Advertisement

ಶಿರ್ವ: ನೂತನ ಬಸ್ಸು ತಂಗುದಾಣಕ್ಕೆ ಶಿಲಾನ್ಯಾಸ

12:15 PM Dec 19, 2021 | Team Udayavani |

ಶಿರ್ವ: ಇಲ್ಲಿನ ಮಂಚಕಲ್‌ ಪೇಟೆಯಲ್ಲಿ ಸುಮಾರು 25 ಲ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಿರ್ವ ಗಾಮ ಪಂಚಾಯತ್‌ ನೂತನ ಬಸ್ಸು ತಂಗುದಾಣಕ್ಕೆ ದಾನಿಗಳಾದ ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ದಂಪತಿ ಡಿ.19 ರಂದು ಶಿಲಾನ್ಯಾಸ ನೆರವೇರಿಸಿದರು.

Advertisement

ಇದರೊಂದಿಗೆ ಶಿರ್ವ-ಕುತ್ಯಾರು- ಮುದರಂಗಡಿ ರಸ್ತೆ ತಿರುವಿನ ಬಳಿ ಸಂತ ಮೇರಿ ಹಳೆವಿದ್ಯಾರ್ಥಿ ಸಂಘ ನಿರ್ಮಿಸಿದ ಸೈಮನ್‌ ಡಿ’ಸೋಜಾ ಸ್ಮಾರಕ ಹೈಮಾಸ್ಟ್‌ದೀಪವನ್ನು ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ ಉದ್ಘಾಟಿಸಿದರು. ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ವೇ|ಮೂ| ಸಂದೇಶ್‌ ಭಟ್‌ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಬಳಿಕ ಗ್ರಾ.ಪಂ.ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರ್ವ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ ಗ್ರಾ.ಪಂ.ನ ಅಭಿವೃದ್ಧಿಯಲ್ಲಿ ಸಹಕರಿಸಿದ ದಾನಿಗಳನ್ನು ಸಮ್ಮಾನಿಸಿ ಮಾತನಾಡಿ ಗ್ರಾಮದ ಅಭಿವೃದ್ಧಿ ಕೇವಲ ಗ್ರಾ.ಪಂ. ಅನುದಾನದಿಂದ ಸಾಧ್ಯವಿಲ್ಲ. ದಾನಿಗಳು ಸಹಕರಿಸಿದರೆ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಗಳಿಸಿದ ಸಂಪತ್ತನ್ನು ಸಮಾಜದ ಅಭಿವೃದ್ಧಿಗೆ ನೀಡುವ ದಾನಿಗಳ ಕಾರ್ಯ ಶ್ಲಾಘನೀಯ ಎಂದರು.

