Advertisement

Shirva; ಸಾವಿನಲ್ಲೂಒಂದಾದ ದಂಪತಿ: 5 ಗಂಟೆಗಳ ಅಂತರ

08:56 PM Jul 29, 2024 | Team Udayavani |

ಶಿರ್ವ: ಒಂದೇ ದಿನ 5 ಗಂಟೆಗಳ ಅಂತರದಲ್ಲಿ ಪತಿ-ಪತ್ನಿ ಸಾವಿನಲ್ಲೂ ಒಂದಾದ ಘಟನೆ ನಡೆದಿದೆ.ಬೆಳ್ಳೆ ಗ್ರಾ. ಪಂ. ವ್ಯಾಪ್ತಿಯ ಎಡೇರುಗುತ್ತು ನಿವಾಸಿ ಸುಂದರ ಶೆಟ್ಟಿ (70)ಮತ್ತು ಅವರ ಪತ್ನಿ ಎಡೇರುಗುತ್ತು ವನಜಾ ಶೆಟ್ಟಿ(62) ಜು.29 ರಂದು ಒಂದೇ ದಿನ ನಿಧನ ಹೊಂದಿದರು.

Advertisement

ಸೋಮವಾರ ಬೆಳಗ್ಗೆ 9 ಗಂಟೆಗೆ ಸುಂದರ ಶೆಟ್ಟಿಯವರು ವಯೋಸಹಜ ಅನಾರೋಗ್ಯದಿಂದ ಎಡೇರುಗುತ್ತುವಿನಲ್ಲಿ ನಿಧನ ಹೊಂದಿದರು. ಅವರ ಪಾರ್ಥಿವ ಶರೀರವನ್ನು ಶಂಕರಪುರದ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಅವರ ಪತ್ನಿ ವನಜಾ ಶೆಟ್ಟಿಯವರೂ ನಿಧನ ಹೊಂದಿದ್ದು ಪತಿ-ಪತ್ನಿ ಸಾವಿನಲ್ಲೂ ಒಂದಾದರು.ಸುಂದರ ಶೆಟ್ಟಿಯವರು ಪಾಕ ತಜ್ಞರಾಗಿದ್ದು ಅಡುಗೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ಅವರಿಗೆ ಮಕ್ಕಳು ಇಲ್ಲದೇ ಇದ್ದು ಕುಟುಂಬಸ್ಥರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next