Advertisement

ಶಿರ್ವ: ಪಡಿತರ ಸಾಮಾಗ್ರಿವಿತರಣೆ ನಿರಾತಂಕ

10:26 PM Mar 30, 2020 | Sriram |

ಶಿರ್ವ: ಕೋವಿಡ್‌ 19 ಮುನ್ನೆ ಚ್ಚರಿಕೆ ಕ್ರಮದ ಲಾಕ್‌ಡೌನ್‌ನಿಂದಾಗಿ ಜನರಿಗೆ ತೊಂದರೆಯಾಗದಂತೆ ಶಿರ್ವ ಸ.ವ್ಯ. ಸಂ.ದ ಪ್ರಧಾನ ಕಚೇರಿ ಹಾಗೂ ಇತರ ಶಾಖೆಗಳಲ್ಲಿ ಆಹಾರ ಪಡಿತರ ವಿತರಣೆ ಸೋಮವಾರ ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ನಿರಾತಂಕವಾಗಿ ನಡೆಯುತ್ತಿದೆ.

Advertisement

ಜನರು ಸಾಮಾಜಿಕ ಅಂತರ ಕಾಯ್ದು ಕೊಂಡು ಸರದಿಯ ಸಾಲಿನಲ್ಲಿ ನಿಂತು ರೇಶನ್‌ ಪಡೆಯುತ್ತಿದ್ದಾರೆ. ಥಂಬ್‌ ಇಲ್ಲದೆ ಒಟಿಪಿ ಮೂಲಕ ಬಿಪಿಎಲ್‌ ಕಾರ್ಡು ದಾರರಿಗೆ ಪ್ರತೀ ಯೂನಿಟ್‌ಗೆ 7 ಕೆ.ಜಿ. ಯಂತೆ ಹಾಗೂ ಅಂತ್ಯೋದಯ ಅನ್ನಭಾಗ್ಯ ಯೋಜನೆಯ ಪಡಿತರ ಚೀಟಿದಾರರಿಗೆ 35 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ.

ಆಹಾರ ಇಲಾಖೆಯ ಉಪನಿರ್ದೆಶಕರ ನಿರ್ದೆಶನದಂತೆ ಎಪ್ರಿಲ್‌ ಮತ್ತು ಮೇ ತಿಂಗಳ ಪಡಿತರ ವಿತರಣೆಯನ್ನು ಮುಂಗ ಡವಾಗಿ ದಿನಕ್ಕೆ ಇಂತಿಷ್ಟು ಪಡಿತರ ಚೀಟಿ ದಾರರನ್ನು ಕರೆ ಮಾಡಿ ಕರೆಸಿ ಪಡಿತರ ವಿತರಣೆ ಸುಗಮವಾಗಿ ನಡೆಯುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಔಷಧ ಕೊರತೆ
ಜಿಲ್ಲಾಡಳಿತದ ಆದೇಶದಂತೆ ಶಿರ್ವ ಪೇಟೆಯಲ್ಲಿ ದಿನವಿಡೀ ಮೆಡಿಕಲ್‌ ಶಾಪ್‌ಗ್ಳು ತೆರೆದಿದ್ದರೂ, ಜನರಿಗೆ ಬೇಕಾಗುವ ಕೆಲವು ಅಗತ್ಯ ಔಷಧಗಳ ಕೊರತೆ ಉಂಟಾಗಿದೆ. ಸ್ಟಾಕ್‌ ಇಲ್ಲವೆಂದು ಕೆಲವು ಡಿಸ್ಟ್ರಿಬ್ಯೂಟರ್‌ಗಳು ಪೂರೈಕೆ ಬಂದ್‌ ಮಾಡಿದ್ದು ,ಆರ್ಡರ್‌ ಮಾಡಿದ ಔಷಧಿಗಳ ಪೂರೈಕೆಗೆ ವ್ಯವಸ್ಥೆಯಿಲ್ಲದೆ ಉಡುಪಿಗೆ ಹೋಗಿ ತರಬೇಕಾಗಿದೆ. ಬೇಡಿಕೆಗೆ ತಕ್ಕಂತೆ ಔಷಧಿ ಪೂರೈಕೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೊರತೆಯುಂಟಾಗಲಿದೆ ಎಂದು ಮೆಡಿಕಲ್‌ ಶಾಪ್‌ ಮಾಲಿಕರೋರ್ವರು ತಿಳಿಸಿದ್ದಾರೆ.

ಪೇಟೆಯಲ್ಲಿ ಬೆಳಿಗ್ಗೆ 7ರಿಂದ 11ರ ವರೆಗೆ ಜನರು ಅಗತ್ಯ ವಸ್ತು, ದಿನಸಿ, ತರಕಾರಿಗಳನ್ನು ಪಡೆದಿದ್ದಾರೆ.ದಿನಸಿ ಅಂಗಡಿಗಳಿಗೆ ಸಗಟು ವ್ಯಾಪಾರಿಗಳು ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದ್ದು, ಜನತೆಗೆ ಅಗತ್ಯ ಆಹಾರ ವಸ್ತುಗಳ ಪೂರೈಕೆಗೆ ತೊಂದರೆಯಾಗದು ಎಂದು ಶಿರ್ವದ ದಿನಸಿ ವ್ಯಾಪಾರಿ ಕೆ. ಶ್ರೀಪತಿ ಕಾಮತ್‌ ತಿಳಿಸಿದ್ದಾರೆ.

Advertisement

ಮೀನು ಮಾರುಕಟ್ಟೆ ಸಂಪೂರ್ಣ ಬಂದ್‌ ಆಗಿದ್ದು ಕೋಳಿ ಮಾಂಸದ ಅಂಗಡಿಗಳು ಬೆಳಗ್ಗೆ ತೆರೆದಿದ್ದು 11 ಗಂಟೆಯ ಬಳಿಕ ಮೆಡಿಕಲ್‌ ಹೊರತುಪಡಿಸಿ ಪೇಟೆ ಸಂಪೂರ್ಣ ಬಂದ್‌ ಆಗಿತ್ತು. ಪೆಟ್ರೋಲ್‌ ಪಂಪ್‌ ಮತ್ತು ಬ್ಯಾಂಕ್‌ಗಳು ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯ ನಿರ್ವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next