆಗೆ ಎಂದಿನಂತೆ ಜನ ಸಂಚಾರವಿದ್ದು, ಮಾಮೂಲಿ ಜನ ಜೀವನವಿತ್ತು.
ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ಶಿರ್ವ ಗ್ರಾಮ ಪಂಚಾಯತ್ ನ ಪೌರ ಕಾರ್ಮಿಕರು ಎಂದಿನಂತೆ ಸ್ವಚ್ಚತೆಯ ಕಾರ್ಯ ನಿರ್ವಹಿಸುತ್ತಿದ್ದರು. ಗ್ರಾಮ ಪಂಚಾಯತ್ ಕಸ ವಿಲೇವಾರಿ ವಾಹನದಲ್ಲಿ ಕೋವಿಡ್ ಮಾರ್ಗಸೂಚಿಯ ಬಗ್ಗೆ ಮೈಕ್ ಮೂಲಕ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುತ್ತಾ ಬೆಳಗ್ಗಿನ ಹೊತ್ತು ವಿವಿಧೆಡೆ ತೆರಳಿ ಕಸ ತ್ಯಾಜ್ಯ ಸಂಗ್ರಹಿಸಿ ತಮ್ಮ ಪಾಲಿನ ಕರ್ತವ್ಯ ನಿಭಾಯಿಸಿದ್ದಾರೆ.
ಇದನ್ನೂ ಓದಿ : 7 ಗಂಟೆಯಲ್ಲಿ 101 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ: ಸರ್ಜನ್ ವಿರುದ್ಧ ತನಿಖೆಗೆ ಆದೇಶ