Advertisement

ಶಿರ್ವ ಪಾಂಬೂರು: ಬೋನಿಗೆ ಬಿದ್ದ ಚಿರತೆ

10:59 AM Aug 07, 2018 | Team Udayavani |

ಶಿರ್ವ : ಕಳೆದ ಹಲವಾರು ದಿನಗಳಿಂದ ಪಾಂಬೂರು ಪರಿಸರದಲ್ಲಿ ಜನರನ್ನು, ಜಾನುವಾರುಗಳನ್ನು ಭಯಭೀತಗೊಳಿಸಿದ್ದ ಚಿರತೆಯೊಂದು ಮಂಗಳವಾರ ಬೆಳಿಗ್ಗೆ ಅರಣ್ಯಾಧಿಕಾರಿಗಳ ಬೋನಿಗೆ ಬಿದ್ದಿದೆ.  ಪಡುಬೆಳ್ಳೆ ಗ್ರಾಮದ ಪಾಂಬೂರು ನಿವಾಸಿ ಜಾರ್ಜ್ ಫ್ಲೊರಿನ್ ಸಲ್ಡಾನರ ಮನೆಯ ಹತ್ತಿರ ಇಡಲಾಗಿದ್ದ ಬೋನಿಗೆ ಚಿರತೆ ಬಿದ್ದಿದೆ. 

Advertisement

ಕಳೆದ ಕೆಲ ದಿನಗಳಿಂದ ಈ ಪರಿಸರದಲ್ಲಿ ಚಿರತೆ ಕಾಟ ಜೋರಾಗಿತ್ತು. ಸ್ಥಳೀಯ ನಿವಾಸಿ ಭಾಸ್ಕರ ಶೆಟ್ಟಿ ಅವರ ನಾಯಿಯನ್ನು ಮನೆಯವರ ಕಣ್ಣೆದುರೆ ಕೊಂಡೊಗಿದ್ದು ಸ್ಥಳಿಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಚಿರತೆ ಸಮಸ್ಯೆ ಬಗ್ಗೆ ಕೆಲ ದಿನಗಳ ಹಿಂದೆ ಉದಯವಾಣಿಯು ವಿಸ್ತೃತ ವರದಿ ಮಾಡಿತ್ತು.ಈ ಬಗ್ಗೆ ಎಚ್ಚೆತ್ತ ಅರಣ್ಯಾಧಿಕಾರಿಗಳು ಮೂರು ದಿನಗಳ ಹಿಂದೆ ಚಿರತೆ ಹಿಡಿಯಲು ಪಾಂಬೂರು ಪ್ರದೇಶದಲ್ಲಿ ಬೋನು ಇಟ್ಟಿದ್ದರು.
 
ಕಾರ್ಯಾಚರಣೆಯಲ್ಲಿ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ಉಪ ವಲಯ ಅಧಿಕಾರಿ ದಯನಂದ.ಕೆ, ಬೆಳ್ಳೆ ಅರಣ್ಯ ರಕ್ಷಕ ಗಣಪತಿ ನಾಯಕ್, ಅರಣ್ಯ ವೀಕ್ಷಕ ಪರಶುರಾಮ ಮೇಠಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next