Advertisement
ಶೀರೂರು ಹರಿಖಂಡಿಗೆ ಮೂಲದ ಡಾ| ಪ್ರಶಾಂತ್ ದಂಪತಿ ಕೋವಿಡ್ ಸೋಂಕು ಲಕ್ಷಣ ಕಂಡುಬಂದವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಕುವೈಟ್‌ನಲ್ಲಿಯೂ ಲಾಕ್‌ಡೌನ್ ಸೂಚನೆ ಸಿಕ್ಕಿದಾಗಲೇ ಈ ದಂಪತಿ ಇಬ್ಬರು ಮಕ್ಕಳನ್ನೂ ಊರಿಗೆ ಕಳುಹಿಸಿದ್ದರು. ಅದಾದ ಮರುದಿನವೇ ವಿಮಾನ ಸಂಚಾರಗಳೆಲ್ಲ ಬಂದ್ ಆಗಿದ್ದವು. ಇತ್ತೀಚಿನ ಕೆಲವು ದಿನಗಳಲ್ಲಿ ಕುವೈಟ್‌ನಲ್ಲಿ ಪ್ರತಿದಿನ 100ಕ್ಕೂ ಅಧಿಕ ಕೋವಿಡ್ 19 ವೈರಸ್ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆಯಂತೆ. ಈ ದೇಶದಲ್ಲಿ ಕಂಡು ಬಂದಿರುವ ಒಟ್ಟಾರೆ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ785 ಮಂದಿ ಭಾರತೀಯರು. ಲಾಕ್ ಡೌನ್ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ಮಾತ್ರ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ ಎನ್ನುತ್ತಾರೆ ಅವರು. ಸಂಕಷ್ಟದಲ್ಲಿ ಭಾರತೀಯರು
ಕುವೈಟ್‌ನಲ್ಲಿ ಸುಮಾರು 9 ಲಕ್ಷ ಮಂದಿ ಭಾರತೀಯರು ಇದ್ದಾರೆ. ಈ ಪೈಕಿ ಕೆಲವರು ಲಾಕ್‌ಡೌನ್‌ಗೆ ಮುನ್ನವೇ ಭಾರತಕ್ಕೆ ತೆರಳಿದ್ದರು. ಇನ್ನೂ ಬಹಳಷ್ಟು ಮಂದಿ ಅಲ್ಲಿ ಅತಂತ್ರರಾಗಿದ್ದಾರೆ. ಕೆಲವರಿಗೆ ಕೆಲಸವೂ ಇಲ್ಲ; ವೇತನವೂ ಸಿಗುತ್ತಿಲ್ಲ. ಸರಕಾರದಿಂದಲೇ ಮಧ್ಯಾಹ್ನ, ಸಂಜೆ ಹೊತ್ತು ಆಹಾರದ ಕಿಟ್‌ಗಳನ್ನು ನೀಡಲಾಗುತ್ತಿದೆ. ಮನೆ ಬಾಡಿಗೆಯಲ್ಲಿ ತುಸು ರಿಯಾಯಿತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Related Articles
ಲಾಕ್‌ಡೌನ್‌ಗೆ ಮುನ್ನ ಡಾ| ಪ್ರಶಾಂತ್ ಅವರ ಗೆಳೆಯರೊಬ್ಬರು ಊರಿಗೆ ತೆರಳಿದ್ದರು. ಅವರನ್ನು ಟ್ರ್ಯಾಕ್ ಮಾಡಿ ಪತ್ತೆಹಚ್ಚಿದ್ದ ಉಡುಪಿ ಜಿಲ್ಲಾಡಳಿತ ಕ್ವಾರಂಟೈನ್‌ಗೊಳಪಡಿಸಿತ್ತು. ಪ್ರತಿದಿನ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಬಂದು ಆರೋಗ್ಯ ವಿಚಾರಿಸುತ್ತಿದ್ದರು.
Advertisement
ಈ ನಿಟ್ಟಿನಲ್ಲಿ ಭಾರತ ಸರಕಾರ ಕೈಗೊಂಡಿರುವ ನಿರ್ಧಾರ ಪ್ರಶಂಸನೀಯ. ಅದೆಷ್ಟೋ ಆಧುನಿಕ ತಂತ್ರಜ್ಞಾನದ ವೈದ್ಯಕೀಯ ಉಪಕರಣಗಳು, ಸವಲತ್ತುಗಳು, ಮೂಲಸೌಕರ್ಯಗಳಿದ್ದರೂ ಇಂತಹ ಸಂದರ್ಭದಲ್ಲಿ ಸರಿಯಾದ ನಿರ್ಧಾರಗಳು ಅಗತ್ಯವಾಗಿರುತ್ತವೆ.
ಉಡುಪಿ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಧಾರಗಳನ್ನು ತೆಗೆದುಕೊಂಡಿರುವುದರಿಂದಲೇ ಪ್ರಕರಣಗಳನ್ನು 3ರ ಒಳಗೆ ನಿಲ್ಲಿಸಲು ಸಾಧ್ಯವಾಗಿದೆ. ಇಂತಹ ಮಾದರಿ ನಿರ್ಧಾರಗಳು ಎಲ್ಲ ಜಿಲ್ಲೆ, ರಾಜ್ಯ, ವಿವಿಧ ದೇಶಗಳಲ್ಲೂ ಅನುಷ್ಠಾನವಾಗಬೇಕು ಎನ್ನುತ್ತಾರೆ ಡಾ| ಪ್ರಶಾಂತ್.
ಉತ್ತಮ ನಿರ್ಧಾರ ಅತ್ಯಗತ್ಯಕೋವಿಡ್-19ನಂತಹ ಸಂದಿಗ್ಧ ಸ್ಥಿತಿಯಲ್ಲಿ ಆಡಳಿತ ವ್ಯವಸ್ಥೆ ತೆಗೆದುಕೊಳ್ಳುವ ನಿರ್ಧಾರಗಳು ನಿರ್ಣಾಯಕವಾಗಿರುತ್ತವೆ. ಭಾರತದಲ್ಲಿ ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಉತ್ತಮ ತಂತ್ರಜ್ಞಾನಗಳಿದ್ದರೂ ಮೂಲ ನಿರ್ಧಾರಗಳಲ್ಲಿ ವಿಫಲವಾಗುತ್ತಿರುವುದರಿಂದಲೇ ಸೋಂಕು ಮತ್ತಷ್ಟು ಉಲ್ಬಣಗೊಳ್ಳುತ್ತಿದೆ.
– ಡಾ| ಪ್ರಶಾಂತ್, ವೈದ್ಯರು