Advertisement

ಸ್ವತಂತ್ರ ಬಣ್ಣಗಾರಿಕೆಯೇ ಯಕ್ಷಗಾನಕ್ಕೆ  ಮುಖ್ಯ: ಜೋಶಿ

04:52 PM Nov 11, 2018 | |

ಶಿರಸಿ: ಸ್ವತಂತ್ರ ಬಣ್ಣಗಾರಿಕೆ ವೇಷಷಭೂಷಣ ಮಾಡಿಕೊಳ್ಳುವದು ಯಕ್ಷಗಾನಕ್ಕೆ ಘನತೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನಾಗರಾಜ್‌ ಜೋಶಿ ಬಣ್ಣಿಸಿದರು. ಅವರು ನಗರದ ನೆಮ್ಮದಿ ಕುಟೀರದಲ್ಲಿ ಬೆಂಗಳೂರಿನ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ಸಿದ್ದಾಪುರದ ಅನಂತ
ಯಕ್ಷಕಲಾ ಪ್ರತಿಷ್ಠಾನ ಆಯೋಜಿಸಿದ್ದ ಬಣ್ಣಗಾರಿಕೆ ವೇಷಭೂಷಣ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವತಃ ಮೇಕಪ್‌ ಮಾಡಿಕೊಳ್ಳುವ, ವೇಷಭೂಷಣ ಕಟ್ಟಿಕೊಳ್ಳುವ ಕಲೆ ಬೇರೆಡೆ ಇಲ್ಲ. ತಮ್ಮನ್ನು ತಾವೇ ತೊಡಗಿಕೊಳ್ಳುವದು ಯಾವುದೇ ಕಲೆಯಿಲ್ಲ. ಯಾವ ಕಲಾವಿದರಿಗೆ ಸ್ವತಃ ಮೇಕಪ್‌ ಮಾಡಿಕೊಳ್ಳಲು ಬಾರದೋ ಅವರು ಕಲಾವಿದರಲ್ಲ ಎಂಬ ಭಾವನೆ ಹಿಂದೆ ಇತ್ತು ಎಂದರು.

Advertisement

ಯಕ್ಷಗಾನ ಕಲಿಯುವ ವಿದ್ಯಾರ್ಥಿಗಳ ಮನಸ್ಥಿತಿ ಬದಲಾಗುತ್ತಿದೆ. ತಾಳ, ಸೂತ್ರ ಯಾವುದೂ ಬೇಡ. ಹದಿನೈದು ದಿನ ತರಬೇತಿ ಮುಗಿದ ಬಳಿಕ ದೊಡ್ಡ ವೇಷನೇ ಬೇಕು ಎಂಬಂತೆ ಇದೆ. ಇಂದು ಕಲಾವಿದರು ಹಾಗೂ ಪ್ರೇಕ್ಷಕರಿದ ಬದಲಾವಣೆ ಆಗಬೇಕಿದೆ. ಪ್ರೇಕ್ಷಕರಲ್ಲಿ ನವರಸಕ್ಕೆ ಪ್ರತಿಕ್ರಿಯೆ ಇಲ್ಲ. ಎಷ್ಟು ಎತ್ತರಕ್ಕೆ ಹಾರಿದ, ಚಾಲು ಕುಣಿತ ಹಾಗೂ ಎಷ್ಟು ಮಾಡಬಾರದ್ದನ್ನು ಮಾಡಿದನ್ನು ನೋಡಿ ಚಪ್ಪಾಳೆ ಹೊಡೆಯುತ್ತಾರೆ. ಇದೂ ತಪ್ಪಬೇಕು ಎಂದ ಅವರು, ಯಕ್ಷಗಾನ ಸರಿಯಾಗಿ ಉಳಿಸಿಕೊಳ್ಳುವದನ್ನು ಮಾಡಬೇಕು. ಪಾತ್ರಧಾರಿ ಬೇಡ, ಪಾತ್ರ ತಾವೇ ಆಗೋದು ಬೇಕು. ಅಭಿನಯ ಪ್ರಾಧಾನ್ಯ ಆಗದೇ ಕುಣಿತ ಮುಖ್ಯವಾಗಿದೆ. ಮೇಕಪ್‌ ಹಾಗೂ ವೇಷಭೂಷಣ ಸರಿಯಾದರೆ ಮಾತ್ರ ರಂಗಸ್ಥಳದಲ್ಲಿ ಗೆಲುವು ಸಾಧ್ಯ. ಮುಖ ವರ್ಣಿಕೆ, ವೇಷಭೂಣ ನಮಗೆ ಬೇಕಾದರೆ ಗೆಲುವು ಎಂದೂ ಹೇಳಿದರು. 

