Advertisement
ನೀರಿನ ರಭಸಕ್ಕೆ ಒಡೆದ ತಡೆಗೋಡೆಸಣ್ಣ ನೀರಾವರಿ ಇಲಾಖೆಯ ಉಸ್ತುವಾರಿ ಯಲ್ಲಿರುವ ಈ ಅಣೆಕಟ್ಟಿಗೆ ಸೋಮವಾರ ಅರ್ಧದವರೆಗೆ ಮರದ ಹಲಗೆ ಹಾಕಲಾಗಿತ್ತು. ಅಂದು ಸಂಜೆ ಸುರಿದ ಭಾರೀ ಮಳೆಗೆ ಪಶ್ಚಿಮ ಬದಿಯ ಹಲಗೆ ಕೊಚ್ಚಿ ಹೋಗಿ ನೀರು ರಭಸದಲ್ಲಿ ಹರಿದು ಪಶ್ಚಿಮ ಬದಿಯ ತಡೆಗೋಡೆಗೆ ಬಡಿಯುತ್ತಿತ್ತು.
Related Articles
Advertisement
ಅಕ್ರಮ ಮರಳುಗಾರಿಕೆ ಕಾರಣ?ಕಿಂಡಿ ಆಣೆಕಟ್ಟಿನ ಕೆಳಭಾಗದಲ್ಲಿ ನೀರಿನ ರಭಸಕ್ಕೆ ಭಾರೀ ಪ್ರಮಾಣದಲ್ಲಿ ಮರಳು ಸಂಗ್ರಹಗೊಳ್ಳುತ್ತಿದ್ದು, ಇದನ್ನು ದಂಧೆಕೋರರು ಯಾವುದೇ ಪರವಾನಿಗೆ ಇಲ್ಲದೆ ಮೇಲೆತ್ತುತ್ತಾರೆ. ಈ ವರ್ಷ ತಡೆಗೋಡೆಯ ತಳಪಾಯದವರೆಗೂ ಗುಂಡಿ ತೋಡಿ ಮರಳುಗಾರಿಕೆ ನಡೆಸಲಾಗಿತ್ತು ಎನ್ನಲಾಗಿದೆ. ಸೋಮವಾರ ಸುರಿದ ಭಾರೀ ಮಳೆಗೆ ನೀರು ಸಂಗ್ರಹಗೊಂಡು ಅಣೆಕಟ್ಟಿನ ಮೇಲಿನಿಂದ ರಭಸದಿಂದ ಸುರಿದ ಪರಿಣಾಮ ತಡೆಗೋಡೆಯ ತಳಭಾಗದ ಮಣ್ಣೂ ಕೊರೆದು ಹೋಗಿ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕೆಲವರು ರಾತ್ರಿ ಹಲಗೆ ಎತ್ತರಿಸಿ ನಡುವೆ ಕಲ್ಲು ಇಟ್ಟು ನೀರು ಹರಿದುಹೋಗುವಂತೆ ಮಾಡಿ ಮರಳು ತೆಗೆಯುತ್ತಾರೆ ಎಂಬ ದೂರೂ ಇದೆ. ಈ ಕಾರಣದಿಂದ ಕಳೆದ ಫೆಬ್ರವರಿಯಲ್ಲೇ ನೀರು ಖಾಲಿಯಾಗಿ ಸಮಸ್ಯೆಯಾಗಿತ್ತು.
ಪಾಪನಾಶಿನಿ ನದಿಯ ಇಕ್ಕೆಲಗಳಲ್ಲಿ ನೂರಾರು ಎಕರೆ ಕೃಷಿ ಭೂಮಿ ಇದೆ. ಕಿಂಡಿ ಅಣೆಕಟ್ಟು ರೈತರ ಜೀವನಾಡಿಯಾಗಿದ್ದು , ಸುಮಾರು 6-7 ಕಿ.ಮೀ. ದೂರದ ಕಾರ್ಕಳ ತಾಲೂಕಿನ ಸೂಡ ಗ್ರಾಮದವರೆಗೆ ನೀರು ತುಂಬುತ್ತಿತ್ತು. ರೈತರು ಕಬ್ಬು , ತೆಂಗು,ಕಂಗು, ಬಾಳೆ ಕೃಷಿ ,ಭತ್ತದ ಬೇಸಾಯ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿಕೂಲಿ ಕಾರ್ಮಿಕರ ಅಭಾವ ಹಾಗೂ ದುಬಾರಿ ಕೂಲಿಯಿಂದಾಗಿ ಬಹುತೇಕ ಕೃಷಿ ಭೂಮಿ ಹಡಿಲು ಬಿದ್ದಿದೆ. ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಆಣೆಕಟ್ಟಿಗೆ ಹಲಗೆ ಹಾಕುವುದರಿಂದ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಿ ಬಾವಿಗಳ ನೀರು 5-6 ಅಡಿ ಏರುತ್ತಿತ್ತು. ಹಲಗೆ ಹಾಕುವಲ್ಲಿ ವಿಳಂಬವಾದರೆ ಅಂತರ್ಜಲ ಕುಸಿದು ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು. ತುರ್ತು ಗಮನ ಹರಿಸಲಿ
ಅವೈಜ್ಞಾನಿಕ ರೀತಿಯಲ್ಲಿ ಕಿಂಡಿ ಆಣೆಕಟ್ಟು ನಿರ್ಮಾಣಗೊಂಡಿದ್ದು, ಆಣೆಕಟ್ಟಿನ ನಿರ್ವಹಣೆ ಕಷ್ಟಕರವಾಗಿದೆ. ಸ್ಥಳೀಯರಿಂದ ಮಾಹಿತಿ ಪಡೆಯದೆ ಸೈಡ್‌ವಾಲ್ ಕಟ್ಟಿದ್ದು,ಅಕ್ರಮ ಮರಳುಗಾರಿಕೆಯಿಂದ ಅದರ ತಳಪಾಯ ಕುಸಿದು ಹೋಗಿ ಕೃಷಿ ಜಮೀನು ಕೊರೆದುಕೊಂಡು ಹೋಗುವ ಭೀತಿಯಿದೆ. ಅಪಾಯ ಸಂಭವಿಸುವ ಮುನ್ನ ಸಂಬಂಧ ಪಟ್ಟ ಇಲಾಖೆ ತುರ್ತು ಗಮನ ಹರಿಸಲಿ.
-ಹರೀಶ್ ಶೆಟ್ಟಿ, ಬೆಳ್ಳೆ ಗ್ರಾ.ಪಂ.ಸದಸ್ಯರು. ದುರಸ್ತಿಗಾಗಿ ಕ್ರಮ
ಪ್ರದೇಶಕ್ಕೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಹೆಚ್ಚಿನ ಅನುದಾನಕ್ಕಾಗಿ ಮೇಲಧಿಕಾರಿಗಳಿಗೆ ವರದಿ ನೀಡಲಾಗುತ್ತದೆ. ಅನುದಾನ ಬಿಡುಗಡೆಯಾದ ಕೂಡಲೇ ಅಣೆಕಟ್ಟು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
-ಸುಧಾಕರ ಶೆಟ್ಟಿ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ ಉಡುಪಿ. -ಸತೀಶ್ಚಂದ್ರ ಶೆಟ್ಟಿ ಶಿರ್ವ