ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಮಂಗಳವಾರ ಭೀಕರ ಗುಡ್ಡ ಕುಸಿತ ನಡೆದಿತ್ತು. ಆ ಸಂದರ್ಭದಲ್ಲಿ ಅನೇಕ ವಾಹನಗಳು ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದವು.
Advertisement
ರಾಷ್ಟ್ರೀಯ ಹೆದ್ದಾರಿ ಮೇಲೆ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್ ಕೂಡ ಮಣ್ಣಿನಲ್ಲಿ ಕೊಚ್ಚಿ ಗಂಗಾವಳಿ ನದಿಯಲ್ಲಿ ತೇಲಿ ಹೋಗುವ ಮೂಲಕ ಸುತ್ತಲಿನ ಜನತೆಯಲ್ಲಿ ಆತಂಕವನ್ನುಂಟು ಮಾಡಿತ್ತು. ಈ ಟ್ಯಾಂಕರ್ ಗಂಗಾವಳಿ ನದಿಯಿಂದ ಸುಮಾರು 6 ಕಿ.ಮೀವರೆಗೂ ಹೋಗಿ ಸಗಡಗೇರಿ ಬಳಿ ಲಂಗರೂ ಹಾಕಿತ್ತು. ಆ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿತ್ತು. ತಕ್ಷಣ ಕಂಪನಿ ಪರಿಣಿತರು ಆಗಮಿಸಿ ಗ್ಯಾಸ್ ಸೋರಿಕೆ ತಡೆಗಟ್ಟಿದ್ದರು. ಹಾಗೆಯೇ ಎನ್‌ಡಿಆರ್‌ಎಫ್ ತಂಡ ಗ್ಯಾಸ್ ಟ್ಯಾಂಕರ್‌ನ್ನು ಹಗ್ಗದಿಂದ ಕಟ್ಟಿ ಮತ್ತೆ ಮುಂದೆ ತೇಲಿ ಹೋಗದಂತೆ ನಿಲ್ಲಿಸಿದ್ದರು.
Related Articles
Advertisement
ಗ್ಯಾಸ್ ಖಾಲಿಯಾದ ಬಳಿಕ ಟ್ಯಾಂಕರ್‌ನ್ನು ನೀರಿನಿಂದ ದಡದ ಮೇಲೆ ಕ್ರೇನ್ ಮೂಲಕ ಎಳೆದು ತರಲಾಯಿತು. ಈ ಮೂಲಕ ಎರಡು ದಿನ ಸಗಡಗೇರಿ ಉಳುವರೆ ಗ್ರಾಮದ ಜನರಲ್ಲಿದ್ದ ಭಯದ ವಾತಾವರಣ ತಿಳಿಗೊಳಿಸಿದರು. ಎರಡು ದಿನ ಮನೆ ಬಿಟ್ಟ ಜನರು ಕೊನೆಗೂ ಶುಕ್ರವಾರ ಸಂಜೆ ನಿಟ್ಟುಸಿರು ಬಿಟ್ಟು ತಮ್ಮ ಮನೆಗೆ ಸೇರಿಕೊಂಡರು. ಎರಡು ದಿನ ನಡೆದ ಗ್ಯಾಸ್ ಖಾಲಿ ಮಾಡುವ ಕಾರ್ಯಾಚರಣೆ ಯಶಸ್ವಿಯಾಗಿದೆ.
ಸ್ಥಳದಲ್ಲಿ ಕುಮಟಾ ಉಪ ವಿಭಾಗಾಧಿ ಕಾರಿ ಕಲ್ಯಾಣಿ ಕಾಂಬಳೆ, ತಾಪಂ ಇಒ ಸುನೀಲ್ ಎಂ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ವೈದ್ಯಕೀಯ ತಂಡದವರು ಇದ್ದರು.