ಸಾಮಾಜಿಕ ಕಾರ್ಯಕರ್ತ ವೈಶಾಲಿ ವಿ.ಪಿ.ಹೆಗಡೆ, ಒಂದೇ ಚರಣ ಹಿಡಿದು ಆವರ್ತನ ಶೈಲಿ ಮಾಡುತ್ತಾರೆ. ಇದು ತೊಡಕು. ಪ್ರೇಕ್ಷಕರಿಗೂ ಕಿರಿಕಿರಿ ಆಗುತ್ತದೆ. ಕಲಾವಿದರು ಸೋಲರು, ಪ್ರೇಕ್ಷಕರು ಸೋಲುತ್ತಾರೆ. ಯಕ್ಷಗಾನವನ್ನು ಯಕ್ಷಗಾನವನ್ನಾಗಿ ಉಳಿಸಿಕೊಳ್ಳಬೇಕಾಗಿದೆ ಎಂದರು.

ಕಲಾವಿದ ವಿನಾಯಕ ಹೆಗಡೆ ಕಲಗದ್ದೆ, ಯಕ್ಷಗಾನದಲ್ಲಿ ವೇಷ ಕಟ್ಟಿಕೊಳ್ಳುವಾಗ ಒಂದಾದ ಮೇಲೆ ಒಂದು ಇಟ್ಟುಕೊಳ್ಳಬೇಕು. ನಮಗೆ ಇದರ ಅಭ್ಯಾಸ ಬೇಕು. ನಮಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಶಿಬಿರಗಳು ಬೇಕು. ಬಣ್ಣಗಾರಿಕೆ, ವೇಷ ಭೂಷಣ ಕಟ್ಟುವದು ಕಲಿಸಿಕೊಳ್ಳಬೇಕು. ಯಾವ ಪಾತ್ರಕ್ಕೆ ಯಾವ ಬಣ್ಣ, ಮುದ್ರೆ, ನಾಮ ಮಾದರಿ ಬೇಕು. ಸ್ವತಂತ್ರ ಕಲ್ಪನೆ ಕಲಾವಿದರಿಗೆ ಇರಬೇಕು ಎಂದರು.

ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಸಿದ್ದಾಪುರದಲ್ಲಿ ನವೆಂಬರ್‌ ಕೊನೆಯ ಮೂರು ದಿನ ತರಬೇತಿ ನಡೆಯಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸವ್ಯಸಾಚಿ ಕಲಾವಿದ ಅಶೋಕ ಭಟ್ಟ, ವಿನಾಯಕ ಹೆಗಡೆ, ನಾಗೇಂದ್ರ ಭಟ್ಟ ಮೂರೂರು, ವೆಂಕಟೇಶ ಬೊಗ್ರಿಮಕ್ಕಿ ಪಾಲ್ಗೊಂಡಿದ್ದರು. ತರಬೇತಿ ಶಿಬಿರಕ್ಕೆ ವಿಶ್ವಶಾಂತಿ ಸೇವಾ ಟ್ರಸ್ಟ ಕರ್ನಾಟಕ ಹಾಗೂ ಶಬರ ಸಂಸ್ಥೆ ಸಹಕಾರ ನೀಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next