Advertisement
ಅವರು ನ. 11 ರಂದು ಶಿರ್ವ ಮಹಿಳಾ ಸೌಧದಲ್ಲಿ ನಡೆದ ಶಿರ್ವ ಗ್ರಾ.ಪಂ.ನ 2024-25ನೇ ಸಾಲಿನ ಪ್ರಥಮ ಹಂತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಆಯೋಗದ ಅನುದಾನದ ಬಳಕೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ನರೇಗಾ ಕೂಲಿಕಾರರ/ ಫಲಾನುಭವಿಗಳ ಹಕ್ಕುಗಳ ಉಲ್ಲಂಘನೆ ಹಾಗೂ ಮಾರ್ಗಸೂಚಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.
Related Articles
Advertisement
ಕೃಷಿಕರಿಗೆ ಅನುಕೂಲವಾಗುವಂತೆ ಕರಾವಳಿಯ ಭತ್ತದ ಕೃಷಿ ಕಾಮಗಾರಿಯನ್ನು ನರೇಗಾ ಯೋಜನೆಯಡಿ ಅಳವಡಿಸಿಕೊಳ್ಳಲು ಶಿಫಾರಸು ಮಾಡುವಂತೆ ಮಾಜಿ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ಹಾಗೂ ನರೇಗಾ ಯೋಜನೆ ಶೇ. 100 ಅನುಷ್ಠಾನಗೊಳಿಸುವಲ್ಲಿ ಗಾ.ಪಂ. ಸದಸ್ಯರು ಇಚ್ಛಾಶಕ್ತಿ ತೋರಿಸಿ ಜನರಿಗೆ ಯೋಜನೆಯ ಬಗ್ಗೆ ತಿಳುವಳಿಕೆ ನೀಡಬೇಕಾಗಿದೆ ಎಂದು ಮಾಜಿ ತಾ.ಪಂ. ಸದಸ್ಯ ದಿನೇಶ್ ಸುವರ್ಣ ಮತ್ತಿತರರು ತಮ್ಮ ಅಹವಾಲು ಮಂಡಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಗ್ರಾ.ಪಂ. ಸದಸ್ಯರು,ಗ್ರಾಮ ಸಂಪನ್ಮೂಲ ವ್ಯಕ್ತಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಫಲಾನುಭವಿಗಳು,ಕೂಲಿ ಕಾರ್ಮಿಕರು, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು, ಪಂಚಾಯತ್ ಸಿಬಂದಿ ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ಸ್ವಾಗತಿಸಿ, ನಿರೂಪಿಸಿದರು. ಗ್ರಾ.ಪಂಚಾಯತ್ ಕಾರ್ಯದರ್ಶಿ ಚಂದ್ರಮಣಿ ಉದ್ಯೋಗ ಚೀಟಿ ಯೋಜನೆಯ ಅನುಪಾಲನಾ ವರದಿ ಮಂಡಿಸಿದರು. ಗ್ರಾ.ಪಂ. ಸದಸ್ಯ ಕೆ.ಆರ್.ಪಾಟ್ಕರ್ ವಂದಿಸಿದರು.
ನ್ಯಾಯ ನೀಡುವ ಕೆಲಸ
ಗ್ರಾಮ ಸಭಾ ನಡಾವಳಿಯಲ್ಲಿ ಸದಸ್ಯರು ಫಲಾನುಭವಿಗಳನ್ನು ಆಯ್ಕೆಮಾಡಿ ಶಿಫಾರಸು ಮಾಡಿ ಗ್ರಾ.ಪಂ. ಅನುಷ್ಠಾನಗೊಳಿಸಿದ ಕಾಮಗಾರಿಗಳನ್ನು ಸಾಮಾಜಿಕ ಪರಿಶೋಧನೆ ನಡೆಸಲಾಗುತ್ತದೆ. ಸಾಮಾಜಿಕ ಪರಿಶೋಧನೆ ಸ್ವತಂತ್ರ ಸಂಸ್ಥೆಯಾಗಿದ್ದು, ನರೇಗಾ ಯೋಜನೆಯ ಗ್ರಾಮ ಸಭೆಯಲ್ಲಿ ಜನರು, ಜನಪ್ರತಿನಿಧಿಗಳು ಮುಕ್ತವಾಗಿ ಚರ್ಚೆ ನಡೆಸುವ ಅವಕಾಶವಿದ್ದು, ಪಾರದರ್ಶಕವಾಗಿ ಉತ್ತರದಾಯಿತ್ವ ಕೊಡುವ ಹೊಣೆಗಾರಿಕೆ ಇರುತ್ತದೆ. ಸಾಮಾಜಿಕ ಪರಿಶೋಧನೆ ಘಟಕದಿಂದ ಕೂಲಿಕಾರರ ಹಕ್ಕುಗಳ ಉಲ್ಲಂಘನೆ, ಅವಕಾಶ ವಂಚನೆ, ದೂರುಗಳು ಹಾಗೂ ಯೋಜನೆಯ ಅನುಷ್ಠಾನದಲ್ಲಿ ಮಾರ್ಗಸೂಚಿ ನಿಯಮಗಳ ಉಲ್ಲಂಘನೆಯಾದಲ್ಲಿ ನೇರವಾಗಿ ಒಂಬುಡ್ಸ್ಮನ್ಗೆ ಶಿಫಾರಸು ಮಾಡಲಾಗುತ್ತದೆ. ಒಂಬುಡ್ಸ್ಮನ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ನೋಟೀಸು ನೀಡಿ,ಕೂಲಿಕಾರರಿಗೆ/ಫಲಾನುಭವಿಗಳಿಗೆ ನ್ಯಾಯ ನೀಡುವ ಕೆಲಸ ಮಾಡುತ್ತದೆ -ಎಂ. ವಿ. ನಾಯಕ, ನರೇಗಾ ಒಂಬುಡ್ಸ್ ಪರ್ಸನ್, ಉಡುಪಿ. ಜಿ.ಪಂ.