ಶಿರಸಿ: ವಿದೇಶಿ ಅಡಿಕೆಯ ಆಮದಿನ ನಿರ್ಬಂಧದ ನಡುವೆ ಚಾಲಿ ಹಾಗೂ ಕೆಂಪಡಿಕೆ ದರದಲ್ಲಿ ಭಾರಿ ಏರಿಕೆ ಕಂಡಿದೆ.
ಶಿರಸಿಯ ಮಾರುಕಟ್ಟೆಯಲ್ಲಿ ಕಳೆದ ಮೂತ್ನಾಲ್ಕು ದಿನಗಳಿಂದ ಚಾಲಿ ಹಾಗೂ ಕೆಂಪಡಿಕೆ ದರ 42 ಸಾವಿರ ಗರಿಷ್ಠ ಮೊತ್ತದಿಂದ ಶುಕ್ರವಾರದ ಮಾರುಕಟ್ಟೆಗೆ 51 ಸಾವಿರ ರೂಗೆ ತಲುಪಿದೆ.
ಅಡಕೆ ವರ್ತಕರಿಗೂ ನಿರೀಕ್ಷೆ ಇದ್ದ ದರವಾದರೂ ಶ್ರಾವಣದ ಆರಂಭದಲ್ಲಿ ಸ್ಥಿರವಾಗಿತ್ತು. ಒಂದೆರಡು ದಿನ ಕುಸಿತ ಕಂಡು ನಿಧಾನ ಚೇತರಿಕೆ ಕಂಡಿತು. ಈ ವಾರ 45, 46 ಸಾವಿರದಿಂದ ಕಳೆದ ಎರಡು ದಿನಗಳಿಂದ 49 ಸಾವಿರ ಕಂಡಿತು. ಶುಕ್ರವಾರ ಕೆಂಪಡಿಕೆಗೆ ಗರಿಷ್ಠ 51509 ರೂ.ಕಂಡಿದ್ದು, 48,992 ಸರಾಸರಿ ದರವಾಗಿದೆ.
ಇದನ್ನೂ ಓದಿ:ನಾವು ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದವರು,ಗಣೇಶ ಹಬ್ಬ ಮಾಡಿಯೇ ಮಾಡುತ್ತೇವೆ: ಈಶ್ವರಪ್ಪ
ಈ ನಡುವೆ ಚಾಲಿ ಕನಿಷ್ಠ 41 ಸಾವಿರದಿಂದ 42,899 ರೂ. ದಾಖಲಾಗಿದೆ. ಎರಡೂ ಅಡಿಕೆ ಏರಿಕೆ ಆಗಿದೆ. ಚಾಲಿ ಅಡಿಕೆಗೆ 45 ಸಾವಿರ ದಾಟುವ ನಿರೀಕ್ಷೆ ಇದೆ. ಕೆಂಪಡಿಕೆ 55 ಸಾವಿರ ರೂ. ತಲುಪುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ, ಈ ದರದಲ್ಲಿ ಯಾವ ದಿನವೂ ಏರಿಳಿತವಾಗಬಹುದು. ಈವರೆಗಿನ ಮಾರುಕಟ್ಟೆ ಅದನ್ನೇ ಪ್ರತಿಪಾದಿಸಿದೆ ಎಂಬುದೂ ಸುಳ್ಳಲ್ಲ.