Advertisement

ಈ ಹಿಂದೆ 2018ರಲ್ಲಿ ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಯವರ ಅನುದಾನ 10 ಲ. ರೂ.ಮತ್ತು ಇತರ ಸಂಪನ್ಮೂಲಗಳಿಂದ ಬಸ್ಸು ತಂಗುದಾಣಕ್ಕೆ ಶಿಲಾನ್ಯಾಸ ನೆರವೇರಿದ್ದು, ಕಾರಣಾಂತರಗಳಿಂದ ಅನುದಾನ ಹಿಂದಕ್ಕೆ ಹೋಗಿತ್ತು. ಬಳಿಕ 2021ರಲ್ಲಿ ತೆಗೆದಿರಿಸಿದ ಗ್ರಾ.ಪಂ.ನ 20ಲ. ರೂ. ಅನುದಾನ ಸರಕಾರ ಗ್ರಾ.ಪಂ.ಗೆ ಅನುದಾನ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯ ನಡೆಯಲಿಲ್ಲ.ಇದೀಗ ದಾನಿ ಶಂಭು ಶೆಟ್ಟಿ ಮತ್ತು ಮಕ್ಕಳು ಶಿರ್ವ ಗ್ರಾಮಸ್ಥರ ಬಹುದಿನದ ಬೇಡಿಕೆಯನ್ನು ಈಡೇರಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಶಿರ್ವ ಬಸ್ಸು ತಂಗುದಾಣದ ದಾನಿ ಅಟ್ಟಿಂಜೆ ಶಂಭು ಶೆಟ್ಟಿ ದಂಪತಿ,ಶಿರ್ವ-ಕುತ್ಯಾರು- ಮುದರಂಗಡಿ ರಸ್ತೆ ತಿರುವಿನ ಬಳಿ ನಿರ್ಮಿಸಿದ ದಿ|ಕುಟ್ಟಿ ಶೆಟ್ಟಿ ಸ್ಮಾರಕ ಸರ್ಕಲ್‌ ಮತ್ತು ಸಂತ ಮೇರಿ ಹಳೆವಿದ್ಯಾರ್ಥಿ ಸಂಘ ನಿರ್ಮಿಸಿದ ಸೈಮನ್‌ ಡಿ’ಸೋಜಾ ಸ್ಮಾರಕ ಹೈಮಾಸ್ಟ್‌ದೀಪ, ಸೈಂಟ್‌ ಮೇರೀಸ್‌ಜಂಕ್ಷನ್‌ ಬಳಿ ನಿರ್ಮಿಸಿದ ರೋಟರಿ ಸರ್ಕಲ್‌ ಹಾಗೂ ಶಿರ್ವ ಸೊಸೈಟಿ ಬಳಿಯ ಲಯನ್ಸ್‌ ಬಸ್ಸು ತಂಗುದಾಣ ನಿರ್ಮಿಸಿದ ದಾನಿಗಳನ್ನು ಗ್ರಾ.ಪಂ. ವತಿಯಿಂದ ಸಮ್ಮಾನಿಸಲಾಯಿತು.

ದಾನಿಗಳ ಪರವಾಗಿ ಸಂತ ಮೇರಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮೆಲ್ವಿನ್‌ ಅರಾನ್ಹಾ, ಶಿರ್ವ ರೋಟರಿ ಅಧ್ಯಕ್ಷ ಜಯಕೃಷ್ಣ ಆಳ್ವ,ಶಿರ್ವ ಲಯನ್ಸ್‌ ಕಾರ್ಯದರ್ಶಿ ಚಾರ್ಲ್ಸ್‌ ಮೋಹನ್‌ ಮಾತನಾಡಿದರು. ದಿ|ಕುಟ್ಟಿ ಶೆಟ್ಟಿ ಕುಟುಂಬಸ್ಥರ ಪರವಾಗಿ ನವೀನ್‌ ಶೆಟ್ಟಿ ಗಂಗೆಜಾರ್‌,ದಾನಿ ಅಟ್ಟಿಂಜೆ ಶಂಭು ಶೆಟ್ಟಿ, ಪಂ. ಕಾರ್ಯದರ್ಶಿಮಂಗಳಾ ಜೆ.ವಿ. ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಅಟ್ಟಿಂಜೆ ಸುಧೀರ್‌ ಶೆಟ್ಟಿ, ಜಯಶ್ರೀ ಶೆಟ್ಟಿ, ಜಯಪಾಲ ಶೆಟ್ಟಿ, ಆನಂದ ಅರಾನ್ಹಾ, ಮನೋಹರ ಶೆಟ್ಟಿ ಮಂದಾರ,ಶಶಿಧರ ಹೆಗ್ಡೆ ನಡಿಬೆಟ್ಟು,ಮಾಜಿ ತಾ.ಪಂ. ಸದಸ್ಯದಿನೇಶ್‌ಸುವರ್ಣ,ಡಾ| ಗೋಮ್ಸ್‌,ಸಚ್ಚಿದಾನಂದ ಹೆಗ್ಡೆ, ವೀರೇಂದ್ರ ಶೆಟ್ಟಿ ರಮೇಶ್‌ ಬಂಗೇರಾ,ಮತ್ತಿತರರು ಉಪಸ್ಥಿತರಿದ್ದರು.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್‌ ಸ್ವಾಗತಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next